Advertisement
ಮಂಗಳೂರು ಹಳೆ ಬಂದರಿಗೆ ಮಂಗಳವಾರ ಆಗಮಿಸಿದ ಅವರು, ಬಳಿಕ ಟಗ್‌ನಲ್ಲಿ ಪ್ರಯಾಣಿಸಿ ಅಳಿವೆಬಾಗಿಲು ಸುತ್ತಮುತ್ತಲ ಪರಿಸ್ಥಿತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಉಳ್ಳಾಲದ ವರೆಗೆ ಟಗ್‌ನಲ್ಲಿ ತೆರಳಿದ ಸಚಿವರು ಸಮುದ್ರದಲ್ಲಿ ಹೂಳೆತ್ತುವಿಕೆ ಹಾಗೂ ವಿವಿಧ ಬಂದರು ಅಭಿಧಿವೃದ್ಧಿ ಕುರಿತ ಕಾಮಗಾರಿ ಪರಿಶೀಲಿಸಿದ ಅನಂತರ ಸುದ್ದಿಗಾರರ ಜತೆಗೆ ಮಾತನಾಡಿದರು. 2011ರಲ್ಲಿ ಯುಪಿಎ ಅವಧಿಯಲ್ಲಿ ಈ ಯೋಜನೆಗೆ ಮಂಜೂರಾತಿ ದೊರಕಿತ್ತು. ರಾಜ್ಯ ಸರಕಾರ ಶೇ. 15ರಷ್ಟು ಹಾಗೂ ಎಡಿಬಿ ಶೇ. 85ರಷ್ಟು ಹಣ ನೀಡಲಿದೆ. ಕೇಂದ್ರ ಸರಕಾರ ಇದಕ್ಕೆ ಗ್ಯಾರಂಟಿ ನೀಡುತ್ತದೆ. 2014ರಲ್ಲಿ ಇದರ ಕಾಮಗಾರಿ ಪ್ರಾರಂಭವಾಗಿದ್ದು, 20 ಕೋ.ರೂ. ಕಾಮಗಾರಿ ಈಗಾಗಲೇ ಪೂರ್ಣವಾಗಿದೆ. ಮೀನುಗಾರರ ಜೀವನ ಸುಧಾರಣೆ ಹಾಗೂ ಅವರ ಆರ್ಥಿಕ ಮಟ್ಟ ಏರಿಕೆ ಮಾಡುವ ನೆಲೆಯಲ್ಲಿ ಸರಕಾರ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತದೆ. ಬಂದರು ಇಲಾಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಮುಂದಿನ ಬಜೆಟ್‌ನಲ್ಲಿ 500ರಿಂದ 600 ಕೋ.ರೂ. ನೀಡಲು ಮುಖ್ಯಮಂತ್ರಿಗೆ ಈ ಬಾರಿ ಕೇಳಿದ್ದೇವೆ ಎಂದರು.
ಮಂಗಳೂರಿನಲ್ಲಿ ಪ್ರಸ್ತುತ ಖಾಸಗಿಯಾಗಿ ಹೂಳೆತ್ತುವ ಯಂತ್ರ ಬಳಸಲಾಗುತ್ತಿದೆ. ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಸುಮಾರು 1 ಕೋ.ರೂ. ಖರ್ಚು ಮಾಡಲಾಗಿದೆ. ಹೀಗಾಗಿ ಮಂಗಳೂರಿಗೆ ಪ್ರತ್ಯೇಕ ಹೂಳೆತ್ತುವ ಯಂತ್ರವನ್ನು ಸರಕಾರದಿಂದ ಖರೀದಿ ಮಾಡಿ ಕಾಮಗಾರಿ ನಡೆಸುವ ಸಂಬಂಧ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಮೀನುಧಿಗಾರರು ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು. ಉಳ್ಳಾಲದಲ್ಲಿ 29.70 ಕೋ.ರೂ. ಮೊತ್ತದ ಪ್ರಾಯೋಗಿಕ ಕಾಮಗಾರಿಗೆ ಟೆಂಡರ್ ವಹಿಸಲಾಗಿದೆ ಎಂದರು. ಸಚಿವ ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೋ, ಕಾಪೊರೇಟರ್ ಅಬ್ದುಲ್ ಲತೀಫ್, ಬಂದರು ಇಲಾಖೆ ನಿರ್ದೇಶಕ ಕ್ಯಾ| ಸ್ವಾಮಿ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಕಾಂತರಾಜು, ಕಾರ್ಯಕಾರಿ ಎಂಜಿನಿಯರ್ ಗಣೇಶ್, ಎಡಿಬಿಯ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.
Related Articles
ಸಚಿವ ಡಾ| ಎಚ್.ಸಿ. ಮಹದೇವಪ್ಪ ಮಾತನಾಡಿ, ಎಡಿಬಿ ಎರಡನೇ ಹಂತದಲ್ಲಿ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ್ಕೊರೆತ ಸಮಸ್ಯೆ ತೀವ್ರ ಕಾಡುತ್ತಿದೆ. ಅದರಲ್ಲೂ ಸೋಮೇಶ್ವರ, ಎರ್ಮಾಳ್ ತೆಂಕ, ಉದ್ಯಾವರ, ಕೋಡಿಬೆಂಗ್ರೆ, ಪಾವಿನ ಕುರ್ವೆ, ಕೋಡಿಕನ್ಯಾಣ, ಮರವಂತೆ, ಮುರುಡೇಶ್ವರ ಮತ್ತು ಕಮ್ಯೂನಿಟಿ ಉಪಯೋಜನೆಗಳು ಸೇರಿದಂತೆ ಒಟ್ಟು 54.75 ಕಿ.ಮೀ. ಉದ್ದಕ್ಕೆ 623 ಕೋ.ರೂ. ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗಿದೆ. ಉದ್ಯಾವರದಲ್ಲಿ 5 ಕಿ.ಮೀ. ಕಾಮಗಾರಿ ನಿರ್ವಹಿಸಲು 78.44 ಕೋ.ರೂ., ಮರವಂತೆಯಲ್ಲಿ 3.50 ಕಿ.ಮೀ. ಕಾಮಗಾರಿ ನಿರ್ವಹಿಸಲು 88.27 ಕೋ.ರೂ. ನಿಗದಿಪಡಿಸಿ ಗುತ್ತಿಗೆ ನೀಡಲಾಗಿದೆ. ಉಳಿದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
Advertisement