ನವ ದೆಹಲಿ : ದೇಶದ ನಾಗರಿಕರ ಗುರುತಿನ ಚೀಟಿ ಎಂದೇ ಕರೆಯಲಾಗುವ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆ ಇನ್ನೂ ಕೂಡ ನೀವು ಮಾಡಿಲ್ಲ ಎಂದಾದಲ್ಲಿ ಯಾವುದೇ ರೀತಿಯಲ್ಲಿ ಚಿಂತೆ ಮಾಡುವ ಅಗತ್ಯವಿಲ್ಲ.
ಹೌದು, ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಗಳ ಜೋಡಣೆ ಅಥವಾ ಲಿಂಕ್ ಮಾಡುವ ಅವಧಿಯನ್ನು ಮುಂದೂಡಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಇದನ್ನೂ ಓದಿ : ಕಳಪೆ ಪ್ರದರ್ಶನ ತೋರಿದ ಶ್ರೀಲಂಕಾ ಆಟಗಾರರ ವಿರುದ್ಧ ಅಭಿಯಾನ ಆರಂಭಿಸಿದ ಅಭಿಮಾನಿಗಳು
ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಿ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳ ಜೋಡಣೆ ಗಡುವನ್ನು ಕೇಂದ್ರ ಸರ್ಕಾರ ಮೂರು ತಿಂಗಳು ವಿಸ್ತರಿಸಿದೆ. ಮಾತ್ರವಲ್ಲದೇ, ಜುಲೈ 15ರಂದು ಕೊನೆಯ ದಿನಾಂಕವಾಗಿದ್ದ ಉದ್ಯೋಗಿಗಳು ಟಿಡಿಎಸ್ ಸಲ್ಲಿಸಲು ದಿನಾಂಕವನ್ನು ಜುಲೈ 31ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಇನ್ನು, ತೆರಿಗೆ ವ್ಯಾಜ್ಯಗಳ ಇತ್ಯರ್ಥಕ್ಕೆ ರೂಪಿಸಲಾಗಿರುವ ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದ್ದು, ತೆರಿಗೆ ಪಾವತಿದಾರರು ಅಕ್ಟೋಬರ್ 31ರವರೆಗೆ ಹೆಚ್ಚುವರಿ ಬಡ್ಡಿ ಸಹಿತವಾಗಿ ಪಾವತಿ ಮಾಡಲು ಅವಕಾಶ ನೀಡಿ ಕೇಂದ್ರ ಘೋಷಣೆ ಮಾಡಿದೆ.
ಇದನ್ನೂ ಓದಿ : ಪುದುಚೆರಿಯ ಅಧಿಕಾರ ಸ್ವೀಕರಿಸಿದ ಎನ್ ಆರ್ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ..!