Advertisement

ಹೆಂಡ್ತಿನ ತವರಿಗೆ ಕಳಿಸಿ ಬಾರಿನ್ಯಾಗ ಶೂರತನಾ ತೋರಿಸಿದಂಗಾತು!

10:20 PM Mar 25, 2017 | Team Udayavani |

ಮಾಧ್ಯಮಗಳ ಅತಿರೇಕ್ಕ ಬ್ರೇಕ್‌ ಹಾಕಬೇಕು ಅನ್ನೋ ರಾಜಕಾರಣಿಗಳು ತಮ್ಮ ಅತಿರೇಕಗೋಳ್ನ ಕಡಿಮಿ ಮಾಡ್ಕೊಂಡ್ರ, ಟಿವಿಯಾರು ಬೇಕಂದ್ರ ಬರಗಾಲದ ಸುದ್ದಿ ಮಾಡ್ತಾರ. ಇಲ್ಲಾಂದ್ರ, ಕಾಮಿಡಿ ಶೋ ಹಾಕ್ಕೊಂಡು ಕುಂದರತಾರು. ಕಾನೂನು ಮಾಡೋರು ಕಾನೂನು ಪಾಲಿಸಬೇಕು ಅನ್ನೋ ಪರಿಜ್ಞಾನ ಆಳ್ಳೋರಿಗೆ ಬಂದ್ರ ಸಾಮಾನ್ಯರ ನಡವಳಿಕೆನೂ ಬದಲಕ್ಕೇತಿ ಅನಸೆôತಿ.  ರಾಜಕಾರಣಿ ವಿಐಪಿ ಅಂಡ್ಕೊಂಡು ರೋಡ್‌ ಬ್ಲಾಕ್‌ ಮಾಡಿದ್ರ, ಅಂಬೂಲೆನ್ಸ್‌ನ್ಯಾಗ ಸಾಯಿತಿರೋ ರೋಗಿಗೆ ಸಿಟ್ಟು ಬರದ ಇರತೈತಾ? 

Advertisement

ಯಜಮಾನ್ತಿ ಊರಿಗೆ ಹೋಗು ಮುಂದ, ಇನ್ನೇನು ಫ‌ುಲ್‌ ಫ್ರೀಡಂ ಸಿಗತೈತಿ. ರಾತ್ರಿ ಮನಿಗೆ ಎಷ್ಟೊತ್ತಿಗೆ ಬಂದು ಹತ್ತಿರೋ ನೋಡ್ರಿ, ಅಂತ ಹೇಳಿದ್ಲು. ಹೆಂಡ್ತಿ ತವರಿಗಿ ಹೋದ್ರ ಗಂಡಗ ಒಂದ ರೀತಿ ಫ್ರೀಡಂ ಸಿಕ್ಕಂಗ ಅಂತ ಗೆಳ್ತಾರ ಮುಂದ ಹೇಳಿದ್ದು ಹೆಂಗೋ ಅಕಿ ಕಿವಿಗಿ ಬಿದ್ದು ಬಿಟ್ಟಿತ್ತು. ನಮ್ಮ ಪೊಲಿಟಿಕಲ್‌ ಪಾರ್ಟಿಯಾರು ಎಷ್ಟ ರಹಸ್ಯ ಸಭೆ ಮಾಡಿದ್ರು, ಇಂಟಿ ಜೆನ್ಸ್‌ನ್ಯಾರಿಗಿಂತ ಟಿವಿಯಾರಿಗಿ ಮೊದ್ಲ ಗೊತ್ತಾಗುವಂಗ, ಹೆಂಡ್ತಿ ಬಗ್ಗೆ ಏನ್‌ ಮಾತಾಡಿದ್ರೂ ಅದು ಹೋಗಿ ಅಕಿ ಕಿವಿಗಿ ಬೀಳೆôತಿ. 

