ಹೊಸದಿಲ್ಲಿ : ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಈ ವರ್ಷದ ಭಾರತದ ಆರ್ಥಿಕ ಪ್ರಗತಿಯ ದರವನ್ನು ಈ ಹಿಂದೆ ಅಂದಾಜಿಸಿದ್ದ ಶೇ.7.4ರಿಂದ ಶೇ.4ಕ್ಕೆ ಇಳಿಸಿದೆ.
ಮುಂದಿನ ವರ್ಷಕ್ಕೆ ಭಾರತದ ಆರ್ಥಿಕಾಭಿವೃದ್ಧಿಯು ಶೇ.7.4ರ ಗತಿಯಲ್ಲಿ ಸಾಗಲಿದೆ ಎಂಬ ಅಂದಾಜನ್ನು ಅದು ಪ್ರಕಟಿಸಿದೆ.
ಏಶ್ಯನ್ ಡೆಲವಪ್‌ಮೆಂಟ್ ಓಟ್‌ಲುಕ್ 2017 ಅಪ್‌ಡೇಟ್‌ನಲ್ಲಿ ಎಡಿಬಿ, “ಭಾರತದ ಜಿಡಿಪಿ 2017-18ರಲ್ಲಿ ಶೇ.7.4 ಇರುವುದೆಂದು ಈ ಹಿಂದೆ ಎಪ್ರಿಲ್‌ನಲ್ಲಿ ಅಂದಾಜಿಸಲಾಗಿತ್ತು. ಆದರೀಗ ಅದನ್ನು ಶೇ.7ಕ್ಕೆ ಇಳಿಸಲಾಗಿದೆ. 2018-19ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ.7.6 ಇರುವುದೆಂದು ಅಂದಾಜಿಸಲಾಗಿತ್ತು; ಆದರೀಗ ಅದನ್ನು ಶೇ.7.4ಕ್ಕೆ ಇಳಿಸಲಾಗಿದೆ’ ಎಂದು ಹೇಳಿದೆ.
ಭಾರತ ಈಚೆಗೆ ಕೈಗೊಂಡ ನೋಟು ಅಮಾನ್ಯದ ಕ್ರಮ ಮತ್ತು ಹೊಸದಾಗಿ ಪರಿಚಯಿಸಿರುವ ಜಿಎಸ್‌ಟಿ ಯಿಂದಾಗಿ ದೇಶದಲ್ಲಿ ಗ್ರಾಹಕ ವ್ಯಯವು ಕಡಿಮೆಯಾಗಿದೆ. ಹಾಗಿದ್ದರೂ ಭಾರತದ ಆರ್ಥಿಕಾಭಿವೃದ್ಧಿಯ ಗತಿ ಮಜಬೂತಾಗಿ ಸಾಗಲಿದೆ ಎಂದು ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹೇಳಿದೆ.
ಇದೇ ವೇಳೆ ಅಭಿವೃದ್ಧಿಶೀಲ ಏಶ್ಯದ ಅಭಿವೃದ್ಧಿ ಗತಿಯು 2017 ರಲ್ಲಿ ಶೇ.5.9 ಮತ್ತು 2018ರಲ್ಲಿ ಶೇ.5.8 ಇರಲ್ದಿ ಎಂದು ಮನಿಲಾದಲ್ಲಿ ನೆಲೆಗೊಂಡಿರುವ ಎಡಿಬಿ ಹೇಳಿದೆ.