Advertisement
ಶನಿವಾರ, ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಮೇರಿಕಾದ ಮೇರಿಲ್ಯಾಂಡ್‌ನಲ್ಲಿ ಕನ್ನಡದ ಪ್ರಪ್ರಥಮ ಕವಿಯತ್ರಿ ಅಕ್ಕಮಹಾದೇವಿಯವರ ಕಂಚಿನ ಪುತ್ಥಳಿಯನ್ನು ಖುದ್ದು ಸ್ಥಾಪಿಸಿದ್ದೇನೆ. ಆದರೆ, ಆ ಕಾರ್ಯ ಪ್ರಚಾರಕ್ಕೇ ಬರಲಿಲ್ಲ. ನೀರಜ್ ಪಾಟೀಲ್ ಲಂಡನ್‌ನಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಿದ್ದು ಭಾರೀ ಪ್ರಚಾರ ಪಡೆಯಿತು.
Related Articles
Advertisement
ಅಂತಹವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ನನಗೆ ಎಲ್ಲವೂ ಇದೆ. ಆದರೆ, ತೃಪ್ತಿಯೇ ಇಲ್ಲ. ಅಕ್ಕಮಹಾದೇವಿಯಹೆಸರು ಶಾಶ್ವತವಾಗಿ ಉಳಿಯುವ ಕೆಲಸ ಆಗುವ ತನಕ ತೃಪ್ತಿ ಸಿಗುವುದಿಲ್ಲ ಎಂದು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ,
ರಾಣಿ ರುದ್ರಮ್ಮ, ಬೆಳವಡಿಯ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ವಿಜಯದೇವಿ,
ಅತ್ತಿಮಬ್ಬೆ, ರಾಣಿ ಅಬ್ಬಕ್ಕ… ಮುಂತಾದ ಮಹಿಳೆಯರು ಇಡೀ ನಾಡಿಗೆ ಗೌರವ ತಂದುಕೊಟ್ಟವರು. ಹಾಗಾಗಿಯೇ ಕರ್ನಾಟಕದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ. ಅಂತಹ ವಿಶಿಷ್ಟ ಪರಂಪರೆಯನ್ನು
ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು. ಕನ್ನಡ ಭಾಷೆ, ನೆಲ, ಸಂಸ್ಕೃತಿ ತನ್ನದೇ ವಿಶಿಷ್ಟತೆಯನ್ನು ಹೊಂದಿದೆ. ಅಂತಹ ವಿಶಿಷ್ಟತೆಯನ್ನು ಉಳಿಸಿ,
ಬೆಳೆಸಿಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ ಮೇಲಿದೆ. ಹಿಂದಿನ ಮತ್ತು
ಇಂದಿನ ಶಿಕ್ಷಣ ಸಾಕಷ್ಟು ವ್ಯತ್ಯಾಸದಿಂದ ಕೂಡಿದೆ. ಈಗ ಬೋಧಿಸುತ್ತಿರುವ ಪಠ್ಯಕ್ರಮ ಅನಾಹುತಕ್ಕೆ
ಕಾರಣವಾಗುತ್ತಿದೆ. ವಿದೇಶಿ ಕಂಪನಿಗಳಿಗೆ ಬೇಕಾದ ಗುಲಾಮರನ್ನು ಸಿದ್ಧಪಡಿಸುವಂತಹ ಶಿಕ್ಷಣದ ವ್ಯವಸ್ಥೆ
ಇದೆ. ಇಂತಹ ಕಾಲಘಟ್ಟದಲ್ಲಿ ಕನ್ನಡದ ಅಂತಃಸತ್ವವನ್ನು ಉಳಿಸುವ ಸವಾಲು ಕನ್ನಡ ಸಾಹಿತ್ಯ ಪರಿಷತ್ ಮುಂದೆ
ಇದೆ ಎಂದು ತಿಳಿಸಿದರು. ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್‌ಗೌಡ್ರು
ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಎಮೆರಿಟಸ್ ಪ್ರಾಧ್ಯಾಪಕಿ ಡಾ|
ವಿಜಯದೇವಿ ಅಭಿನಂದನಾ ನುಡಿಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ, ಡಾ| ವೈ.ಡಿ. ರಾಜಣ್ಣ, ಸಿ.ಕೆ. ರವಿಕುಮಾರ್ ಚಾಮಲಾಪುರ, ನಾಯಕರಹಳ್ಳಿ ಮಂಜೇಗೌಡ, ಟಿ.ಎಸ್. ಲೋಕೇಶ್ ಸಾಗರ್, ಸುನಂದಾ ಸಂಗಮೇಶ್ ಗೌಡ್ರು ಇತರರು ಇದ್ದರು. ಬಿ. ದಿಳೆÂಪ್ಪ ಸ್ವಾಗತಿಸಿದರು.