Advertisement

Chinese: ಬಿಯರ್‌ಗೆ ಮೂತ್ರ ಸೇರ್ಪಡೆ; ಚೀನ ಸಂಸ್ಥೆಯ ಷೇರು ಕುಸಿತ

11:24 PM Oct 24, 2023 | Team Udayavani |

ಬೀಜಿಂಗ್‌: ಚೀನದ ಖ್ಯಾತ ಮದ್ಯಪಾನ ತಯಾರಕ ಸಂಸ್ಥೆ ಸಿಂಗ್ಬಾವೋದ ಕಾರ್ಖಾನೆಯಲ್ಲಿ ಕೆಲಸಗಾರನೊಬ್ಬ ಬಿಯರ್‌ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡಿದ್ದ ವೀಡಿಯೋ ವೈರಲ್‌ ಆಗಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಸಂಸ್ಥೆಯ ಷೇರು ಕುಸಿತಗೊಂಡಿರುವುದು ವರದಿ­ಯಾಗಿದೆ. ಸಿಂಗ್ಬಾವೋದ ಷೇರು ಆರಂಭಿಕ ವಹಿವಾಟಿನಲ್ಲೇ ಶೇ.7.5ರಷ್ಟು ಕುಸಿತ­ಗೊಂಡಿದ್ದು, ಈ ಸಂಸ್ಥೆ ದೇಶದ ಎರಡನೇ ಅತೀದೊಡ್ಡ ಬಿಯರ್‌ ತಯಾರಕ ಸಂಸ್ಥೆಯಾಗಿತ್ತು ಅಲ್ಲದೇ ದೇಶಿಯ ಮಾರುಕಟ್ಟೆಯಲ್ಲೇ ಶೇ.15ರಷ್ಟು ಪಾಲನ್ನು ಒಳಗೊಂಡಿರುವ ಹಾಗೂ ಚೀನದಿಂದ ರಫ್ತಾಗುವ ಬಿಯರ್‌ನ ಪೈಕಿ ಅರ್ಧದಷ್ಟನ್ನು ಪೂರೈಕೆ ಮಾಡುವ ಸಂಸ್ಥೆಯೂ ಆಗಿತ್ತು.

Advertisement

ಇದೀಗ ವೀಡಿಯೋ ವೈರಲ್‌ ಆದ ಬೆನ್ನಲ್ಲೇ ಸಂಸ್ಥೆಯ ಷೇರು ಮೌಲ್ಯ ಪತನಗೊಂಡಿದೆ. ವೈರಲ್‌ ಆದ ವೀಡಿಯೋದಲ್ಲಿ ಸಂಸ್ಥೆಯ ಸಮವಸ್ತ್ರ ಧರಿಸಿದ್ದ ಕಾರ್ಮಿಕನೊಬ್ಬ ಗೋಡೆಯ ಮೇಲೇರಿ ಬಿಯರ್‌ ಕಂಟೈನರ್‌ಗೆ ಮೂತ್ರ ವಿಸರ್ಜಿಸಿದ್ದ. ಈ ವೀಡಿಯೋವನ್ನು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ನಾವು ಪೊಲೀಸರ ಗಮನಕ್ಕೆ ತಂದಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next