ಶಿವಮೊಗ್ಗ : ನಗರದಲ್ಲಿ ಸೋಮವಾರ ನಡೆದ ಗಲಭೆ ಹಿನ್ನೆಲೆಯಲ್ಲಿ ಚೂರಿ ಇರಿತ ಘಟನೆಗಳು ನಡೆದು ಜಿಲ್ಲೆಯೆಯಲ್ಲಿ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಹೊತ್ತು ಬೈಕ್ ಸಂಚಾರ ನಿಷೇಧಿಸಿದ್ದಲ್ಲದೆ ಬೈಕ್ ನಲ್ಲಿ ಇಬ್ಬರು ಯುವಕರು ಸಂಚರಿಸದಂತೆ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ದ್ವಿ ಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇದಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ) ಅಲ್ಲದೆ ರಾತ್ರಿ 9:00 ರಿಂದ ಬೆಳಗಿನ ಜಾವ 05:00 ರವೆಗೆ ತುರ್ತು ಸಂದರ್ಭವನ್ನು ಹೊರತು ಪಡಿಸಿ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಬಂದಿದ್ದು, ತುಂಗಾನಗರ, ದೊಡ್ಡಪೇಟೆ, ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡಿದ್ದೇವೆ , ಬೇರೆ ಸ್ಟೇಷನ್ ಗಳಲ್ಲಿ ರಾತ್ರಿ ಗಸ್ತು ಇರಲಿದೆ. 40 ವರ್ಷ ಮೇಲೆ ಇರುವ ಪಿಲಿಯನ್ ರೈಡರ್ಸ್ ಮೇಲೆ ನಿಗಾ ಇಡುತ್ತೇವೆ ಎಂದರು.
ಇನ್ನು ಮುಂದೆ ಇಂತಹ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ. ಯಾರು ಈ ರೀತಿ ಘಟನೆ ನಡೆಸಲು ಮುಂದಾಗುತ್ತಾರೋ ಅಂತವರ ವಿರುದ್ದ ಕಠಣ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು ಈ ಘಟನೆ ಆರೋಪಿಗಳನ್ನು ಅದಷ್ಟು ಬೇಗಾ ದಸ್ತುಗಿರಿ ಮಾಡ್ತಿವಿ. ಐಜಿಯವರ ಮಾರ್ಗದರ್ಶನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದರು.
ಚೌತಿ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಗಣಪತಿ ಹಬ್ಬಕ್ಕೆ ಏನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ, ರ್ಯಾಪಿಡ್ ಆಕ್ಷನ್ ಫೋರ್ಸ್ ಈಗಾಗಲೇ ಬಂದಿದೆ. ಮೂರು ಜನ ಅಡಿಷನಲ್ ಎಸ್ ಪಿ, ಒಬ್ಬ ಎಸ್ ಪಿ ಲೆವೆಲ್ ಆಫಿಸರ್, ಹತ್ತು ಜನ ಡಿಎಸ್ಪಿ , 30 ಜನ ಪಿಎಸ್ಐ ಸೇರಿದಂತೆ ಸಿಬ್ಬಂದಿಗಳು ಬಂದಿದ್ದಾರೆ ಎಂದರು.
ಇದನ್ನೂ ಓದಿ : ಬಿಹಾರ ಸಂಪುಟ ಇಂದು ವಿಸ್ತರಣೆ: ನಿತೀಶ್ ಸರ್ಕಾರದಲ್ಲಿ ಲಾಲೂ ಪಕ್ಷದವರದ್ದೇ ರಾಜ್ಯಭಾರ