ಅದ್ಕ ಊರಿಗಿ ಹೋಗು ಮುಂದ ಆ ಮಾತು ಹೇಳಿ ಹೋಗಿದ್ಲು. ಗಂಡಸು ಅನ್ನೋದು ಒಂದು ರೀತಿ ಮರ್ಲ್ (ಮಸ್ತಿ) ಹೋರಿ ಇದ್ದಂಗ. ಅದಕ್ಕ ಸರಿಯಾದ ಟೈಮಿನ್ಯಾಗ ಮೂಗಿಗಿ ದಾರ ಹಾಕಲಿಲ್ಲಾ ಅಂದ್ರ, ಎಲ್ಲಿ ಹೋಗಿ ಯಾವಾಗ ಏನ್‌ ಮಾಡತೈತಿ ಅನ್ನೋದ ಗೊತ್ತಾಗುದಿಲ್ಲಾ. ಯಾವನರ ವಯಸ್ಸಿನ ಹುಡುಗಾ ಊರಾಗ ಭಾಳ ಹಾರ್ಯಾಡಾಕತ್ತಿದ್ದಂದ್ರ ದೌಡು ಗುದ್ದಿ ಕಟ್ಟರಿ ಅವಂಗ ಇಲ್ಲಾಂದ್ರ ಹಿಡೊದ ಕಷ್ಟ ಅಕ್ಕೇತಿ ಅಂತ ದಾರಿ ತಪ್ಪೊ ಹುಡುಗುಗ ಮದುವಿ ಮಾಡಿದ್ರ, ಹೆಂಡ್ತಿ ಬಂದ್ಲಂದ್ರ ತಾನ ದಾರಿಗಿ ಬರ್ತಾನು ಅನ್ನೋದು ಒಂದು ನಂಬಿಕೆ ನಮ್ಮ ಹಿರ್ಯಾರಿಗೆ. ಅದ್ಕ ಗಂಡಿಗೆ ಹೆಂಡ್ತಿ ಅನ್ನೋದೊಂದು ಲಗಾಮು ಇರಬೇಕಂತ ಹೇಳತಾರು. 

ವಿಧಾನಮಂಡಲದ ಅಧಿವೇಶನದಾಗ  ಈ ಟಿವಿ ಮಾಧ್ಯಮದಾರ ಮ್ಯಾಲ ಲಗಾಮ್‌ ಹಾಕಬೇಕು ಅಂತ ಎಲ್ಲಾ ಎಂಎಲ್‌ಎಗೋಳು ಪಕ್ಷಾ ಭೇದಾ ಮರತು, ಹೊಟ್ಯಾನ ಸಿಟ್ಟೆಲ್ಲಾ ಹೊರಗ ಹಾಕಿದ್ರು. ಟಿವಿ ಮಂದಿ ಮ್ಯಾಲ ಅವರಿಗೆ ಎಷ್ಟು ಸಿಟ್ಟು ಇತ್ತಂದ್ರ, ಎದರಿಗೆ ಸಿಕ್ಕರ ಹೊಡದ ಬಿಸಾಡಿ ಬಿಡಬೇಕು ಅನ್ನುವಷ್ಟು ರೋಷಾ ತುಂಬಕೊಂಡಿದ್ರು. ಅದರಾಗ ಟಿವಿ ಆಂಕರ್‌ಗೊಳ ಮ್ಯಾಲಂತೂ ಅವರಿಗೆ ಸಿಟ್ಟು ಉಕ್ಕಿ ಹರಿತು. ಟಿವ್ಯಾಗ ಆಂಕರ್‌ಗೊಳು ಬಳಸೋ ಪದಗಳ ಬಗ್ಗೆ, ಕ್ರೈಂ ಮತ್ತು ಸೆಕ್ಸ್‌ನ° ವೈಭವೀಕರಿಸೋದ್ರ ಬಗ್ಗೆ ಕೆಲವರ ಆಕ್ಷೇಪ ಇತ್ತು. ಟಿವಿಯವರೂ ಒಮ್ಮೊಮ್ಮೆ ಹಂಗ ಮಾಡೂದು ಖರೇನ. ಏನಾದ್ರೂ ಇನ್ಸಿಡೆಂಟ್‌ ಆದ್ರ, ಮೋಹರಂ ಹಬ್ಬದಾಗ, ದೇವರು ಮೈ ಮ್ಯಾಲ ಬಂದಂಗ ಮಾಡ್ತಾರು. ಟಿವಿ ಪರದೆ ಮ್ಯಾಲ ಪಾಂಡಿತ್ಯ ಪ್ರದರ್ಶನ ಮಾಡಾಕ್‌ ಹೋಗಿ ಅಪಹಾಸ್ಯಕ್ಕೀಡಾದವರು ಅದಾರು. 

