Advertisement

ಪವಾಡವೇ? : ಕಣ್ಣು ತೆರೆದು ಮುಚ್ಚಿದ ಅಯ್ಯಪ್ಪನ ವಿಗ್ರಹ!

05:36 PM Dec 29, 2021 | Team Udayavani |

ಕೊಯಮತ್ತೂರು: ಅಭಿಷೇಕದ ವೇಳೆ ಅಯ್ಯಪ್ಪನ ವಿಗ್ರಹ ಕಣ್ಣು ತೆರೆದು ಮುಚ್ಚಿರುವ ವಿಡಿಯೋವೊಂದು ವೈರಲ್ ಆಗಿದೆ.

Advertisement

ಶನಿವಾರದಂದು ಮಣಿ ಕಂಠಸ್ವಾಮಿ ದೇವಸ್ಥಾನದಲ್ಲಿ 40ನೇ ವಾರ್ಷಿಕ ಪೂಜೆಗೆ 3,000ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಜಮಾಯಿಸಿದಾಗ ಈ ಘಟನೆ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ.

ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ, ಹಿರಿಯ ಗುರುಸ್ವಾಮಿಗಳು ತುಪ್ಪವನ್ನು ಅಭಿಷೇಕ ಮಾಡುತ್ತಿರುವ ವೇಳೆ ವಿಡಿಯೋ ಮಾಡುತ್ತಿದ್ದವರು ವಿಗ್ರಹ ಕಣ್ಣು ತೆರೆಯುವುದು ಮತ್ತು ಮುಚ್ಚುವುದನ್ನು ಗಮನಿಸಿದ್ದಾರೆ.

ಇದು ನಾಲ್ಕಕ್ಕೂ ಹೆಚ್ಚು ಬಾರಿ ನಡೆಯಿತು ಮತ್ತು ವೀಡಿಯೊ ವೈರಲ್ ಆದ ನಂತರ ವರದಿಯಾದ ಪವಾಡವನ್ನು ವೀಕ್ಷಿಸಲು ಪ್ರದೇಶದ ನೂರಾರು ಜನರು ದೇವಾಲಯಕ್ಕೆ ಧಾವಿಸಿ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next