Advertisement

ಉನ್ನತ ಗುರಿಗೆ ಮಾರ್ಗದರ್ಶನ ಅವಶ್ಯ

11:45 AM May 11, 2019 | Team Udayavani |

ರಾಮನಗರ: ಜೀವನದಲ್ಲಿ ಉನ್ನತ ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅವಶ್ಯವಿದೆ ಎಂದು ವಾಗ್ಮಿ ಪ್ರೊ.ಕೃಷ್ಣೇಗೌಡ ಹೇಳಿದರು.

Advertisement

ನಗರದ ಹೊರವಲಯದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ರಾಮನಗರ ಶಾಖೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 22ನೇ ಮಹಿಳಾ ಜಾಗೃತಿ ಶಿಬಿರದ ಸಮಾರೋಪದಲ್ಲಿ ಕುರಿತು ಮಾತನಾಡಿದರು.

ಜೀವನದಲ್ಲಿ ಚಂದವೇ ಸಾಧನೆಯಾಗುವುದಿಲ್ಲ. ಸಾಕಷ್ಟು ಬಾರಿ ಬಾಹ್ಯ ಸೌದರ್ಯಕ್ಕೆ ಮರಳಾಗು ತ್ತೇವೆ. ವಿಶ್ವದ ಎಲ್ಲ ಸಾಧಕರು ಸೌಂದರ್ಯವಂತರಲ್ಲ. ಸಾಧಕರ ಲೆಕ್ಕ ನೋಡುತ್ತ ಹೋದರೆ ಅಂಗವಿಕಲರೂ ಸಾಧಕರ ಪಟ್ಟಿಯಲ್ಲಿದ್ದಾರೆ. ಸಾಲು ಮರದ ತಿಮ್ಮಕ್ಕನಂಥವರು ಮರಗಳನ್ನು ನೆಟ್ಟು ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಮಾತನಾಡಿ, ಶಿಬಿರದಲ್ಲಿ ಭಾಗವಹಿಸು ವುದು ಮುಖ್ಯವಲ್ಲ. ಇಲ್ಲಿ ಗಣ್ಯರು ನೀಡಿದ ಉಪನ್ಯಾಸ, ಸ್ವಾಮೀಜಿಯವರ ಆಶೀವರ್ಚನದ ಮಾತುಗಳನ್ನು ಮನನ ಮಾಡಿಕೊಂಡು ಅರಿತು ಕೊಳ್ಳಬೇಕು. ಹೀಗೆ ಅರಿತಿದ್ದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಶಿಬಿರದಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.

ಚಿತ್ರ ನಟಿ ಅಮೂಲ್ಯ ಮಾತನಾಡಿ, ನಮ್ಮ ಜೀವನ ನೀರ ಮೇಲಿನ ಗುಳ್ಳೆ ಇದ್ದಂತೆ. ಅದು ಯಾವಾಗಲಾದರೂ ಒಡೆದು ಬಿಡಬಹುದು. ಹಾಗಾಗಿ ರಾಘವೇಂದ್ರರು ತಿಳಿಸಿದಂತೆ ಎಲ್ಲಿ ಇರುತ್ತೇವೋ ಅಲ್ಲಿಯ ವಾತಾವ ರಣಕ್ಕೆ ಹೊಂದಿಕೊಂಡು ಜೀವನ ಸಾಗಿಸುವುದನ್ನು ಕಲಿತುಕೊಳ್ಳಬೇಕು. ಅಲ್ಲದೆ ನಮ್ಮ ಜೀವನದ ನಡೆಗಳು ಪೂರಕವಾಗಿರಬೇಕೆ ವಿನಾ ತದ್ವಿರುದ್ಧ ಇರಬಾರದು. ಸಂದರ್ಭಕ್ಕೆ ಹೊಂದಾಣಿಕೆ ಮಾಡಿ ಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

Advertisement

ಚಂದದ ಹೆಸರು ಸಂಪಾದಿಸಿ: ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮ ಲಾನಾಂದನಾಥ ಸ್ವಾಮೀಜಿ ಮಾತನಾಡಿ, ಸುಂದರವಾಗಿ ರುವವರನ್ನು ನೋಡಿ ನಾನು ಸುಂದರವಾಗಿಲ್ಲ ಎಂದು ಶಪಿಸಿಕೊಳ್ಳದೆ ಶಾಶ್ವತ ಸಾಧನೆ ಮಾಡಿ ಚಂದದ ಹೆಸರು ಸಂಪಾದಿಸಿ ಎಂದು ಹೇಳಿದರು.

ಶಿಬಿರದ ನಿರ್ದೇಶಕ ನರಸಿಂಹಯ್ಯ ಶಿಬಿರಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೆಲವು ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಶಿಬಿರದ ಉಸ್ತುವಾರಿ ವಹಿಸಿದ್ದ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ದಸರೀಘಟ್ಟ ಶಾಖಾ ಮಠದ ಚಂದ್ರನಾಥ ಸ್ವಾಮೀಜಿ, ಚುಂಚನಕಟ್ಟೆ ಶಾಖಾ ಮಠದ ಶಿವಾನಂದನಾಥ ಸ್ವಾಮೀಜಿ, ಆದಿಹಳ್ಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next