Advertisement

UNESCO ಪಟ್ಟಿಗೆ “ಗರ್ಬಾ” ಸೇರ್ಪಡೆ

12:14 AM Dec 07, 2023 | Team Udayavani |

ಹೊಸದಿಲ್ಲಿ: ಭಾರತದ ಗುಜರಾತಿನ ಸಾಂಪ್ರದಾಯಿಕ ನೃತ್ಯ ಪ್ರಕಾರ “ಗರ್ಬಾ” ಯುನೆಸ್ಕೋ (ಯುನೈಟೆಡ್‌ ನೇಶನ್ಸ್‌ ಎಜುಕೇಶನಲ್‌, ಸೈಂಟಿಫಿಕ್‌ ಆ್ಯಂಡ್‌ ಕಲ್ಚರಲ್‌ ಆರ್ಗನೈಸೇಶನ್‌) ವಿಶ್ವ ವಸ್ತುಯೇತರ ಪಾರಂಪರಿಕ ಸಂಸ್ಕೃತಿಯ ಪಟ್ಟಿಗೆ ಸೇರ್ಪಡೆಗೊಂಡಿದೆ. ಯುನೆಸ್ಕೋ ಪಾರಂಪರಿಕ ಸಂಸ್ಕೃತಿಯ ಪ್ರತಿನಿಧಿ ಪಟ್ಟಿಯು ವೈವಿಧ್ಯತೆಯನ್ನು ಪ್ರದರ್ಶಿಸುವುದರ ಜತೆಗೆ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವಂಥದ್ದಾಗಿದ್ದು, ಇದೀಗ ಈ ಪಟ್ಟಿಗೆ ಭಾರತದ ಪ್ರಾಚೀನ ನೃತ್ಯ ಪ್ರಕಾರ ಗರ್ಬಾ ಸೇರ್ಪಡೆಗೊಂಡಿದೆ ಎಂದು ಯುನೆಸ್ಕೋ ತಿಳಿಸಿದೆ.

Advertisement

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಈ ಬಗ್ಗೆ ಟ್ವೀಟ್‌ ಮಾಡಿ, ಗರ್ಬಾ ನೃತ್ಯ ಯುನೆಸ್ಕೋ ಪಟ್ಟಿಗೆ ಸೇರಿದ್ದು ಹಮ್ಮೆಯ ವಿಚಾರ. ಈ ಸಂಸ್ಕೃತಿಯನ್ನು ಜಾಗತಿಕ ವೇದಿಕೆಗೆ ಪರಿಚಯಿಸಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next