Advertisement

ನನ ಗಿದೆ ಕ್ಯಾನ್ಸರ್‌ ರೋಗ ಪ್ರೀತ್ಸೇ ನಟಿ ಸೋನಾಲಿ

06:00 AM Jul 05, 2018 | Team Udayavani |

ಮುಂಬೈ: ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಬೆಹ್ಲ (43) ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸದ್ಯ ಅವರು ನ್ಯೂಯಾರ್ಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ಬಹಿರಂಗಪಡಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯರು ತಮ್ಮ ನೋವಿನಲ್ಲಿ ಎಲ್ಲ ರೀತಿಯ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಕೆಲವೊಂದು ಬಾರಿ ನಮ್ಮ ಜೀವನದಲ್ಲಿ ನಿರೀಕ್ಷಿಸಲಾಗದ ಆಘಾತ ಬರುತ್ತದೆ. ಇತ್ತೀಚೆಗಷ್ಟೇ ನನಗೆ ಅತ್ಯಂತ ಗಂಭೀರ ಪ್ರಮಾಣದ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ನಂತರ ಅದು ಖಚಿತವಾಯಿತು’ ಎಂದು ಸೋನಾಲಿ ಹೇಳಿಕೊಂಡಿದ್ದಾರೆ.

Advertisement

ಸೋನಾಲಿ ಕನ್ನಡದಲ್ಲಿ “ಪ್ರೀತ್ಸೇ’ ಸಿನಿಮಾದಲ್ಲಿ ಅಭಿನಯಿಸಿ ಮನ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next