Advertisement
ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಶ್ರೀಕೃಷ್ಣ ಸೇವಾ ಬಳಗವು ಈಗಾಗಲೇ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ಭಕ್ತಾದಿಗಳು ಉಡುಪಿಗೆ ಬರುವ ಸಂದರ್ಭದಲ್ಲಿ ಅವರಿಗೆ ಒದಗಿಸಲಾಗುವ ಮೂಲಸೌಕರ್ಯಗಳ ಬಗ್ಗೆ ಸರಕಾರ ಮತ್ತು ಜಿಲ್ಲಾಡಳಿತದ ಮಟ್ಟದಲ್ಲಿ ಸಭೆಗಳಾಗಿವೆ. ನೂತನ ಪೊಲೀಸ್ ವರಿಷ್ಠಾಧಿಕಾರಿ ಈಗಾಗಲೇ ಸುರಕ್ಷೆ, ವಾಹನ ನಿಲುಗಡೆ, ವಾಹನಗಳ ಓಡಾಟ ಇತ್ಯಾದಿಗಳ ಬಗ್ಗೆ ಪೂರ್ವಯೋಜಿತವಾಗಿ ಸಂಪೂರ್ಣ ಸಿದ್ಧತೆ ನಡೆಸಿರುವ ವರದಿಯನ್ನು ಜಿÇÉಾಡಳಿತದ ಮೂಲಕ ಶ್ರೀಕೃಷ್ಣ ಸೇವಾ ಬಳಗಕ್ಕೆ ಸಲ್ಲಿಸಿ¨ªಾರೆ.
ಮೆರವಣಿಗೆ ಸಾಗುವ ಜೋಡುಕಟ್ಟೆಯಿಂದ ಕಲ್ಪನಾ ಟಾಕೀಸ್ ವರೆಗೆ ರಸ್ತೆ ಸಂಪೂರ್ಣ ಡಾಮರು ಕಾಮಗಾರಿ ನಡೆಸಲಾಗಿದೆ. ಹಾಗೆಯೇ ರಥಬೀದಿ ಮತ್ತು ಸುತ್ತಮುತ್ತಲಿನ ರಸ್ತೆ ಡಾಮರು ಕಾಮಗಾರಿಯನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ನಗರಸಭೆಯ ಅಧಿಕಾರಿಗಳು ಭರವಸೆ ನೀಡಿ¨ªಾರೆ. ಸುಮಾರು 400 ಕಂಬಗಳಲ್ಲಿ 800 ಗೂಡುದೀಪಗಳನ್ನು ಸಾಲು ಸಾಲಾಗಿ ಜೋಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಜಾನಪದ ತಂಡಗಳು ಉಡುಪಿಗೆ ಬರಲಿವೆ. ಶಾಸಕ ರಘುಪತಿ ಭಟ್ ಅವರ ಮುತುವರ್ಜಿಯಿಂದ ಉಡುಪಿಯ ವಿವಿಧ ಇಲಾಖೆಗಳಿಂದ ಆರು ಟ್ಯಾಬ್ಲೋಗಳು ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಇತರ ಮೂಲ ಸೌಕರ್ಯಗಳಾದ ಸ್ವತ್ಛತೆ, ಕುಡಿಯುವ ನೀರಿನ ನಿರಂತರ ಸರಬರಾಜು, ಪ್ರವಾಸಿಗಳಿಗೆ ಮತ್ತು ಕಲಾವಿದರಿಗೆ ವಸತಿ ವ್ಯವಸ್ಥೆಗಳು ಪೂರ್ಣಗೊಂಡಿವೆ. ಜಿÇÉೆಯ ವಿವಿಧ ಭಾಗಗಳ ಸಂಘಟನೆಗಳ ಮುಖಾಂತರ ಸುಮಾರು 1,200ಕ್ಕೂ ಹೆಚ್ಚು ಸ್ವಯಂಸೇವಕರು ಸರ್ವಸನ್ನದ್ಧರಾಗಿದ್ದಾರೆ.
Related Articles
Advertisement
ಆಮಂತ್ರಣ ಪತ್ರಿಕೆ ವಿತರಣೆಪರ್ಯಾಯೋತ್ಸವದ ಆಮಂತ್ರಣ ಪತ್ರಿಕೆಯನ್ನು ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ಉಡುಪಿಯ ನಾಗರಿಕರಿಗೆ ವಿತರಿಸುತ್ತಿದ್ದಾರೆ. ಭೋಜನ ಪ್ರಸಾದ
ಜ. 17ರ ರಾತ್ರಿ 35ರಿಂದ 40 ಸಾವಿರ ಭಕ್ತರಿಗೆ ಅನ್ನಪ್ರಸಾದ, ಜ. 18ರಂದು ಮಧ್ಯಾಹ್ನ 40ರಿಂದ 50 ಸಾವಿರ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ಪಾಕತಜ್ಞ ವಿಷ್ಣುಮೂರ್ತಿ ಭಟ್ ಅವರ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಎಲ್ಲ ವ್ಯವಸ್ಥೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಅನೇಕ ಸಮಿತಿಗಳನ್ನು ರಚನೆ ಮಾಡಿ ಪ್ರತ್ಯೇಕ ಸಂಚಾಲಕರನ್ನು ನೇಮಿಸಲಾಗಿದೆ.