ಕೋಲಾರ: ಜಿಲ್ಲೆಯಲ್ಲಿ 41,794 ಪ್ರಕರಣಗಳಲ್ಲಿ 28,482 ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಸಲು ಗುರುತಿಸಲಾಗಿದೆ.
ಅದರಲ್ಲಿ ಸುಮಾರು4,500 ಪ್ರಕರಣ ಅದಾಲತ್ ನಲ್ಲಿ ಇತ್ಯರ್ಥವಾಗಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್. ರಘುನಾಥ್ ತಿಳಿಸಿದರು.
ನಗರದ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 400 ಸಿವಿಲ್‌ಪ್ರಕರಣಗಳು, 500 ಕ್ರಿಮಿನಲ್ ಪ್ರಕರಣಗಳು ಹಾಗೂ 40 ಮೋಟಾರು ಪ್ರಕರಣಗಳಲ್ಲಿ 1.17ಕೋಟಿ ವಿಮಾ ಕಂಪನಿಗಳಿಂದ ಕೊಡಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.
33 ಲಕ್ಷ ರೂ. ದಂಡ: ರಸ್ತೆ ಉಲ್ಲಂಘನೆ ಪೊಲೀಸ್ ಕಾಯ್ದೆ ಅಡಿ ಬರುವ ಸಣ್ಣಪುಟ್ಟ2800 ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಹಣ ವಸೂಲಿ, ಬ್ಯಾಂಕ್, ವಿದ್ಯುತ್, ವೈವಾಹಿಕ,ಅಮೂಲ್ಜಾರಿ ಹಾಗೂ 50 ಮರಳು ದಂಧೆಪ್ರಕರಣಗಳಲ್ಲಿ 33 ಲಕ್ಷ ರೂ.ಗಳನ್ನು ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದ ಅಧಿಕಾರಿಗಳು, ಸ್ಥಳೀಯ ವಕೀಲರ ಸಂಘ, ತಾಲೂಕುಗಳ ವಕೀಲರ ಸಂಘ,ಭೂ ಗಣಿ ಇಲಾಖೆ, ವಿಮಾ ಕಂಪನಿಯ ಅಧಿಕಾರಿ ಗಳು ಹಾಗೂ ಕಂಪನಿಯ ವಕೀಲರು, ತಾಲೂಕಿನ ಎಲ್ಲಾ ನ್ಯಾಯಾಧೀಶರಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ವಕೀಲರಾದ ವಿ.ಕುಮಾರ್, ರಾಧಕುಮಾರ್ ಉಪಸ್ಥಿತರಿದ್ದರು.