ಬೆಳ್ತಂಗಡಿ: 1961ರ ಬಳಿಕ ನಾಡುಕಂಡ ಭೀಕರ ಪ್ರವಾಹ ಎದುರಾಗಿದೆ. ದುರಂತಕ್ಕೆ ಕಾರಣ ಹಲವಾರು. ಆದರೆ ಮಲೆನಾಡಲ್ಲಿ ಇರುವವರು ತಾವು ಮಾಡದೆ ತಪ್ಪಿಗೆ ಹಾನಿ ಎದುರಿಸುವಂತಾಗಿದೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಇಂದು ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವು ನೀಡಿದರು.
ಬೆಳ್ತಂಗಡಿ ಪ್ರದೇಶದಲ್ಲಿ ಸಾಕಷ್ಟು ಹಾನಿ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬೇರೆಯವರ ಮನೆಯಲ್ಲಿ ಆಶ್ರಯ ಪಡೆದು ಅವರ ಬದುಕನ್ನು ಕಂಡಾಗ ನೋವು, ದುಖಃವಾಗುತ್ತದೆ. ಇಂತಹಾ ಸಂದರ್ಭಗಳಲ್ಲಿ ಸಾಂತ್ವಾನ ಹಾಗು ಕೈಲಾದ ಮಟ್ಟದಲ್ಲಿ ಸಹಾಯ ನೀಡಬೇಕಿದೆ. ಈ ನಿಟ್ಟಿನಲ್ಲಿ ಮಠದಿಂದ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಭಕ್ತರ ಸ್ಥಿತಿ ನೋಡಿ ಹಾನಿ ತುಂಬಿಕೊಡುವ ಕೆಲಸ ಮಾಡಬೇಕಿದೆ ಎಂದು ಸ್ವಾಮೀಜಿಗಳು ಹೇಳಿದರು.
ಈ ಕಾರ್ಯದಲ್ಲಿ ಶ್ರೀಮಠದ ಆದಿಚುಂಚನ ಗಿರಿ ಮಠದಿ ಬೆಳ್ತಂಗಡಿ ಪುತ್ತೂರು, ಸುಳ್ಯ, ವಿಟ್ಲ ಈ ಭಾಗದ ಭಕ್ತರು ಕೈಜೋಡಿಸುವು ಅವಶ್ಯ. ಪ್ರತಿ ಜಾಗಕ್ಕೂ ಭೇಟಿ ನೀಡಿದ್ದೇವೆ. ಮುಖ್ಯವಾಗಿ ಸರಕಾರ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಆದಿಚುಂಚನಗಿರಿ ಸ್ವಾಮೀಜಿಗಳು ಹೇಳಿದರು.
ಸರಕಾರ ತಮ್ಮ ನಿರ್ಧಾರ ಪ್ರಕಟಿಸಿದೆ. ಈಗಿರುವ ಅನಾಹುತಗಳಿಗೆ ತಲುಪಬೇಕಾದ ಸವಲತ್ತು ಸರಕಾರದಿಂದ ತಲುಪುವ ಭರವಸೆ ನಮಗಿದೆ. ರಾಜ್ಯ ಸರಕಾರ ಮನೆ ಕಟ್ಟುವ ಭರವಸೆ ನೀಡಿದೆ.
ಮಕ್ಕಳಿಗೆ ಮಠದಿಂದ ಉಚಿತ ಶಿಕ್ಷಣ
ತೊಂದರೆಗೀಡಾದ ಕುಟುಂಬದ ಮಕ್ಕಳಿಗೆ ಪೂರ್ಣ ವಿದ್ಯಾಭ್ಯಾಸ ಉಚಿತ ನೀಡಲಿದೆ. ಬಟ್ಟೆ ಬರೆ ಏನೆ ಸಮಸ್ಯೆ ಇದ್ದರು ಮಂಗಳೂರು ಶಾಖಾ ಮಠಕ್ಕೆ ಮಾಹಿತಿ ನೀಡಿದರೆ ಸಂಪೂರ್ಣವಾಗಿ ಸವಲತ್ತು ಒದಗಿಸಲಿದೆ. ತತ್‍ಕ್ಷಣ ಪರಿಹಾರಕ್ಕಾಗಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರದಂತೆ ಒದಗಿಸಿದ್ದೇವೆ ನಾವು ಆಯಾಯ ಭಾಗಕ್ಕೆ ಹೋದಲ್ಲಿ ವಾಸ್ತವಕ್ಕೆ ಗೋಚರವಾದಂತೆ ಅಲ್ಲೆಲ್ಲ ಆರ್ಥಿಕ ಸಹಾಯ ಒದಗಿಸಿದ್ದೇವೆ ಎಂದರು.
ಕಾವೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಜತೆಗಿದ್ದರು.