Advertisement

ಆದರ್ಶ ವ್ಯಕ್ತಿಗಳ ಸದ್ಗುಣ ಅಳವಡಿಸಿಕೊಳ್ಳಿ

10:54 AM Jan 24, 2019 | Team Udayavani |

ಮೊಳಕಾಲ್ಮೂರು: ಯುವ ಸಮುದಾಯ ಆದರ್ಶ ವ್ಯಕ್ತಿಗಳ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತನ್ನ ಕಾಯಕದ ಗುರಿಯ ಸಾಧನೆಯೊಂದಿಗೆ ಉನ್ನತ ಸ್ಥಾನಮಾನ ಪಡೆದು ಆದರ್ಶ ವ್ಯಕ್ತಿಗಳಾಗಿ ಹೊರ ಹೊಮ್ಮಬೇಕೆಂದು ಹರಿಹರದ ಶ್ರೀರಾಮಕೃಷ್ಣ ಆಶ್ರಮದ ಶ್ರೀಶಾರದೇಶನಂದಜೀ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯದ ಆವರಣದಲ್ಲಿ ಸುಭಾಷ್‌ ಚಂದ್ರ ಬೋಸ್‌ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ದೆಸೆಯಲ್ಲೇ ನಿರ್ದಿಷ್ಟವಾದ ಗುರಿಮುಟ್ಟಲು ಎಲ್ಲಾ ವಿಷಯಗಳಲ್ಲೂ ಸತತವಾಗಿ ಅಭ್ಯಾಸ ಮಾಡಿ ಯಶಸ್ಸು ಪಡೆಯಬೇಕೆಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರಬೋಸ್‌, ಕಾಯಕ ಯೋಗಿ ಡಾ| ಶಿವಕುಮಾರ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ, ಕೃಷ್ಣ ಗೋಪಾಲ ತಿವಾರಿ ಹಾಗೂ ಇನ್ನಿತರ ಮಹನೀಯರ ಆದರ್ಶಗಳನ್ನು ಮೈಗ‌ೂಡಿಸಿಕೊಂಡು ಅಚಲವಾದ ನಂಬಿಕೆ ಮತ್ತು ವಿಶ್ವಾಸದಿಂದ ಕಾಯಕ ಕೈಗೊಂಡರೆ ಗುರಿ ಸಾಧಿಸಬಹುದಾಗಿದೆ. ಈ ಸಾಧನೆಯ ಕಾರ್ಯದಲ್ಲಿ ತಂದೆ-ತಾಯಿ, ಗುರು, ಹಿರಿಯರು ಹಾಗೂ ಸಮಾಜದ ಸಹಕಾರವಿರುತ್ತದೆ. ಶಾಲಾ ವಿದ್ಯಾರ್ಥಿಗಳು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಜೆ.ಸಿ. ರಾಜಶೇಖರ್‌ ಮಾತನಾಡಿ, ನೇತಾಜಿ ಸುಭಾಷ್‌ ಚಂದ್ರಬೋಸ್‌ ಅವರು ದೇಶಪ್ರೇಮಿಯಾಗಿದ್ದು, ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ಪ್ರತಿಯೊಬ್ಬ ಯುವಶಕ್ತಿಗೂ ಮಹಾಚೇತನರಾಗಿದ್ದಾರೆ. ಸುಭಾಷ್‌ ಚಂದ್ರಬೋಸ್‌ ಅವರು ಭಾರತ ದೇಶದ ಯುವಕರಿಗೆ ಧೈರ್ಯ, ವೀರತ್ವ, ದೇಶಪ್ರೇಮ ಮತ್ತು ಸ್ವಾಭಿಮಾನ ಮೂಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್‌ ಸದಸ್ಯ ಕೊಂಡ್ಲಹಳ್ಳಿ ಟಿ.ರೇವಣ್ಣ , ಮುಖ್ಯ ಶಿಕ್ಷಕ ಎಂ.ಗುರುಸ್ವಾಮಿ, ಶಿಕ್ಷಕರಾದ ರಾಜಶೇಖರ್‌ ಬಸವನಗೌಡ, ಎಸ್‌.ಕೆ.ವಿಜಯ್‌ ಕುಮಾರ್‌, ಸಣ್ಣಗಿಡ್ಡಯ್ಯ, ದೇವರಾಜ್‌, ಅನಿತಾ, ಮುಜುಬುಲ್ಲಾ, ವಿರೂಪಾಕ್ಷಪ್ಪ, ರೂಪಾ, ಶ್ರೀನಿವಾಸ , ಸೌಮ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next