ಬೆಂಗಳೂರಾಗ ಜೋರ್‌ ಮಳಿ ಆದ್ರ, ರೋಡ್‌ತುಂಬ ನೀರು ತುಂಬುದು ಕಾಮನ್‌. ಒಂದಿನಾ ಜೋರ್‌ ಮಳಿಯಾಗಿ 
ಇಂದಿಧಿರಾನಗರದ 80 ಫೀಟ್‌ ರೋಡಿನ್ಯಾಗ ಫ‌ುಲ್‌ ನೀರು ತುಂಬ್ಕೊಂಡಿತ್ತು. ಬ್ರೇಕಿಂಗ್‌ ನ್ಯೂಸ್‌ ಓದೊ ಭರಾಟೆಲಿ, ಆಂಕರ್‌ ಇಂದಿರಾನಗರದಲ್ಲಿ 80 ಅಡಿ ನೀರು ತುಂಬಿಕೊಂಡಿದೆ. ಎಂಎಲ್‌ಎ, ಕಾಪೊರೇಟರ್‌ ಕಾಣೆಯಾಗಿದ್ದಾರೆ ಅಂತ ಉಸರ ಬಿಡದಂಗ ಓದಿದ್ಲು. 80 ಅಡಿ ರಸ್ತೆ ಹೋಗಿ 80 ಅಡಿ ನೀರು ನಿಂತೇತಿ ಅಂತಾ ಬೆಚ್ಚಿ ಬೀಳಿಸಿದ್ರು. 

