Advertisement

ಸಿಎಂ ಬೊಮ್ಮಾಯಿಗೆ ಆದಿ ಬಣಜಿಗ ಸಮಾಜದ ಅಭಿನಂದನೆ

01:53 PM Apr 06, 2023 | Team Udayavani |

ಹುಬ್ಬಳ್ಳಿ: ಆದಿ ಬಣಜಿಗ ಸಮಾಜವನ್ನು 2ಡಿ ಮೀಸಲಾತಿ ಸೇರ್ಪಡಿಸಿದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಆದಿ‌ ಬಣಜಿಗ ಸಮಾಜದ ವತಿಯಿಂದ ಇಲ್ಲಿಯ ಉಣಕಲ್ ನ ಹಳೇ ಪಿ.ಬಿ.ರಸ್ತೆ ಸಿದ್ದೇಶ್ವರ ಕೈಲಾಸ ಮಂಟಪದಲ್ಲಿ ಗುರುವಾರ ಅಭಿನಂದನೆ ಸಲ್ಲಿಸಲಾಯಿತು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಿಂದಿನ‌ ಸರ್ಕಾರ ಮತ ಬ್ಯಾಂಕ್ ಗಾಗಿ ಹಾಗೂ ರಾಜಕೀಯ ಲಾಭಕ್ಕಾಗಿ ಈ ಸಮಾಜ ಬಳಸಿಕೊಳ್ಳುತ್ತಿದ್ದವು. ಆದರೆ ನಮ್ಮ ಸರ್ಕಾರ ಅವರ ಬೇಡಿಕೆ ಈಡೇರಿಸಿದ್ದೇವೆ ಎಂದರು.

ಆದಿ ಬಣಜಿಗ ಸಮಾಜ ನೀಡಿದಂತ ಮೀಸಲಾತಿ ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದ ಯುವಕರು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಪಡೆದುಕೊಳ್ಳಬೇಕು. ಸಮಾಜದ ಜನ ಒಗ್ಗಟ್ಟಿನಿಂದಿರಬೇಕು. ವ್ಯಕ್ತಿ ಶಾಶ್ವತ ಸಂಸ್ಥೆ ಶಾಶ್ವತವಾಗಿದೆ ಎಂದು ಹೇಳಿದರು.

ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಆದಿ ಬಣಜಿಗ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next