Advertisement

ಜನನ ಮತ್ತು ಮರಣ ನೋಂದಣಿಗೆ ಆಧಾರ್‌ ಕಡ್ಡಾಯವಲ್ಲ : ಭಾರತದ ರಿಜಿಸ್ಟ್ರಾರ್‌ ಜನರಲ್‌ ಆದೇಶ

02:13 AM Jun 20, 2021 | Team Udayavani |

ಹೊಸದಿಲ್ಲಿ: ಜನನ ಮತ್ತು ಮರಣ ನೋಂದಣಿಗೆ ಆಧಾರ್‌ ಸಂಖ್ಯೆ ಬೇಕಾಗಿಲ್ಲ. ಹೀಗೆಂದು ಭಾರತದ ರಿಜಿಸ್ಟ್ರಾರ್‌ ಜನರಲ್‌ ಆದೇಶ ನೀಡಿದ್ದಾರೆ. ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ರಲ್ಲಿ ಆಧಾರ್‌ ಮಾಹಿತಿ ಮೂಲಕ ನೋಂದಣಿ ಕಾಯ್ದೆಗೆ ಅವಕಾಶ ಇಲ್ಲ ಎಂದು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಹೀಗಾಗಿ, ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಜನನ ಮತ್ತು ನೋಂದಣಾಧಿಕಾರಿಗಳು ಜನನ ಮತ್ತು ಮರಣ ನೋಂದಣಿ ಮಾಡುವ ಸಂದರ್ಭದಲ್ಲಿ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಜನರಿಗೆ ಸೂಚಿಸಬಾರದು ಎಂದು ರಿಜಿಸ್ಟ್ರಾರ್‌ ಜನರಲ್‌ ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದಾರೆ.

Advertisement

ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿ ಜನನ ಮತ್ತು ಮರಣ ನೋಂದಣಿಗೆ ಆಧಾರ್‌ ಬಳಕೆ ಮಾಡುತ್ತಿವೆ ಎಂದು ರಿಜಿಸ್ಟ್ರಾರ್‌ ಜನರಲ್‌ ತಿಳಿಸಿದ್ದಾರೆ. ಆದರೆ, ರಾಜ್ಯ ಸರಕಾರಗಳು ಹೇಳುವುದೇನೆಂದರೆ 2017ರ ಆಗಸ್ಟ್‌ನಲ್ಲಿ ಬಂದ ನಿರ್ದೇಶನದ ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಪ್ರಕಾರ ಅಸುನೀಗಿದ ವ್ಯಕ್ತಿ ಆಧಾರ್‌ ಕಾರ್ಡ್‌ ಹೊಂದಿಲ್ಲ ಎಂಬುದಕ್ಕೆ ಆತನ ಕುಟುಂಬಸ್ಥರು ಪ್ರಮಾಣ ಪತ್ರ ಸಲ್ಲಿಸಬೇಕು. 2016ರ ಆಧಾರ್‌ ಕಾಯ್ದೆಯ ಸೆಕ್ಷನ್‌ 57ರ ಪ್ರಕಾರ “ಕಾನೂನು ಪ್ರಕಾರವಾಗಿರುವ ಯಾವುದೇ ವ್ಯವಸ್ಥೆ ಮತ್ತು ಒಪ್ಪಂದವನ್ನು 12 ಅಂಕೆಗಳ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ’
ಏರಿಕೆ: 2018ರಲ್ಲಿ 2.33 ಕೋಟಿ ಇದ್ದ ಜನನ ನೋಂದಣಿ 2019ರಲ್ಲಿ 2.48 ಕೋಟಿಗೆ ಏರಿಕೆಯಾಗಿತ್ತು. ಅದರಲ್ಲಿ ಮಹಿಳೆಯರ ಪ್ರಮಾಣ ಶೇ.52.1 ಮತ್ತು ಮಹಿಳೆಯರ ಪ್ರಮಾಣ ಶೇ. 47.9 ಆಗಿದೆ. ಮತ್ತೂಂದು ಮಹತ್ವದ ವಿಚಾರವೆಂದರೆ, ಹೆಚ್ಚಿನ ಪ್ರಮಾಣದ ಲಿಂಗಾನುಪಾತ ಅರುಣಾಚಲ ಪ್ರದೇಶ (1,024)ದಲ್ಲಿದೆ. ನಾಗಾಲ್ಯಾಂಡ್‌ನ‌ಲ್ಲಿ 1001, ಮಿಜೋರಾಂನಲ್ಲಿ 975, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದಲ್ಲಿ 965ದಲ್ಲಿದೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next