Advertisement

ಇನ್ನೊಂದು ವಿಷಯ ನಿತ್ಯಾನಂದನ ಅತ್ಯಾಚಾರ ಪ್ರಕರಣಧಿದಾಗಂತೂ ಚಾನೆಲ್‌ಗ‌ಳಲ್ಲಿ ಪದ ಬಳಕೆ ಮಾಡಿದ್ದು, ನಿಘಂಟು ತಜ್ಞರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೊಸ ಪದಗೋಳು ಹುಟ್ಟಿ‑ಕೊಂಡಿದುÌ. ಅವತ್ತು ನಿತ್ಯಾನಂದನ ಪುರುಷತ್ವ ಪರೀಕ್ಷೆ  ನಡ್ಯಾಕತ್ತಿತ್ತು. ಸ್ಟುಡಿಯೋದಾಗ ಕುಂತ ಲೇಡಿ ಆಂಕರ್‌ ಫೋನೊ ತೊಗೊಳ್ಳು ಸಲುವಾಗಿ ರಿಪೋರ್ಟರ್‌ಗೆ ಒಂದು ಪ್ರಶ್ನೆ ಕೇಳಿದು. ನಿತ್ಯಾನಂದನ ಪುರುಷತ್ವ ಪರೀಕ್ಷೆ ಆರಂಭ ಆಗಿದಿಯಾ? ಹಸ್ತ ಮೈಥುನ ಕಾರ್ಯ ಆರಂಭವಾಗಿದಿಯಾ? ಹಸ್ತ ಮೈಥುನ ಕಾರ್ಯ ಹೇಗೆ ನಡೀತಿದೆ? ಅಂತ ಫ‌ುಲ್‌ ಜೋಷ್‌ನ್ಯಾಗ ಕೇಳಿ ಬಿಟ್ಲು. ವಿಕ್ಟೋರಿಯಾ ದವಾಖಾನಿ ಮುಂದ ನಿಂತ ರಿಪೋರ್ಟರ್‌ ಅಕಿ ಪ್ರಶ್ನೆ ಕೇಳಿ ಬೆಚ್ಚಿ  ಬಿದ್ದಾ. ಅದಕ್ಕೇನು ಉತ್ತರಾ ಹೇಳ್ಳೋದು ಅಂತ, ಮೂರು ಸಾರಿ ಹಲೋ, ಹಲೋ, ಹಲೋ ಅಂತೇಳಿ, ತನಗ ಏನೂ ಕೇಳಿಸಿಲ್ಲ ಅನ್ನಾರಂಗ ಮಾಡಿ ಫೋನ್‌ ಕಟ್‌ ಮಾಡಿದ್ದಾ. ಟಿವ್ಯಾರು ಯಡವಟ್ಟು ಮಾಡ್ತಾರು ಅಂದಕೂಡಲೆ ಜನ ಪ್ರತಿನಿಧಿಗೋಳು ಮಾಡೋದು ಏನು ತೋರಿಸಬಾರದು ಅಂತೇಧಿನಿಲ್ಲಾ, ಟಿವ್ಯಾಗ ಎಷ್ಟೊ ಚೊಲೊ ಕಾರ್ಯಕ್ರಮ ಬರ್ತಾವು. ಆದ್ರ, ಅದನ್ನ ನೋಡಾರಿಗೆ ತಾಳ್ಮೆಯಿಲ್ಲಾ. ಟಿವ್ಯಾರಿಗೂ ಟಿಆರ್‌ಪಿ ಇಲ್ಲದ ಭವಿಷ್ಯ ಇಲ್ಲಾ ಅನ್ನುವಂಗಾಗೇತಿ. ಟಿವಿಯಾರಂಗ ಎಲ್ಲಾರಿಗೂ ಕೆಟ್ಟದ ಮಾತ್ರ ಎದ್ದು ಕಾಣತೈತಿ. ಎಂಎಲ್‌ಎಗೋಳು ತಾವು ಮಾಡಿದ್ದು ಕೆಟ್‌ ಕೆಲಸಾನ ಯಾರಿಗೂ ತೋರಿಸಬಾರದು ಅಂದ್ರ ಹೆಂಗ? ಅವರ ತಪು° ಪ್ರಶ್ನೆ ಮಾಡಾಕ ಯಾರರ ಬೇಕಲ್ಲಾ? 

ಮಿಡಿಯಾದಾರು ಮಿತಿ ಮೀರಿ ಹೊಂಟಾರು ಅವರಿಗೊಂದು ಲಗಾಮು ಹಾಕಬೇಕು ಅನ್ನೋ ರಾಜಕಾರಣಿಗೋಳು ಮಿತಿ ಮೀರ್ಯಾರು ಅನ್ನೋದು ಸಮಾಜದಾಗ ಕೇಳಿ ಬರತೈತಿ. ಖಾಸಗಿ ಬಸ್‌ ಟಿಕೆಟ್‌ ಹರಿಯಾರು, ಪೊಲಿಸ್‌ ಕಾನ್‌ಸ್ಟೆಬಲ್‌ ಆದಾರೆಲ್ಲಾ, ಎಂಎಲ್‌ಎ ಆಗೋದ್ರಾಗ ಕೋಟ್ಯಾಧೀಶರಕ್ಕಾರು. ಎಪ್ಪತ್ತು ವರ್ಷಧಿಧಿದಿಂದ ದೇಶದ ಜನರಿಗೆ ಕುಡ್ಯಾಕ ನೀರು ಕೊಡ್ತೇವಿ ಅಂತ ಹೇಳಿಕೊಂಡು ಬಂದ್ರೂ ಇನ್ನೂ ನಮ್‌ ಜನಾ ಕಿಲೋಮೀಟರ್‌ಗಟ್ಟಲೇ ಬಗಲಾಗ ಕೊಡ ಹೊತಕೊಂಡು ಹೋಗುದು ತಪ್ಪಿಲ್ಲ ಅಂದ್ರ ಸುಳ್ಳು ಹೇಳುದೂR  ಒಂದು ಲಿಮಿಟ್‌ ಇರಬೇಕಲ್ಲಾ? 

