Advertisement

ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

07:05 PM Mar 21, 2021 | Team Udayavani |

ಗುಡಿಬಂಡೆ: ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಮರೇಶ್‌ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಂಪಸಂದ್ರ ಗ್ರಾಮದ ಬೀದಿ ಬೀದಿಗಳಲ್ಲಿ ಪ್ರದಕ್ಷಣೆ ಮಾಡಿ ಸಾರ್ವಜನಿಕರ ಜೊತೆ ಸಂವಾದ ನಡೆಸಿದರು.

Advertisement

ಪ್ರದಕ್ಷಣೆ ವೇಳೆ ಗ್ರಾಮದ ಚರಂಡಿ, ರಸ್ತೆ, ದೇವಾಲಯ, ಅಂಗನವಾಡಿ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿ ಚರಂಡಿಗಳನ್ನು ನೋಡಿ ಸ್ವತ್ಛ ಮಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಹಂಪಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್‌ ಮಾತನಾಡಿ, ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದು ಎರಡನೇ ಕಾರ್ಯಕ್ರಮವಾಗಿದೆ ಎಂದರು.

ಲಸಿಕೆ ಹಾಕಿಸಿಕೊಳ್ಳಿ: 45 ವರ್ಷ ಮೇಲ್ಪಟ್ಟವರು ಕೊರೊನಾ ಸೋಂಕಿನಿಂದ ಪಾರಾಗಲು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದರು. ಶಾಸಕ ಎಸ್‌.ಎನ್‌ ಸುಬ್ಟಾರೆಡ್ಡಿ ಮಾತನಾಡಿ, ಗುಡಿ ಬಂಡೆ ತಾಲೂಕು ಅತಿ ಚಿಕ್ಕದಾಗಿದ್ದರು, ಸಕಾಲ, ಇ-ಕ್ಷಣ ಯೋಜನೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದು, ಎಸ್‌ಎಸ್‌ ಎಲ್‌ಸಿ ಫ‌ಲಿತಾಂಶದಲ್ಲೂ ಸಹ ಪ್ರಥಮ ಸ್ಥಾನ ಗಳಿಸಿ ಹೆಸರು ಮಾಡಿದ್ದು, ಇಂತಹ ತಾಲೂಕಿನಲ್ಲಿ ಎರಡನೇ ಬಾರಿಗೆ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ನಮ್ಮ ಜನರ ಸೌಭಾಗ್ಯ. ಗ್ರಾಮ ವಾಸ್ತವ್ಯದಿಂದ ಜನರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲಕರವಾಗಿದೆ ಎಂದರು.

ಹೊಗೆ ಮುಕ್ತ ತಾಲೂಕು: ತಾಲೂಕಿನಲ್ಲಿ 115 ಹಳ್ಳಿಗಳಿದ್ದು, 85 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾಗಿದ್ದು, ಇನ್ನುಳಿದ 30 ಹಳ್ಳಿಗಳಲ್ಲಿ ಶೀಘ್ರದಲ್ಲಿ ಆರ್‌ಒ ಪ್ಲಾಂಟ್‌ಗಳನ್ನು ಹಾಕಿಸಲಾಗು ವುದು. ಈಗಾಗಲೇ ತಾಲೂಕಿನ ಎಲ್ಲಾ ಮನೆಗಳಲ್ಲಿ ಗ್ಯಾಸ್‌ ಸೌಲಭ್ಯವಿದ್ದು, ಉಳಿದ ಮನೆಗಳಿಗೂ ಶೀಘ್ರದಲ್ಲೇ ಉಚಿತವಾಗಿ ಗ್ಯಾಸ್‌ ಸಂಪರ್ಕ ಹಾಕಿಸಿಕೊಟ್ಟು, ರಾಜ್ಯದಲ್ಲೇ ಪ್ರಥಮ ಹೊಗೆ ಮುಕ್ತ ತಾಲೂಕು ಘೋಷಣೆ ಮಾಡಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಜಿ.ಪಂ. ಸದಸ್ಯೆ, ಜಿಲ್ಲಾಆರೋಗ್ಯಾಧಿಕಾರಿ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷೆ ಸೇರಿ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು, ನಂತರ ಸರ್ಕಾರ ವಿವಿಧ ಯೋಜನೆ ಗಳಾದ ಭಾಗ್ಯಲಕ್ಷ್ಮಿà ಬಾಂಡ್‌, ಪಿಂಚಣಿ ಆದೇಶ ಪ್ರತಿ, ಅಂಗವಿಕಲರ ಸಾಧನಾ ಸಲಕರಣೆ, ಮುಂತಾದ ಸೌಲಭ್ಯಗಳನ್ನು ಸ್ಥಳದಲ್ಲೇ ಒದಗಿಸಿಕೊಟ್ಟರು. ಜಿಪಂ ಸದಸ್ಯರಾದ ಗಾಯತ್ರಿ ನಂಜುಂಡಪ್ಪ, ಉಪ ವಿಭಾಗಾಧಿ ಕಾರಿ ರಘುನಂದನ್‌, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಇಂದಿರಾ ಕಬಾಡೆ, ತಹಶೀಲ್ದಾರ್‌ ಸಿಬ್‌Yತುಲ್ಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next