Advertisement

Sandalwood: ದರ್ಶನ್‌ ಜೈಲಿನಿಂದ ಹೊರಬಂದು ʼKGFʼಗಿಂತ ದೊಡ್ಡ ಸಿನಿಮಾ ಮಾಡ್ತಾರೆ: ನಟಿ ಸಂಜನಾ

03:03 PM Jul 13, 2024 | Team Udayavani |

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ದರ್ಶನ್‌(Challenging Star Darshan) ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ(Renukaswamy murder case) ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು ಸೇರಿದಂತೆ ಅವರನ್ನು ಇಷ್ಟಪಡುವ ಕಲಾವಿದರು ಆಶಿಸುತ್ತಿದ್ದಾರೆ.

Advertisement

ಬಹುಭಾಷಾ ನಟಿ ಸಂಜನಾ ಗಲ್ರಾನಿ(Sanjana Galrani)ಈ ಹಿಂದೆ ದರ್ಶನ್‌ ಅವರನ್ನು ವಶಕ್ಕೆ ಪಡೆದಾಗ ಆದಷ್ಟು ಬೇಗ ಅವರು ಸಂಕಷ್ಟದಿಂದ ಪಾರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿಡಿಯೋ ಮಾಡಿ ಹೇಳಿದ್ದರು.

ಇದೀಗ ಸಂದರ್ಶನವೊಂದರಲ್ಲಿ ಮನಬಿಚ್ಚಿ ದರ್ಶನ್‌ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಮಾತನಾಡಿದ್ದಾರೆ.

ʼಸುದ್ದಿ ಮನೆʼ ಎನ್ನುವ ಯೂಟ್ಯೂಬ್‌ ಚಾನೆಲ್‌ಗೆ ಕೊಟ್ಟಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಜೀವನದಲ್ಲಿ ಯಾರಿಗೂ ಜೈಲು ಶಿಕ್ಷೆ ಆಗುವುದು ಬೇಡ. ಅದು ಬಹಳ ಕೆಟ್ಟ ಜಾಗ. ಅಲ್ಲಿರುವುದು ತುಂಬಾ ಕಷ್ಟ. ಜೈಲಿನಲ್ಲಿ ಹಣ ಕೊಟ್ಟರೆ 5 ರೂಪಾಯಿಗೆ 5 ಹನಿ ಕೇಕ್‌, 10 ರೂಪಾಯಿಗೆ ಚಿಪ್ಸ್‌ ಪ್ಯಾಕೆಟ್‌ ಸಿಗುತ್ತದೆ. ಅದು ಬಿಟ್ಟರೆ ಬೇರೇನೂ ಸಿಗಲ್ಲ. ಅಲ್ಲಿ ಕೊಡುವ ಊಟ ತಿನ್ನೋಕೆ ಆಗುವುದಿಲ್ಲ. ಚಿಪ್ಸ್‌ ಇದ್ರೆ ಸ್ವಲ್ಪ ಊಟ ಮಾಡಬಹುದು” ಎಂದು ಹೇಳಿದ್ದಾರೆ.

Advertisement

“ದೇವರ ದಯೆಯಿಂದ ದರ್ಶನ್‌ ಅವರನ್ನು ಇನ್ನು ಆರೋಪಿ ಎನ್ನುತ್ತಿದ್ದಾರೆ. ನಮ್ಮ ಪ್ರಕರಣದಲ್ಲಿ ವಿಚಾರಣೆ ಆಗುತ್ತಿದ್ದ ವೇಳೆಯೇ ಅಪರಾಧಿ ಎನ್ನುತ್ತಿದ್ದರು. ದರ್ಶನ್‌ ಸರ್‌ ಆದಷ್ಟು ಬೇಗ ಜೈಲಿನಿಂದ ಹೊರಬರಬೇಕು. ದರ್ಶನ್ ಅವರು ಚಿಕ್ಕ ಪರಿವಾರದ ವ್ಯಕ್ತಿ ಮೇಲೆ ಕೈ ಮಾಡುವವರಲ್ಲ. ಅಂತಹ ಚರಿತ್ರೆ ಇಲ್ಲ. ಅಭಿಮಾನಿಗಳೇ ನನ್ನ ಸೆಲೆಬ್ರಿಟೀಸ್ ಎಂದು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಜನರನ್ನು ಬಹಳ ಪ್ರೀತಿಸುತ್ತಾರೆ, ಬಹಳ ತಾಳ್ಮೆ ಇದೆ. ಜನರಿಗೆ ಸಹಾಯ ಮಾಡುತ್ತಾರೆ” ಎಂದಿದ್ದಾರೆ.

“ಒಬ್ಬ ಮನುಷ್ಯನ ಕೆಟ್ಟ ಸಮಯದಲ್ಲಿ ಆತ ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಮಾತನಾಡಿ. ದರ್ಶನ್ ಜೈಲಿನಿಂದ ಹೊರಬಂದ ಬಳಿಕ ʼಕೆಜಿಎಫ್‌ʼ ಗಿಂತ ದೊಡ್ಡ ಸಿನಿಮಾ ಮಾಡುತ್ತಾರೆ. ಅವರು ಕೆಲಸವನ್ನು ಪೂಜಿಸುತ್ತಾರೆ. ಬರೀ ಕರ್ನಾಟಕ, ಸೌತ್ ಇಂಡಿಯಾ ಅಲ್ಲ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್‌ನಲ್ಲಿ ಬಹಳ ದೊಡ್ಡ ಸ್ಟಾರ್ ಆಗುತ್ತಾರೆ. ಕೆಟ್ಟ ನ್ಯೂಸ್ ಬರೆದವರು ಅಷ್ಟೇ ಒಳ್ಳೆ ನ್ಯೂಸ್ ಬರೀತ್ತೀರಾ ನೋಡಿ, ನಾನೇ ಚಾಲೆಂಜ್ ಮಾಡ್ತೀನಿ” ಎಂದಿದ್ದಾರೆ.

4 ವರ್ಷಗಳ ಡ್ರಗ್ಸ್‌ ಕೇಸ್‌ ನಲ್ಲಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ಸೇರಿ ಹಲವರ ಬಂಧನ ಆಗಿತ್ತು. 3 ತಿಂಗಳ ಬಳಿಕ ಜಾಮೀನು ಪಡೆದು ಸಂಜನಾ ಹೊರ ಬಂದಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳನ್ನು ಜು.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next