ಎಂಎಲ್‌ಎ ಆಗೇನಿ ಅಂತೇಳಿ ಕಂಡಾರ ಹೆಂಡ್ತಿ ಮನಿಗಿ ಹೋಗಿ ಸೀರಿ ಸೆರಗ್‌ ಎಳದ್ರೂ ಸುಮ್ಮನಿರಬೇಕಾ? ವಿಧಾನಸೌಧದಾಗ ಕುಂತು ಬ್ಲೂ ಫಿಲ್ಮ್ ನೋಡಿದ್ರೂ ಜೈ ಅನಬೇಕಾ? ಇಲೆಕ್ಷನ್ಯಾಗ ಇಷ್ಟ ದುಡ್ಡು ಖರ್ಚು ಮಾಡ್ರಿ ಅಂತ ಹೇಳಿದ್ರೂ, ಬೇಕಾ ಬಿಟ್ಟಿ ಖರ್ಚು ಮಾಡೂದೂR ಒಂದು ಲಿಮಿಟ್‌ ಬೇಕಲ್ಲಾ. ಎಲ್ಲಾದೂ ಒಂದು ಲಿಮಿಟ್‌ ಅಂತ‌ ಇದ್ದಿದ್ರ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ  85ರ ಇಳಿ ವಯಸ್ಸಿನ್ಯಾಗ ಎಲ್ಲಾ ಅಧಿಕಾರ ಕೊಟ್ಟ ಪಕ್ಷ ಬಿಟ್ಟು ಯಾಕ್‌ ಹೊಕ್ಕಿದ್ರು. ಇವರ ಯಾವ ಆದರ್ಶನ ಜನಾ ಪಾಲಿಸಬೇಕು? ರಾಜಧಿಕಾರಣ ಮಾಡೋದೂ ಒಂದು ವಯಸ್ಸಿನ ಮಿತಿ ಬೇಕು ಅನಸೆತಿ. 

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ  ಇಲ್ಲಿ ಎಲ್ಲಾದೂ ಮುಕ್ತ ಸ್ವಾತಂತ್ರ್ಯ ಐತಿ. ಅದು ಎಷ್ಟರ ಮಟ್ಟಿಗೆ ಬಂದೈತಿ ಅಂದ್ರ, ನಾವೇ ಸುಪ್ರೀಂ ಅನ್ನೊ ಧಿಥರಾ ಎಲ್ಲಾರೂ ಅವರವರ ಮೈಂಡಿನ್ಯಾಗ ತುಂಬಕೊಂಡು ಬಿಟ್ಟಾರು. ಜನ ಪ್ರತಿನಿಧಿಗಳು ದೇಶಕ್ಕ ಕಾನೂನು ಮಾಡಾರ ನಾವು, ನಾವು ಹೇಳಿದಂಗ ಎಲ್ಲಾ ನಡಿಬೇಕು ಅಂತ ಸದನದ  ಒಳಗ ಇದ್ದಾಧಿಗ, ಟಿವ್ಯಾರ್ನ ಅಷ್ಟ ಅಲ್ಲಾ, ಕೋರ್ಟ್‌ನೂ ಬೈತಾರ, ಜಡ್ಜ್ಗೋಳು° ಬೈಧಿತಾರ. ಇದ ಜನಪ್ರತಿನಿಧಿಗಳು ಕೋರ್ಟಿಗೆ ಬಂದಾಗ ಜಡ್ಜ್  ಗೋಧಿಳು ನಾವ ಸುಪ್ರೀಂ ನಮ್ಮ ಆದೇಶ ನೀವು ಪಾಲಿಸಬೇಕು ಅಂತಾರು. ಅವರ ಮ್ಯಾಲ ಸಿಟ್ಟು ಬಂತು ಅಂದ್ರ ಸಂಸತ್ತು ನಾವ ಸುಪ್ರೀಂ ಅಂತ ನಾವು ಮಾಡಿದ ಕಾನೂನು ಕೋರ್ಟ್‌ ಆದೇಶ ಮಾಡಬೇಕು ಅಂತಾರು. ರಾಜಕೀದಾರ ಆಟಾ ನೊಡಿದ ಮತದಾರ ಓಟ್‌ ಹಾಕಾಂವ್‌ ನಾನು ಸುಪ್ರೀಂ ಅಂತ ಎಲೆಕ್ಷನ್ಯಾಗ ತನ್ನ ಅಧಿಕಾರ ತೋರಸ್ತಾನ. 

