Advertisement

ಕಳ್ಳರಿಂದ ಗ್ರಾಮ ಕಾಯಲು ಮನೆಯ ಮಹಡಿ ಏರಿ ಕುಳಿತ ಅಡಿಬಟ್ಟಿ ಯುವಕರು!

04:27 PM Aug 20, 2020 | sudhir |

ಗೋಕಾಕ: ಘಟಪ್ರಭಾ ನದಿಯ ಪ್ರವಾಹದ ಕರಾಳ ಛಾಯೆಯಿಂದ ಕಂಗೆಟ್ಟಿದ ಗೋಕಾಕ ತಾಲೂಕಿನ ಜನತೆ ಬುಧವಾರದಂದು
ನಿಟ್ಟುಸಿರು ಬಿಟ್ಟಿದ್ದಾರೆ. ಗಡಿಭಾಗದ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ಪ್ರವಾಹದಲ್ಲಿ
ಇಳಿಮುಖವಾಗಿ ಸಂತ್ರಸ್ತರಲ್ಲಿ ತುಸು ನೆಮ್ಮದಿ ಮೂಡಿದೆ.

Advertisement

ನಗರದ ಉಪ್ಪಾರ ಗಲ್ಲಿ, ಕುಂಬಾರ ಗಲ್ಲಿ, ಹಾಳಬಾಗ ಗಲ್ಲಿ, ಹಳೆಯ ದನದ ಪೇಠೆ, ಮಟನ್‌ ಮಾರ್ಕೆಟ್‌, ದಾಳಂಬರಿ ತೋಟಗಳಿಗೆ ನುಗ್ಗಿದ್ದ ನೀರು ಸುಮಾರು 100 ಅಡಿ ಹಿಂದೆ ಸರಿದಿದೆ. ಅದೇ ರೀತಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡಾ ನೀರು ಕಡಿಮೆಯಾಗಿದೆ.

ಗ್ರಾಮ ಕಾಯಲು ಮಹಡಿ ಮೇಲೆ ಯುವಕರು: ಪ್ರವಾಹದ ಹಿನ್ನೆಲೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ ಎಂಬ ಭಯದಿಂದ ಸ್ವತ: ಕೆಲ ಗ್ರಾಮಸ್ಥರೇ ಗ್ರಾಮವನ್ನು ರಕ್ಷಿಸಲು ಕಟ್ಟಡದ ಟೇರಸ್‌ ಮೇಲೆ ರಾತ್ರಿಯಿಡಿ ಕುಳಿತು ಕಾವಲು
ಕಾಯ್ದಿದ್ದಾರೆ. ಪ್ರತಿ ಬಾರಿ ಪ್ರವಾಹ ಬಂದಾಗ ತಾಲೂಕಿನ ಅಡಿಬಟ್ಟಿ ಗ್ರಾಮ ನಡುಗಡ್ಡೆಯಾಗುತ್ತಿತ್ತು. ಅದರಂತೆ ಈ ಬಾರಿಯು ನೀರು ಬಂದಾಗ ಗ್ರಾಮಸ್ಥರೆಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಅದರಲ್ಲಿ 9 ಯುವಕರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಇವರು ಪ್ರವಾಹದಲ್ಲಿ ಸಿಲುಕಿಕೊಂಡವರಲ್ಲ. ಗ್ರಾಮದ ಸುತ್ತು ನೀರು ತುಂಬಿದ್ದು, ಪ್ರವಾಹದಿಂದಾಗಿ ಗ್ರಾಮಸ್ಥರೆಲ್ಲರೂ ಸುರಕ್ಷಿತ
ಸ್ಥಳಕ್ಕೆ ತೆರಳಿದ್ದರಿಂದ ಕಳ್ಳರು ಗ್ರಾಮಕ್ಕೆ ನುಗ್ಗುತ್ತಾರೆ ಎಂಬ ಭಯದಿಂದ ಗ್ರಾಮದ ಸುರಕ್ಷತೆಗಾಗಿ ಕಟ್ಟಡವೊಂದರ ಟೇರಸ್‌
ಮೇಲೆ ರಾತ್ರಿಯಿಡಿ ಕುಳಿತುಗೊಂಡಿದ್ದಾರೆ.

ಇವತ್ತು ಡ್ರೋಣ ಕ್ಯಾಮೇರಾದಲ್ಲಿ ಅವರು ಸೆರೆಯಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹೇಳಿದಾಗ ಅವರೇ ಪ್ರವಾಹದ
ನೀರು ಕೊಂಚ ಕಡಿಮೆಯಾದಾಗ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next