Advertisement

ಸುಮನ್‌ ನಗರ್‌ಕರ್‌ ಈಗ ನಿರ್ಮಾಪಕಿ

02:34 PM Feb 08, 2018 | Sharanya Alva |

ಬೆಳದಿಂಗಳ ಬಾಲೆ ಅಂತಾನೇ ಗುರುತಿಸಿಕೊಂಡಿರುವ ನಟಿ ಸುಮನ್‌ ನಗರ್‌ಕರ್‌ ಇದೇ ಮೊದಲ ಬಾರಿಗೆ ಹೊಸದೊಂದು ಚಿತ್ರ ನಿರ್ಮಿಸಿದ್ದಾರೆ. ಆ ಚಿತ್ರಕ್ಕೆ “ಬಬ್ರೂ’ ಎಂದು ನಾಮಕರಣ ಮಾಡಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಅಮೆರಿಕಾದಲ್ಲೇ ಚಿತ್ರೀಕರಣಗೊಂಡಿರುವುದು.

Advertisement

ಸುಮನ್‌ ನಗರ್‌ಕರ್‌ ನೆಲೆಸಿರುವುದು ಅಮೆರಿಕದಲ್ಲಿ, ಅಲ್ಲಿದ್ದರೂ ಬಣ್ಣದ ಮೇಲಿನ ಪ್ರೀತಿ ಮಾತ್ರ ಮಾಸಿಲ್ಲ. ಆ ಪ್ರೀತಿಗೆ ಅವರು ಪತಿ ಗುರುದೇವ್‌ ನಾಗರಾಜ್‌ ಅವರ ಪ್ರೋತ್ಸಾಹದಿಂದ ಐದು ಜನರ ತಂಡ ಕಟ್ಟಿಕೊಂಡು ಸುಮನ್‌ ನಗರ್‌ ಕರ್‌ ಪ್ರೊಡಕ್ಷನ್ಸ್‌ ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲರೂ ಅಣ್ಣಾವ್ರ ಅಪ್ಪಟ ಅಭಿಮಾನಿಗಳು. ಹಾಗಾಗಿ “ಬಬ್ರುವಾಹನ’ ಚಿತ್ರದ ಪ್ರೇರಣೆಯಿಂದಾಗಿ, ಅವರ ಸಿನಿಮಾಗೂ “ಬಬ್ರೂ’ ಅಂತ ನಾಮಕರಣ ಮಾಡಿದ್ದಾರೆ.

“ಇದೊಂದು ಜರ್ನಿಯಲ್ಲಿ ನಡೆಯುವ ಕಥೆ. ಪ್ರೇಯಸಿಯನ್ನು ಭೇಟಿಯಾಗಲು ಹೊರಡುವ ಒಬ್ಟಾತ, ಗಂಡನಿಂದ ಮುಕ್ತಿ
ಬಯಸಲು ಹೊರಟ ಒಬ್ಟಾಕೆ. ಇವರಿಬ್ಬರಿಗೂ ಆಕಸ್ಮಿಕ ಪರಿಚಯ ಬೆಳೆದು, ಇಬ್ಬರೂ, “ಬಬ್ರೂ’ ಎನ್ನುವ ಕಾರಲ್ಲಿ 
ಕ್ಯಾಲಿಪೋರ್ನಿಯಾದಿಂದ ವ್ಯಾಂಕೋವರ್‌ವರೆಗೂ ಪಯಣ ಬೆಳೆಸುತ್ತಾರೆ. ದಾರಿ ಮಧ್ಯೆ ಮೆಕ್ಸಿಕೋದ ರೈತನೊಬ್ಬನೂ ಆ ಕಾರಲ್ಲಿ ಪಯಣ ಬೆಳೆಸುತ್ತಾನೆ. ಆದರೆ, ಆ “ಬಬ್ರೂ’ ಎಂಬ ಕಾರು ಪೊಲೀಸರಿಗೂ ಬೇಕು. ಆ ಕಾರು ಪೊಲೀಸರಿಗೆ ಸಿಗುತ್ತಾ, ಆಮೇಲೆ ಏನೆಲ್ಲಾ ನಡೆಯುತ್ತೆ ಎಂಬುದು ಕಥೆ. ಆ ಕಾರಲ್ಲಿ ಪಯಣ ಬೆಳೆಸಿದವರು ಮುಂದೆ ತಮ್ಮ ಗುರಿ ಮುಟ್ಟುತ್ತಾರೋ ಇಲ್ಲವೋ ಎಂಬುದನ್ನು ಹೊಸ ಬಗೆಯಲ್ಲಿ ಚಿತ್ರಿಸಲಾಗಿದೆ ಎಂಬುದು ಸುಮನ್‌ ನಗರ್‌ಕರ್‌ ಅವರ ಮಾತು.

ಈ ಚಿತ್ರವನ್ನು ಸುಜಯ್‌ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ಸುಮನ್‌ ನಗರ್‌ಕರ್‌, ಮಾಹಿ ಹಿರೇಮಠ, ರೇ ತೋಸ್ತಾಡೊ, ಸನ್ನಿ ಮೋಜ, ಪ್ರಕೃತಿ ಕಶ್ಯಪ್‌ ಇತರರು ನಟಿಸಿದ್ದಾರೆ. ಸುಮುಖ ಸುಜಯ್‌ ರಾಮಯ್ಯ ಅವರು ಛಾಯಾಗ್ರಹಣ ಮಾಡಿದ್ದಾರೆ. 

Advertisement

ಪೂರ್ಣ ಚಂದ್ರ ತೇಜಸ್ವಿ ಸಂಗೀತವಿದೆ. ಬಿಂದು ಮಾಧವ ಅವರ ಸಂಕಲನವಿದೆ. ವರುಣ್‌ ಶಾಸ್ತ್ರಿ ಅವರು ಮಾತುಗಳನ್ನು ಪೋಣಿಸಿದ್ದಾರೆ. ಗ್ರಾಂಡ್‌ ಕ್ಯಾನ್ಯನ್‌, ಡೆಥ್‌ ವ್ಯಾಲಿ, ಜಿಯಾನ್‌, ಅವೆನ್ಯೂ ಆಫ್ ಜೈನ್ಸ್‌ ಸೇರಿದಂತೆ ಈ ಮಾರ್ಗ ಮಧ್ಯೆ ಬರುವ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. “ಬಬ್ರೂ’ ಇದೀಗ ಸೆನ್ಸಾರ್‌ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್‌ನಲ್ಲಿ
ಬಿಡುಗಡೆಯಾಗುವ ಸಾದ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next