Advertisement

ಎಕ್ಸಾಂನಲ್ಲಿ ನಟಿ ಸನ್ನಿ ಪಾಸ್‌!

12:30 AM Feb 22, 2019 | |

ಪಾಟ್ನಾ: ಸನ್ನಿ ಲಿಯೋನ್‌, ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಕಿರಿಯ ಎಂಜಿನಿಯರ್‌…! ಯಾಕೆ ಡೌಟ್‌ ಬಂತಾ? ನಿಜಕ್ಕೂ ಇಂಥದ್ದು ಆದದು ಹೌದು. ಸನ್ನಿಲಿಯೋನ್‌ ಎಂಬ ಹೆಸರಿನಲ್ಲಿ ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಕಿರಿಯ ಎಂಜಿನಿಯರ್‌ ಹುದ್ದೆಗಳ ಪರೀಕ್ಷೆ ಬರೆಯಲಾಗಿದೆ. ಜತೆಗೆ ಅವರು ಉತ್ತಮ ಅಂಕಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅವರಿಗೆ ಶೇ.98.5ರಷ್ಟು ಅಂಕಗಳೂ ಬಂದಿವೆ. ಶೈಕ್ಷಣಿಕ ವಿಭಾಗದಲ್ಲಿ ಶೇ. 73.5, ಪ್ರಾಯೋಗಿಕ ವಿಭಾಗದಲ್ಲಿ ಶೇ.25ರಷ್ಟು ಅಂಕಗಳು ಪ್ರಾಪ್ತವಾಗಿದೆ ಎಂದು ಪರೀಕ್ಷೆ ನಡೆಸಿದ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ಫ‌ಲಿತಾಂಶದಲ್ಲಿ ಗೊತ್ತಾಗಿದೆ. ಫೆ.15ರಂದು ಫ‌ಲಿತಾಂಶ ಪ್ರಕಟಿಸಲಾಗಿದೆ. ಬಾಲಿವುಡ್‌ ನಟಿ ಸನ್ನಿ ಲಿಯೋನ್‌ರ ತಂದೆಯ ಹೆಸರನ್ನು ಲಿಯೋನಾ ಲಿಯೋನ್‌ ಎಂದು ಪ್ರಸ್ತಾಪಿಸಲಾಗಿದೆ. ಅವರ ಅರ್ಜಿ ಸಂಖ್ಯೆ ಜೆಇಸಿ/0031211, ಐಡಿ ಸಂಖ್ಯೆ 2ಎವಿಆರ್‌ಸಿಡಬ್ಲೂಸಿಟಿ.  

Advertisement

ಈ ಎಡವಟ್ಟಿನ ಬಗ್ಗೆ ಪ್ರಕ್ರಿಯೆ ನೀಡಿರುವ ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಪ್ರಾಥಮಿಕ ಹಂತದ ಪರೀಕ್ಷೆಯ ಫ‌ಲಿತಾಂಶ ಕಂಪ್ಯೂಟರ್‌ ಆಧಾರಿತ ಫ‌ಲಿತಾಂಶ ಎಂದು ಹೇಳಿದ್ದಾರೆ. “ಬಿವಿಸಿಎಕ್ಸ್‌ ಝಡ್‌ಬಿಎನ್‌ಎನ್‌ಬಿ’ ಎಂಬ ಹೆಸರಿನ ವ್ಯಕ್ತಿಗೆ ಶೇ.92.89 ಅಂಕಗಳು ಬಂದಿವೆ. ನಟಿ ಸನ್ನಿ ಲಿಯೋನ್‌ ಈ ಬಗ್ಗೆ ಟ್ವೀಟ್‌ ಮಾಡಿ “ಹ ಹಾ ನನ್ನಂತೇ ಇರುವ ಇತರ ವ್ಯಕ್ತಿ ಉತ್ತಮ ಫ‌ಲಿತಾಂಶದಿಂದ ತೇರ್ಗಡೆಯಾಗಿದ್ದಾರೆ. ಕೇಳಿ ಖುಶಿಯಾಯಿತು’ ಎಂದು ಬರೆದುಕೊಂ ಡಿದ್ದಾರೆ.

ಕಂಪ್ಯೂಟರ್‌ ಆಧಾರಿತ ಫ‌ಲಿತಾಂಶವೆಂದ ಇಲಾಖೆ
ಸಂತೋಷವಾಯಿತೆಂದು ಟ್ವೀಟ್‌ ಮಾಡಿದ ಸನ್ನಿ

Advertisement

Udayavani is now on Telegram. Click here to join our channel and stay updated with the latest news.

Next