Advertisement

ಸ್ನೇಹಿತರ ವಿರುದ್ಧವೇ ನಟಿ ಸಂಜನಾ ದೂರು

11:10 AM Oct 28, 2021 | Team Udayavani |

ಬೆಂಗಳೂರು: ಹಣ ಹೂಡಿಕೆ ಮಾಡಿಸಿಕೊಂಡು ಮೂರು ವರ್ಷಗಳಿಂದ ಯಾವುದೇ ಲಾಭಾಂಶ ಹಾಗೂ ಅಸಲಿ ಹಣ ಕೊಡದೇ ವಂಚಿಸಿದ ಆರೋಪದ ಮೇಲೆ ತಮ್ಮ ಆಪ್ತ ಮೂವರು ಸ್ನೇಹಿತರ ವಿರುದ್ಧ ನಟಿ ಸಂಜನಾ ಗಲ್ರಾನಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

Advertisement

ಈ ಸಂಬಂಧ ಇಂದಿರಾನಗರ ಠಾಣೆಗೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ನೀಡಿ, ತಮ್ಮ ಆಪ್ತಪರಾದ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಆರೋಪಿಯಾಗಿದ್ದ ರಾಹುಲ್‌ ಟೋನ್ಸೆ ಅಲಿಯಾಸ್‌ ರಾಹುಲ್‌ ಶೆಟ್ಟಿ ಮತ್ತು ಸಹಚರರಾದ ರಾಮಕೃಷ್ಣ ಹಾಗೂ ರಾಘವೇಶ್ವರಿ ಎಂಬುವರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ರಾಹುಲ್‌ ಟೋನ್ಸೆ ಸಲಹೆ ಮೇರೆಗೆ ಇತರೆ ಇಬ್ಬರು ಆರೋಪಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:- ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜನೆ

ಮೂವರು ಆರೋ ಪಿಗಳು ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡಿ ಲಕ್ಷಾಂತರ ರೂ. ಹಣವನ್ನು ಪಡೆ ದುಕೊಂಡಿದ್ದಾರೆ. ಆದರೆ, ಯಾವುದೇ ಲಾಭಾಂಶ ಕೊಡುತ್ತಿಲ್ಲ. ಅಸಲಿ ಹಣ ಸಹ ನೀಡುತ್ತಿಲ್ಲ ಎಂದು ನಟಿ ಕೋರ್ಟ್‌ ಮೊರೆ ಹೋಗಿದ್ದರು.

ಈ ಸಂಬಂಧ ಕೋರ್ಟ್‌ ಸೂಚನೆ ಮೇರೆಗೆ ಇಂದಿರಾನಗರ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.ಈ ಸಂಬಂಧ ಠಾಣೆಗೆ ಹಾಜರಾಗಿ ಹಣ ವರ್ಗಾವಣೆ ಕುರಿತ ಬ್ಯಾಂಕ್‌ ದಾಖಲೆ, ಹಣ ಹೂಡಿಕೆ ಮಾಡಿರುವ ಕುರಿತ ಪೂರಕ ದಾಖಲಾತಿ ಪತ್ರಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next