Advertisement

ಆಧಾರ್‌ ಸಮಸ್ಯೆ: ಸಿಗದ ಪರಿಹಾರ

02:25 AM Jun 26, 2019 | Team Udayavani |

ಉಡುಪಿ: ಆಧಾರ್‌ ಲಿಂಕ್‌, ತಿದ್ದುಪಡಿ ಸಂದರ್ಭ ಜನ್ಮದಿನಾಂಕ ದಾಖಲೆ ಹೊಂದಿಲ್ಲದವರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಂಗಳವಾರ ಜರಗಿದ ಉಡುಪಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು.

Advertisement

ವೈದ್ಯರ ದೃಢೀಕರಣ ಆಧಾರದಲ್ಲಿ ತಹಶೀಲ್ದಾರ್‌ಗಳು ತಾತ್ಕಾಲಿಕ ನೆಲೆಯಲ್ಲಿ ‘ನಿರ್ದಿಷ್ಟ ಉದ್ದೇಶಕ್ಕಾಗಿ’ ಎಂಬ ಷರತ್ತಿನಲ್ಲಿ ಜನ್ಮ ದಿನಾಂಕ ಪ್ರಮಾಣಪತ್ರ ನೀಡಬಹುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಹೇಳಿದರು. ಆದರೆ ಇದಕ್ಕೆ ತಹಶೀಲ್ದಾರ್‌ಗಳು ಮತ್ತು ಇತರ ಅಧಿಕಾರಿಗಳು ಸಹಮತವ್ಯಕ್ತಪಡಿಸಲಿಲ್ಲ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಭೆ ವಿಫ‌ಲವಾಯಿತು. ‘ನ್ಯಾಯಾಲಯ ಮೂಲಕವೂ ಪಡೆಯಬಹುದು. ಅದು ಶಾಶ್ವತ’ ಎಂದು ಉಪವಿಭಾಗಾ ಧಿಕಾರಿ ಸಲಹೆ ನೀಡಿದರು.

ಗ್ರಾ.ಪಂ.ಗಳಲ್ಲಿ ಆಧಾರ್‌ ತಿದ್ದು ಪಡಿಗೆ ಸದ್ಯ ಅವಕಾಶ ಇಲ್ಲದ ಕಾರಣ ತಾ. ಕಚೇರಿಗಳಲ್ಲಿರುವ ಅಟಲ್ಜಿ ಸೇವಾ ಕೇಂದ್ರಗಳಲ್ಲಿ ಆಧಾರ್‌ ಕಿಟ್ ಸಂಖ್ಯೆ ಹೆಚ್ಚಿಸುವಂತೆ ಸರಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಣಯಿಸಿತು.

ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಆದರೆ ಎಂಜಿನಿಯರ್‌, ಗುತ್ತಿಗೆದಾರರನ್ನು ಹೊಣೆ ಮಾಡಿ ಪ್ರಕರಣ ದಾಖಲಿಸು ವಂತೆ ಶಿಫಾರಸು ಮಾಡಲು ಸಭೆ ನಿರ್ಣಯಿಸಿತು. ‘ಅಪಘಾತ ಸ್ಥಳಗಳಲ್ಲಿ ಸುರಕ್ಷಾ ಕ್ರಮಕ್ಕಾಗಿ ಪೂರ್ವಭಾವಿ ವರದಿ ಪಡೆಯಲಾಗುತ್ತಿದೆ’ ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದರು.

ಕಳಪೆ ಹಲಗೆಗೆ ತಡೆ

Advertisement

ಈ ಬಾರಿ ಸಣ್ಣ ನೀರಾವರಿ ಇಲಾಖೆ ಯವರು ಹಲಗೆ ಹಾಕುವಾಗ ಸ್ಥಳೀಯ ಗ್ರಾ.ಪಂ. ಗಮನಕ್ಕೆ ತರಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಶಿಕ್ಷಣ ಇಲಾಖೆಗೆ 69.35 ಕೋ.ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 1.03 ಕೋ.ರೂ., ಕೃಷಿ ಇಲಾಖೆಗೆ 96.89 ಲ.ರೂ., ಮೀನುಗಾರಿಕೆ ಇಲಾಖಾ ಕಾರ್ಯಕ್ರಮದಡಿ 1.29 ಕೋ.ರೂ. ಮೊತ್ತಕ್ಕೆ ಕ್ರಿಯಾ ಯೋಜನೆ, ಮೀನು ಮಾರುಕಟ್ಟೆ ನಿರ್ಮಾಣಕ್ಕೆ 10.50 ಲ.ರೂ., ಗ್ರಾಮಾಂತರ ಕೈಗಾರಿಕೆ ಕಾರ್ಯಕ್ರಮದಡಿ 82.12 ಲ.ರೂ., ಸಾಮಾಜಿಕ ಅರಣ್ಯ ವಲಯದಡಿ 2.07 ಕೋ.ರೂ. ಹಂಚಿಕೆಯಾಗಿದೆ.

522.12 ಕೋ.ರೂ. ಕ್ರಿಯಾಯೋಜನೆಗೆ ಅನುಮೋದನೆ

ಉಡುಪಿ ಜಿ.ಪಂ. 2019-20ನೇ ಸಾಲಿಗೆ 522.12 ಕೋ.ರೂ. ಕ್ರಿಯಾ ಯೋಜನೆಗೆ ಮಂಗಳವಾರ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದೆ. ಈ ಮೊತ್ತದಲ್ಲಿ ಜಿ.ಪಂ. ಕಾರ್ಯಕ್ರಮಗಳಿಗೆ 187.30 ಕೋ.ರೂ. (ವೇತನ ಮತ್ತು ವೇತನೇತರ ಸೇರಿ) ಹಂಚಿಕೆ ಮಾಡಲಾಗಿದೆ. ತಾ.ಪಂ. ಕಾರ್ಯಕ್ರಮಗಳಿಗೆ 333.88 ಕೋ.ರೂ. ಹಂಚಿಕೆ ಮಾಡಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next