ಇನ್ನ ನಮ್ಮ ಸಂವಿಧಾನ ಎಲ್ಲಾರಿಗೂ ಎಲ್ಲಾ ಥರದ ಅಧಿಕಾರ ಸಿಗುವಂಗ ಮಾಡೇತಿ. ಆದ್ರ, ಅದು ಎಲ್ಲಾ ವಿಷಯದಾಗೂ ಸ್ವಲ್ಪ ಜಾಸ್ತಿ ಆಗೇತಿ ಅನ್ನೋದ ಈಗ ದೇಶದಾಗ ನಡಿತಿರೋ ದೊಡ್ಡ ಚರ್ಚೆ. ಟಿವ್ಯಾರು ಮಿತಿ ಮೀರಿ ನಡಕೋತಾರು ಅನ್ನೋದನ್ನ ಮಾತಾಡೋರು ತಾವು ಎಷ್ಟು ಲಿಮಿಟ್ಸ್‌ನ್ಯಾಗ ಅದಾರು ಅನ್ನೋದೂ° ಯೋಚನೆ ಮಾಡಬೇಕು. ಹೆಂಗೋ ಹೆಂಡ್ತಿ ತವರಿಗಿ ಹೋಗ್ಯಾಳಂತೇಳಿ ದೋಸ್ತಗೋಳ ಕೂಡ ಬಾರಿನ್ಯಾಗ ಕುಂತು ಬಾಯಿಗಿ ಬಂದಂಗ ಬೈದ್ರ, ಅಕಿಗಿ ಸುದ್ದಿ ಮುಟ್ಟದಂಗ ಇರತೈತಾ? ಯಾವ ಸಾಮಾಜ್ರéದ ದೊರೆ ಆದ್ರೂ, ಅಡಿಗಿ ಮನ್ಯಾಗ ಅವಂಗೂ ಒಂದು ಲಿಮಿಟ್‌ ಇದ್ದ ಇರತೈತಿ. 2008ರಾಗ ಬಿಜೆಪ್ಯಾರಿಗೆ ಅಧಿಕಾರ ಕೊಟ್ರ, ಅವರ ನಡವಳಿಕೆ ಅತಿ ಆತು ಅಂತ ಹೇಳೆ ಜನಾ ಅವರಿಗೆ ಅಧಿಕೃತ ಪ್ರತಿಪಕ್ಷದ ಸ್ಥಾನಾನೂ ಸಿಗದಂಗ ಮಾಡಿದ್ರು. 

