Advertisement

Adani Group 2,610 ಕೋ.ರೂ. ವಶ; ತನಿಖೆ ಸುಪ್ರೀಂ ವಹಿಸಲಿ: ಕಾಂಗ್ರೆಸ್‌

12:49 AM Sep 14, 2024 | Team Udayavani |

ಹೊಸದಿಲ್ಲಿ: ಅದಾನಿ ಗ್ರೂಪ್‌ನಲ್ಲಿ ಮುಂಚೂಣಿ ಹೂಡಿಕೆದಾರ ಎನ್ನಲಾ ಗಿದ್ದ ತೈವಾನ್‌ನ ಹೂಡಿಕೆದಾರರೊಬ್ಬ ರಿಂದ 2610 ಕೋಟಿ ರೂ.ಗಳನ್ನು ಸ್ವಿಟ್ಸರ್ಲೆಂಡ್‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಪ್ರಕರಣಕ್ಕೂ ಸಂಸ್ಥೆಗೂ ಸಂಬಂಧ ಇಲ್ಲ ಎಂದು ಅದಾನಿ ಗ್ರೂಪ್‌ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ , ಅದಾನಿ ಗ್ರೂಪ್‌ ವಿರುದ್ಧದ ತನಿಖೆಯನ್ನು ಸುಪ್ರೀಂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು, ಹಗರಣದ ಸಂಪೂರ್ಣ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಗೆ ನಿರ್ದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಸ್ವಿಸ್‌ ಅಧಿಕಾರಿಗಳು ನಡೆಸುತ್ತಿದ್ದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ ಹೂಡಿಕೆದಾರರೊಬ್ಬರ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಈ ಅಕ್ರಮದ ತನಿಖೆಯನ್ನು ಸುಪ್ರೀಂ ವಹಿಸಿಕೊಳ್ಳಬೇಕು. ಸ್ವಿಸ್‌ನ ನ್ಯಾಯಾಲಯ ಹಣ ಜಪ್ತಿ ಮಾಡುವು ದರ ವಿರುದ್ಧ ತೀರ್ಪು ನೀಡಿತ್ತು. ಈ ಹಣ ಅಕ್ರಮ ಮಾರ್ಗಗಳ ಮೂಲಕ ಶಂಕಿತ ನಿಗಮಗಳಿಗೆ ಪೂರೈಕೆಯಾಗಿದೆ ಎನ್ನಲಾಗುತ್ತಿದೆ ಎಂದೂ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next