ಬಲದಂಡೆ ಮುಖ್ಯ ಕಾಲುವೆಗಳಿಗೆ ಸೆ. 11ವರೆಗೆ ನೀರು ಹರಿಸುವುದನ್ನು ಮುಂದುವರಿಸಲಾಗುತ್ತಿದೆ ಎಂದು ಕೃಷ್ಣಾ
ಭಾಗ್ಯ ಜಲ ನಿಗಮದ ವೃತ್ತ ಕಚೇರಿ ಅಧೀಕ್ಷಕ ಅಭಿಯಂತರ ವೀರಣ್ಣ ನಗರೂರ ಉದಯವಾಣಿಗೆ ತಿಳಿಸಿದ್ದಾರೆ.
Advertisement
ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ವಾರಾಬಂದಿ ನಿಯಮದಂತೆ (ಚಾಲು ಬಂದ್) ಸೆ. 08 ಸಂಜೆ ಉಭಯ (ಎಡ ಹಾಗೂ ಬಲ) ಮುಖ್ಯ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕಾಗಿತ್ತು. ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ಒಳಹರಿವು ಹರಿದು ಬರುತ್ತಿರುವುದರಿಂದ ಮುಖ್ಯ ಕಾಲುವೆಗಳಿಗೆ ಮೂರು ದಿನಗಳವರಗೆ ಹೆಚ್ಚುವರಿಯಾಗಿ ನೀರು ಹರಿಸುವಂತೆ ಸರಕಾರ ನಿರ್ದೇಶನ ನೀಡಲಾಗಿದ್ದು, ಹೀಗಾಗಿ ಉಭಯಮುಖ್ಯ ಸೆ. 08, 09, 10, 11ರವರೆಗೆ ನೀರು ಹರಿಸಲಾಗುವುದು. ಸೆ. 11ರಂದು ಸಂಜೆ ಉಭಯ ಕಾಲುಗಳಿಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬಲದಂಡೆ ಮುಖ್ಯ ಕಾಲುವೆ ಜಾಲಗಳಿಂದ ನೀರಿನ ಬೇಡಿಕೆಗಳು ಬಂದೆವೆ ಎಂದು ತಿಳಿಸಿದರು. ಪ್ರಸ್ತುತ ಜಲಾಶಯದಲ್ಲಿ 492.18 ಮೀಟರ್‌ನಷ್ಟು ನೀರಿದ್ದು 32.98 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಒಳ ಹರಿವು 6850 ಕ್ಯೂಸೆಕ್, ಎಡದಂಡೆ ಮುಖ್ಯ ಕಾಲುವೆಗೆ 2927 ಕ್ಯೂಸೆಕ, ಬಲದಂಡೆ 2000 ಕ್ಯೂಸೆಕ ನೀರು ಹರಸಲಾಗುತ್ತಿದೆ
ಎಂದು ತಿಳಿಸಿದರು.