ಸ್ಯಾನ್ ಆ್ಯಂಟೋನಿಯೋ: ಕ್ಷಿಪ್ರವಾಗಿ ವಯಸ್ಸಾಗುವಂಥ ಕಾಯಿಲೆ(ಪ್ರೊಗೇರಿಯಾ)ಯಿಂದ ಬಳಲುತ್ತಿದ್ದ ಅಮೆರಿಕದ ಟೆಕ್ಸಾಸ್‌ನ ಯೂಟ್ಯೂಬ್ ತಾರೆ ಅಡಾಲಿಯೋ ರೋಸ್ ವಿಲಿಯಮ್ಸ್ ತನ್ನ 15ನೇ ವಯಸ್ಸಿಗೇ ಕೊನೆಯುಸಿರೆಳೆದಿದ್ದಾಳೆ.
ಅವಧಿಪೂರ್ವ ವೃದ್ಧಾಪ್ಯದ ರೋಗವಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಆಕೆ, ತಮಾಷೆಯ ವಿಡಿಯೋಗಳು, ಮೇಕಪ್ ಟ್ಯುಟೋರಿಯಲ್‌ಗಳು ಹಾಗೂ ತನ್ನ ಬದುಕಿನ ಅಪ್‌ಡೇಟ್‌ಗಳನ್ನು ನೀಡುತ್ತಾ ಪ್ರಸಿದ್ಧಿ ಪಡೆದಿದ್ದಳು. ಅಡಾಲಿಯೋ ರೋಸ್‌ಗೆ ಯೂಟ್ಯೂಬ್‌ನಲ್ಲಿ 29 ಲಕ್ಷ ಹಾಗೂ ಇನ್‌ಸ್ಟಾಗ್ರಾಂನಲ್ಲಿ 3.80 ಲಕ್ಷಕ್ಕೂ ಅಧಿಕ ಫಾಲೋವರ್‌ಗಳಿದ್ದರು.
ಇದನ್ನೂ ಓದಿ:ರಾಜ್ಯದಲ್ಲಿಂದು ದಾಖಲೆಯ ಕೋವಿಡ್ ಪರೀಕ್ಷೆ : 28,723 ಕೇಸ್, 14 ಸಾವು
3 ತಿಂಗಳ ಮಗುವಿದ್ದಾಗಲೇ ಆಕೆಗೆ ಪ್ರೊಗೇರಿಯಾ ರೋಗ ಕಾಣಿಸಿಕೊಂಡಿತ್ತು. ಇದೊಂದು ಅಪರೂಪದ ಕಾಯಿಲೆಯಾಗಿದ್ದು, ಈ ರೋಗ ಬಂದವರಿಗೆ ಅತ್ಯಂತ ಬೇಗನೆ ವಯಸ್ಸಾಗುತ್ತಾ ಸಾಗಿ, ಒಂದೆರಡು ವರ್ಷಗಳಲ್ಲೇ ವೃದ್ಧರಂತೆ ಕಾಣುತ್ತಾರೆ. ಸಾಮಾನ್ಯವಾಗಿ ಈ ಕಾಯಿಲೆಗೆ ತುತ್ತಾದವರು 2 ವರ್ಷಗಳಷ್ಟೇ ಬದುಕುತ್ತಾರೆ.