Advertisement

ನಮ್ಮನ್ನೂ ಜಾತಿ ಪಟ್ಟಿಯಲ್ಲಿ ಸೇರಿಸಿ

01:01 PM Mar 15, 2017 | |

ದಾವಣಗೆರೆ: ಜಾತಿ ಪಟ್ಟಿಯಲ್ಲಿ ಮತ್ತೆ ವೈಶ್ಯ ಜಾತಿಯ ಹೆಸರು ಸೇರ್ಪಡೆಗೆ ಒತ್ತಾಯಿಸಿ ಮಂಗಳವಾರ ಆರ್ಯವೈಶ್ಯ ಸಮಾಜದವರು ಪ್ರತಿಭಟನೆ ನಡೆಸಿದರು. ಶ್ರೀ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಮೆರವಣಿಗೆ ನಡೆಸಿದ ಆರ್ಯವೈಶ್ಯ ಸಮಾಜಬಾಂಧವರು, ಕಾರಣಾಂತರದಿಂದ ಜಾತಿ ಪಟ್ಟಿಯಿಂದ ಸಮಾಜದ ಹೆಸರು ಬಿಟ್ಟು ಹೋಗಿರಬಹುದು.

Advertisement

ಈಗಲಾದರೂ ಮತ್ತೆ ಜಾತಿ ಪಟ್ಟಿಯಲ್ಲಿ ಸಮಾಜದ ಹೆಸರನ್ನು ಕಡ್ಡಾಯವಾಗಿ ಸೇರಿಸಲೇಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆರ್ಯವೈಶ್ಯ ಸಮಾಜ ಬಾಂಧವರು ಭಾರತಕ್ಕೆ ದಿಢೀರ್‌ ನೆ ಬಂದವರಲ್ಲ. ಇತಿಹಾಸ, ಪುರಾಣ ಕಾಲದಿಂದಲೂ ಇಲ್ಲೇ ಇರುವಂತಹವರು.

ತ್ರೇತಾಯುಗ, ದ್ವಾಪರಯುಗ, ಗಂಗರು, ಚಾಲುಕ್ಯರು, ಹೊಯ್ಸಳರು, ಗುಪ್ತರ ಕಾಲದಲ್ಲೂಸಮಾಜದ ಬಾಂಧವರ ಬಗ್ಗೆ ಉಲ್ಲೇಖ ಇದೆ. 2,500 ವರ್ಷಗಳ ಇತಿಹಾಸದಲ್ಲಿ 1,500ಕ್ಕೂ ಹೆಚ್ಚು ವರ್ಷ ಭಾರತನ್ನು ಆರ್ಯವೈಶ್ಯರೇ ಆಳಿದ್ದಾರೆ ಎಂಬ ಇತಿಹಾಸವೇ ಇದೆ. ದೇಶದ ಸ್ವಾತಂತ್ರ ಸಂಗ್ರಾಮದಲ್ಲೂ ಸಮಾಜ ಅತ್ಯುನ್ನತ ಕಾಣಿಕೆ ಸಲ್ಲಿಸಿದೆ ಎಂದು ಸ್ಮರಿಸಲಾಗಿದೆ. 

ಎಲ್ಲಾ ಜನಗಣತಿ ಇತರೆ ಗಣತಿಯಲ್ಲೂ ಆರ್ಯವೈಶ್ಯ ಸಮಾಜದ ಗಣತಿ ನಡೆಯುತ್ತಿದೆ. ಎಲ್ಲಾ ನಾಗರಿಕ ಹಕ್ಕು, ಸೌಲಭ್ಯ, ದಾಖಲೆ ಹೊಂದಿದ್ದಾರೆ. ಇತೀ¤ಚಿನವೆರೆಗಿನ ಜಾತಿ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರು ಇತ್ತು. ಆದರೆ, ಈಚೆಗೆಬಿಡುಗಡೆಗೊಳಿಸಿರುವ ಜಾತಿಗಳ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರೇ ಇಲ್ಲ.

ತಾಂತ್ರಿಕ ಕಾರಣ, ಕಣ್ತಪ್ಪಿನಿಂದಾಗಿ ಬಿಟ್ಟು ಹೋಗಿರಬಹುದೇನೋ ಎಂದು ಪರಿಭಾವಿಸಿ ಜಾತಿ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಯೇ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ.

Advertisement

ರಾಜ್ಯ ಸರ್ಕಾರ ಈಗಲಾದರೂ ನಮ್ಮ ಮನವಿಯನ್ನು ಅಂಗೀಕರಿಸಿ, ಜಾತಿ ಪಟ್ಟಿಯಲ್ಲಿ ಮತ್ತೆ ವೈಶ್ಯ ಜಾತಿಯ ಹೆಸರು ಸೇರಿಸುವ ಮೂಲಕ ಸಮಾಜ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕು. ಹಿಂದಿನಂತೆ ಜಾತಿ ಪಟ್ಟಿಯಲ್ಲಿ ಸಮಾಜದ  ಹೆಸರು ಕಾಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆರ್‌.ಎಲ್‌. ಪ್ರಭಾಕರ್‌, ನಿರ್ದೇಶಕರಾದ ಆರ್‌.ಜಿ. ಶ್ರೀನಿವಾಸಮೂರ್ತಿ, ಕೆ.ಎನ್‌.ಅನಂತರಾಮಶೆಟ್ಟಿ, ಬಿ.ಟಿ. ಅಶ್ವತ್‌ರಾಜ್‌, ಜಿಲ್ಲಾ ಅಧ್ಯಕ್ಷ ಆರ್‌.ಜಿ. ನಾಗೇಂದ್ರ ಪ್ರಕಾಶ್‌, ಬಿ.ಟಿ. ಹನುಮಂತಶೆಟ್ಟಿ, ಬಿ.ಎಸ್‌. ರವಿಶಂಕರ್‌, ಎಂ. ನಾಗರಾಜಗುಪ್ತ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next