Advertisement

ಅನಿಮಲ್ ಕೇರ್ ಟ್ರಸ್ಟ್: ನಾಳೆ ನಗರದಲ್ಲಿ ಅನಾಥ ಪ್ರಾಣಿಗಳ ಅಡಾಪ್ಷನ್ ಕ್ಯಾಂಪ್

10:44 AM Oct 20, 2019 | Hari Prasad |

ಮಂಗಳೂರು: ಅನಾಥ ಸ್ಥಿತಿಯಲ್ಲಿರುವ ಬೀದಿ ನಾಯಿಗಳು ಮತ್ತು ಬೆಕ್ಕಿನ ಮರಿಗಳಿಗೆ ಒಂದು ಶಾಶ್ವತವಾದ ನೆಲೆಯನ್ನು ಕಲ್ಪಿಸುವ ಸದುದ್ದೇಶದಿಂದ ಮಂಗಳೂರಿನ ಶಕ್ತಿನಗರದಲ್ಲಿರುವ ಅನಿಮಲ್ ಕೇರ್ ಟ್ರಸ್ಟ್ ನಗರಾದ್ಯಂತ ಕಳೆದ ಕೆಲವು ವರ್ಷಗಳಿಂದ ಅಡಾಪ್ಷನ್ ಕ್ಯಾಂಪ್ ಗಳನ್ನು ನಡೆಸಿಕೊಂಡು ಬರುತ್ತಿದೆ.

Advertisement

ಮಂಗಳೂರು ನಗರ ಮಾತ್ರವಲ್ಲದೇ ಸುರತ್ಕಲ್, ಬಿ.ಸಿ.ರೋಡ್, ಮುಲ್ಕಿ ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ ಆಗಾಗ್ಗೆ ಈ ಕ್ಯಾಂಪ್ ಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ರೀತಿಯ ಅಡಾಪ್ಷನ್ ಕ್ಯಾಂಪ್ ಗಳಿಗೆ ಇದುವರೆಗೂ ಸಾಕುಪ್ರಾಣಿ ಪ್ರಿಯರಿಂದ ನಮಗೆ ಉತ್ತಮ ಸ್ಪಂದನೆ ದೊರಕಿದ್ದು ನಮ್ಮಲ್ಲಿಂದ ಅನಾಥ ಪ್ರಾಣಿಗಳನ್ನು ಪಡೆದುಕೊಂಡು ಹೋದವರೂ ಸಹ ಬಳಿಕ ಉತ್ತಮ ರೀತಿಯ ಫೀಡ್ ಬ್ಯಾಕ್ ಅನ್ನು ನೀಡಿರುವುದು ನಮ್ಮನ್ನು ಇನ್ನಷ್ಟು ಈ ಕಾರ್ಯದಲ್ಲಿ ಮುಂದುವರಿಯಲು ಪ್ರೇರಣೆ ನೀಡಿದೆ.

ಇದೇ ರೀತಿಯ ಕ್ಯಾಂಪನ್ನು ಅಕ್ಟೋಬರ್ 20ರಂದು ರಾಷ್ಟ್ರೀಯ ಹೆದ್ದಾರಿ 66ರ ಬಂಗ್ರ ಕೂಳೂರಿನಲ್ಲಿರುವ ನಿರಾನ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ 1-16/9 ಇಲ್ಲಿ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭವಾಗಲಿರುವ ಈ ಕ್ಯಾಂಪ್ ಸಾಯಂಕಾಲ 5.00 ಗಂಟೆಗಳವರೆಗೆ ನಡೆಯಲಿದೆ.

ಈ ಶಿಬಿರದಲ್ಲಿ ಸಾಕು ಪ್ರಾಣಿಗಳನ್ನು ದತ್ತು ನೀಡುವುದಕ್ಕೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲವಾದರೂ, ಕನಿಷ್ಟ ವೈದ್ಯಕೀಯ ವೆಚ್ಚದ ಬಾಬ್ತು ಅನಿಮಲ್ ಕೇರ್ ಟ್ರಸ್ಟ್ 200 ರೂಪಾಯಿಗಳನ್ನು ರಿಜಿಸ್ಟ್ರೇಷನ್ ಶುಲ್ಕದ ರೂಪದಲ್ಲಿ ಪಡೆದುಕೊಳ್ಳುತ್ತದೆ. ಸಾಕುಪ್ರಾಣಿಗಳನ್ನು ದತ್ತು ಪಡೆದುಕೊಳ್ಳಲು ಬಯಸುವವರು ರಿಜಿಸ್ಟ್ರೇಶನ್ ಉದ್ದೇಶಕ್ಕಾಗಿ ಸಮಂಜಸ ಫೊಟೋ ಐಡಿ ಪ್ರೂಫ್ ಅನ್ನು ನೀಡುವುದು ಕಡ್ಡಾಯವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next