Advertisement

ಅಮೆರಿಕ ಅಧ್ಯಕ್ಷರಿಗೆ ಸಂಸದರ ಸಾಥ್

08:10 AM Sep 28, 2019 | mahesh |

ಶರಣ್‌ ಅಭಿನಯದ “ಅಧ್ಯಕ್ಷ ಇನ್‌ ಅಮೆರಿಕ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಅಕ್ಟೋಬರ್‌ 04 ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಸಂಸದ ತೇಜಸ್ವಿ ಸೂರ್ಯ ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿ­ದರು. “ನನಗೆ ಬೇಸರ ಆದಾಗ ಶರಣ್‌ ಸೇರಿದಂತೆ ಇತರ ಹಾಸ್ಯ ಕಲಾವಿದರ ಕಾಮಿಡಿ ತುಣುಕುಗಳನ್ನು ನೋಡುತ್ತೇನೆ. ಇವರುಗಳು ಇಲ್ಲದೇ ಕನ್ನಡ ಚಿತ್ರರಂಗ ಇರಲು ಸಾಧ್ಯವಿಲ್ಲ. ಇಂತಹ ಕಲಾವಿದರ ದಂಡು ಇರುವುದರಿಂದ ಚಿತ್ರರಂಗದಲ್ಲಿ ಯಶಸ್ಸು ಇದೆ’ ಎಂದು ಶುಭಕೋರಿದರು ತೇಜಸ್ವಿ ಸೂರ್ಯ.

Advertisement

ನಾಯಕ ಶರಣ್‌ಗೆ ಈ ಸಿನಿಮಾ ಮೇಲೆ ಭರವಸೆ ಇದೆ. ಅದಕ್ಕೆ ಕಾರಣ ಸಿನಿಮಾ ಮೂಡಿ­ಬಂದಿರುವ ರೀತಿ. ಈ ಚಿತ್ರವನ್ನು ಯೋಗಾನಂದ್‌ ಮುದ್ದಾನ್‌ ನಿರ್ದೇಶಿಸಿದ್ದಾರೆ. ಇವರಿಗಿದು ಚೊಚ್ಚಲ ಚಿತ್ರ. ಇನ್ನು, ಹೈದರಾಬಾದ್‌ ಮೂಲದ ಸಂಸ್ಥೆ ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಇವೆಲ್ಲದರ ಜೊತೆಗೆ ಚಿತ್ರದ ಕಂಟೆಂಟ್‌ ಕೂಡಾ ಭಿನ್ನವಾಗಿರು­ವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾ­ಗುವ ವಿಶ್ವಾಸ ಶರಣ್‌ ಅವರದು. “ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹಾಸ್ಯ ದೃಶ್ಯಗಳನ್ನು ಸೃಷ್ಟಿಸೋದು ಕಷ್ಟದ ಕೆಲಸ. ಆದರೆ, ಯೋಗಾನಂದ ಮುದ್ದಾನ್‌ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ’ ಎನ್ನುತ್ತಾ ಚಿತ್ರದ ವಿಶೇಷತೆಯ ಮೇಲೆ ಬೆಳಕು ಚೆಲ್ಲಿದರು ಶರಣ್‌.

ಚಿತ್ರದಲ್ಲಿ ರಾಗಿಣಿ ನಾಯಕಿ. ರಾಗಿಣಿಗೆ ಮೊದಲ ಬಾರಿಗೆ ಕಾಮಿಡಿ ಚಿತ್ರದಲ್ಲಿ ನಟಿಸಿದ್ದು ಹೊಸ ಅನುಭವ ನೀಡಿದೆಯಂತೆ. ಇನ್ನು, ನಿರ್ದೇಶಕ ಯೋಗಾನಂದ್‌ ಮುದ್ದಾನ್‌ ಮಾತನಾಡಿ, “ಇದು ಅಧ್ಯಕ್ಷ ಚಿತ್ರದ ಮುಂದುವರೆದ ಭಾಗವಲ್ಲ. ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೂಡಾ ಸಂಪೂರ್ಣ ಹಾಸ್ಯಮಯ ಚಿತ್ರ ಎಂಬುದಷ್ಟೇ ಸಾಮ್ಯತೆ ಎಂದರು, ಚಿತ್ರದ ಹಾಡುಗಳನ್ನು ಡಿ ಬೀಟ್ಸ್‌ ಸಂಸ್ಥೆ ಹೊರತಂದಿದೆ. ಚಿತ್ರದಲ್ಲಿ ಶಿವರಾಜ್‌ ಕೆ.ಆರ್‌.ಪೇಟೆ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಒಂದು ಸಮಯದಲ್ಲಿ ಶರಣ್‌ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದ ಶಿವರಾಜ್‌ ಕೆ.ಆರ್‌.ಪೇಟೆಗೆ ಈಗ ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆಯಂತೆ. ಉಳಿದಂತೆ ರಂಗಾಯಣ ರಘು, ಪದ್ಮಜಾ ರಾವ್‌, ಸ್ಪಂದನಾ, ಶೈಲಜಾ ನಾಗ್‌, ವಿ.ಹರಿಕೃಷ್ಣ, ನಿರ್ಮಾಪಕ ವಿಶ್ವಪ್ರಸಾದ್‌.ಟಿ.ಜಿ ಚಿತ್ರದ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next