ಟಿವಿ ಮಾಧ್ಯಮದಾರಿಗೆ ಸ್ವಯಂ ನಿಯಂತ್ರಣ ಹಾಕೋಬೇಕು ಅಂತ ಅಂದ್ರ, ಅವಿನ್ನೂ ಮರ್ಲ್ ಹೋರಿ ಇದ್ದಂಗ ಅದಾವು, ಅವಕ್ಕ ಮುಗದಾನ ಹಾಕದ ಕಾಗರದಾಗ ಬಿಚ್ಚಿ ಹೊಡದ್ರ, ಸುಮ್ನ ಇರು ಅಂದ್ರ ಹೆಂಗಿರ್ತಾವು? ಟಿವಿ ಮಾಧ್ಯಮಗಳ ಸ್ಥಿತಿನೂ ಹಂಗ ಆಗೇತಿ. ಯಾವ ಸುದ್ದಿ ಕೊಟ್ಟರ ಜನಾ ನೋಡ್ತಾರು ಅನ್ನೋ ಗೊಂದಲ ಟಿವಿಯಾರಿಗೆ ಕಾಡತೈತಿ ಅನಸೆôತಿ. ಅವರು ಸುದ್ದಿ ಪ್ರಸಾರ ಮಾಡಾಕ ಸ್ವಂತ ಬುದ್ದಿ ಉಪಯೋಗಿಸುದ್ಕಿಂತ ಬ್ಯಾರೇ ಟಿವ್ಯಾಗ ಏನ್‌ ಬರತೈತಿ ಅನ್ನೋದರ ಮ್ಯಾಲ ಜಾಸ್ತಿ ತಲಿ ಕೆಡಿಸಿಕೊಳ್ಳುವಂಗ ಕಾಣಧಿತೈತಿ. ಹಿಂಗಾಗಿ, ಒಂದು ಟಿವ್ಯಾಗ ಮೇಟಿ ಸಿಡಿ ಬಂತಂದ್ರ, ಎಲ್ಲಾ ಟಿವ್ಯಾನ ಮಂದಿ ಮೈಯಾಗ ದೇವರು ಬಂದಂಗ ಮಾಡ್ತಾರು. ಈಗ ಪ್ರಧಾನಿ ನರೇಂದ್ರ ಮೋದಿ ವಿಷಯದಾಗೂ ಹಂಗ ಆಗಾತೇತಿ ಅನಸಾಕತ್ತೇತಿ. ಬಿಜೆಪ್ಯಾರು ಏಕ ವ್ಯಕ್ತಿ ಆರಾಧನೆ ಮಾಡುದು ನೋಡಿದ್ರ, ದೇಶದ ಪ್ರಜಾಪ್ರಭುತ್ವದ ಬೇರು ಅಲುಗಾಡ್ತಾವು ಅನಸೆôತಿ. ಈ ದೇಶ ಹಿಂದೊಮ್ಮೆ ಇಂದಿರಾಗಾಂಧಿಗೆ ಅತಿಯಾಗಿ ಅಧಿಕಾರ ಕೊಟ್ಟು ಅನುಭವಿಸೇತಿ. 

ನಮ್ಮ ದೇಶದಾಗ ಯಾರಿಗೆ ಯಾರು ಮೂಗುದಾರ ಹಾಕಬೇಕು ಅನ್ನೋದು ದೊಡ್ಡ ಪ್ರಶ್ನೆ ಕಾಡಾತೈತಿ. ವಿಧಾನಸೌಧದಾಗ ತಾವು ಮಾಡೋಧಿದೆಲ್ಲಾ ತೋರಸ್ತಾರು ಅಂತೇಳಿ ಟಿವಿ ಮಂದಿನ ಹೊರಗ ಹಾಕಿ, ಭಾಷಣ ಮಾಡಿದ್ರ, ಇವರ ಸಾಧನೆ ನೋಡಾಕ ಜನಾ ಏನು ಚಂದನ ಟಿವಿ ನೋಡಾಕ್‌ ಕಾಕೋಂತ ಕುಂತಿರ್ತಾರ? ಮಾಧ್ಯಮಗಳ ಅತಿರೇಕಕ್ಕ ಬ್ರೇಕ್‌ ಹಾಕಬೇಕು ಅನ್ನೋ ರಾಜಧಿಕಾರಣಿಗಳು ತಮ್ಮ ಅತಿರೇಕಗೋಳ್ನ ಕಡಿಮಿ ಮಾಡ್ಕೊಂಡ್ರ, ಟಿವಿಯಾರು ಬೇಕಂದ್ರ ಬರಗಾಲದ ಸುದ್ದಿ ಮಾಡ್ತಾರ. ಇಲ್ಲಾಂದ್ರ, ಕಾಮಿಡಿ ಶೋ ಹಾಕ್ಕೊಂಡು ಕುಂದರತಾರು. ಕಾನೂನು ಮಾಡೋರು ಕಾನೂನು ಪಾಲಿಸಬೇಕು ಅನ್ನೋ ಪರಿಜ್ಞಾನ ಆಳ್ಳೋಧಿರಿಗೆ ಬಂದ್ರ ಸಾಮಾನ್ಯರ ನಡವಳಿಕೆನೂ ಬದಲಕ್ಕೇತಿ ಅನಸೆôತಿ.  ರಾಜಕಾರಣಿ ವಿಐಪಿ ಅಂಡ್ಕೊಂಡು ರೋಡ್‌ ಬ್ಲಾಕ್‌ ಮಾಡಿದ್ರ, ಅಂಬೂಧಿಲೆನ್ಸ್‌ನ್ಯಾಗ ಸಾಯಿತಿರೋ ರೋಗಿಗೆ ಸಿಟ್ಟು ಬರದ ಇರತೈತಾ? 

