Advertisement

ಅಕ್ಟೋಬರ್‌ 5ಕ್ಕೆ ಆದಿ ಪುರಾಣ

11:54 AM Sep 19, 2018 | |

ತೆಲುಗಿನ “ಗೀತಾ ಗೋವಿಂದಂ’ ಚಿತ್ರ ಬಿಡುಗಡೆಗೂ ಮುನ್ನ ಆ ಚಿತ್ರದ ಒಂದು ದೃಶ್ಯ ಹೊರಗೆ ಹರಿದಾಡಿ, ಚಿತ್ರ ಜೋರು ಸುದ್ದಿ ಮಾಡಿತು. ಅಷ್ಟೇ ಅಲ್ಲ, ಅದಕ್ಕೂ ಹಿಂದೆ ತೆರೆಕಂಡ “ಅರ್ಜುನ್‌ ರೆಡ್ಡಿ’ ಮತ್ತು “ಆರ್‌ಎಕ್ಸ್‌ 100′ ಚಿತ್ರಗಳಲ್ಲೂ ಅಂಥದ್ದೊಂದು ಸುದ್ದಿಗೆ ಕಾರಣವಾಗುವಂತಹ ದೃಶ್ಯಗಳಿದ್ದವು. ಇಲ್ಲಿ ಸುದ್ದಿಗೆ ಕಾರಣವಾದ ಅಂಶಗಳೆಂದರೆ, ಅದು ಚುಂಬಕ ದೃಶ್ಯಗಳು.

Advertisement

ತೆಲುಗಿನಲ್ಲಷ್ಟೇ ಅಲ್ಲ, ಕನ್ನಡದಲ್ಲೂ ಅಂಥದ್ದೊಂದು ಸುದ್ದಿಗೆ ಕಾರಣವಾಗಿರುವ ಚಿತ್ರಗಳಿವೆ. ಇತ್ತೀಚೆಗಷ್ಟೇ “ಭೈರವಗೀತ’ ಚಿತ್ರದ ಫ‌ಸ್ಟ್‌ಲುಕ್‌ ಕೂಡ ಅಂಥದ್ದೊಂದು ಸುದ್ದಿ ಮಾಡಿತು. ಆ ಸಾಲಿಗೆ ಈಗ ಹೊಸಬರ “ಆದಿಪುರಾಣ’ ಚಿತ್ರವೂ ಸೇರಿದೆ. ಹೌದು, ಮೋಹನ್‌ ಕಾಮಾಕ್ಷಿ ನಿರ್ದೇಶನದ “ಆದಿಪುರಾಣ’ ಚಿತ್ರದ ಪೋಸ್ಟರ್‌ವೊಂದು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಈಗಾಗಲೇ ಚಿತ್ರ ಬಿಡುಗಡೆ ಸಜ್ಜಾಗಿರುವ “ಆದಿ ಪುರಾಣ’ ಅಕ್ಟೋಬರ್‌ 5ರಂದು ರಾಜ್ಯಾದ್ಯಂತೆ ರಿಲೀಸ್‌ ಆಗುತ್ತಿದೆ. ಚಿತ್ರದಲ್ಲಿ ನಾಯಕ ಶಶಾಂಕ್‌, ನಾಯಕಿಯನ್ನು ಚುಂಬಿಸುವ ಪೋಸ್ಟರ್‌ನಿಂದಾಗಿ “ಆದಿಪುರಾಣ’ ಸದ್ಯಕ್ಕೆ ಸುದ್ದಿಯಾಗಿದೆ. ಕೇವಲ ಆಕರ್ಷಣೆಗಾಗಿ ಈ ಪೋಸ್ಟರ್‌ ಹರಿಬಿಡಲಾಗಿದೆಯೋ ಅಥವಾ ಚಿತ್ರದಲ್ಲೂ ಚುಂಬಿಸುವ ದೃಶ್ಯವಿದೆಯೋ ಎಂಬ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕ ಮೋಹನ್‌ ಕಾಮಾಕ್ಷಿ,

“ಕಥೆಗೆ ತಕ್ಕಂತೆಯೇ ಮೊದಲು ಫೋಟೋಶೂಟ್‌ ಮಾಡಲಾಗಿತ್ತು. ವಿನಾಕಾರಣ ಸುದ್ದಿಗಾಗಿ ಆ ಫೋಟೋ ಹರಿಬಿಟ್ಟಿಲ್ಲ. ಚಿತ್ರದ ದೃಶ್ಯದಲ್ಲೂ ಅದು ಇದೆ. ಹಾಗಂತ ಅಲ್ಲಿ ಅಸಹ್ಯ ಹುಟ್ಟಿಸುವಂಥದ್ದೇನೂ ಇಲ್ಲ. ಕಥೆಗೆ ಪೂರಕವಾದ ದೃಶ್ಯ ಅಲ್ಲಿದೆ. ವಿನಾಕಾರಣ, ಸುದ್ದಿಗಾಗಿ ಚಿತ್ರದ ಪೋಸ್ಟರ್‌ ಹರಿಬಿಟ್ಟಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ. ಅಂದಹಾಗೆ, ಈ ಚಿತ್ರವನ್ನು ಶಮಂತ್‌ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next