ಮಿಡಿಯಾದಾರ್ನ ಹೊರಗ್‌ ಹಾಕೋ ರಾಜಕಾರಣಿಗೋಳು ಪ್ರಜಾಪ್ರಭುತ್ವ ವ್ಯವಸ್ಥೆದಾಗ ಕಾವಲು ನಾಯಿ ಥರಾ ಇರೋ ನಾಲ್ಕನೇ ಅಂಗಾನ ಹತ್ತಿಕ್ಕಬೇಕು ಅನ್ನೋ ಲೆಕ್ಕಾಚಾರ ನಡಿಸಿದಂಗೈತಿ. ಆದ್ರ, ಈಗ ಇದಕ್ಕಿಂತ  ಇನ್ನೊಂದು ಪಂಚಾಂಗ ಬಂದೈತಲ್ಲಾ, ಸೋಸಿಧಿಯಲ್‌  ಮೀಡಿಯಾ ಅಂತ, ಅದೊಂದ ಥರಾ ಅಶ್ವಮೇಧಿಧದ ಕುದುರಿ ಇದ್ದಂಗ ಯಾರಿಗೂ ಸಿಗದಂಗ ಓಡಾಕತ್ತೇತಿ. ಪ್ರಜಾಧಿಪ್ರಭುತ್ವದ ಪಾಲಕನೇ ಅದರ ಮಾಲೀಕ ಆಗಿರೋದ್ರಿಂದ ಆಂವ ಲಿಮಿಟ್ಸ್‌  ಮೀರದಂಗ ನೋಡಕೊಬೇಕು ಅಂದ್ರ, ದೇಶಾ ಆಳಾರೂ ಲಿಟಿಮ್ಸ್‌ ಮೀರದಂಗ ನಡಕೊಳ್ಳುದು ಕಲಿಬೇಕಕ್ಕೇತಿ. ಇಲ್ಲಾಂದ್ರ ಸದನದಾಗ ಭಾಷಣಾ ಮಾಡಾಕ ಅಲ್ಲಾ, ವಿಧಾನಸಭೆ, ಸಂಸತ್ತಿನೊಳ‌ಗೂ ಹೋಗಾಕ ಅವಕಾಶ ಸಿಗದಂಗ ಅಕ್ಕೇತಿ. 

ಹೆಂಡ್ತಿ ಸ್ವಾತಂತ್ರ್ಯ ಕೊಟ್ಟಾಳು ಅಂತ ಕಂಠ ಪೂರಾ ಕುಡುದು ರಾತ್ರಿ ತಡಾ ಆಗಿ ಮನಿಗಿ ಹೋಗುದು ತಪ್ಪು, ಗಂಡಾ ಸೆರೆ ಕುಡುದು ಲೇಟಾಗಿ ಬಂದಾನು ಅಂತ ಹೊರಗ ಹಾಕುದು ಹೆಂಡ್ತಿದು ತಪ್ಪ. ಇಬ್ರೂ ತಮ್ಮ ಲಿಮಿಟ್ಸ್‌ ಮೀರದಿದ್ರ ಎಲ್ಲಾ ತಾನ ಸರಿ ಇರತೈತಿ.

ಶಂಕರ ಪಾಗೋಜಿ  

Advertisement

Udayavani is now on Telegram. Click here to join our channel and stay updated with the latest news.

Next