Advertisement

‘ಮೇಡಂ ನಿಮ್ಮ ಮದುವೆ ಯಾವಾಗ?’  ಸ್ಯಾಂಡಲ್ವುಡ್ ಪದ್ಮಾವತಿಗೆ ಅಭಿಮಾನಿಗಳ ಪ್ರಶ್ನೆ

12:34 PM Jun 01, 2021 | Team Udayavani |

ಬೆಂಗಳೂರು: ಚಂದನವನದ ಮೋಹಕ ತಾರೆ ರಮ್ಯಾ ಅವರ ಮದುವೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ನಿಮ್ಮ ಮ್ಯಾರೇಜ್ ಯಾವಾಗ ಮೇಡಂ ಎಂದು ಅವರ ಅಭಿಮಾನಿಗಳು ಪದ್ಮಾವತಿಯನ್ನು ಪ್ರಶ್ನಿಸಿದ್ದಾರೆ.

Advertisement

ರಾಜಕೀಯ ಹಾಗೂ ಸಿನಿಮಾರಂಗದಿಂದ ದೂರವಾಗಿರುವ ರಮ್ಯಾ ಅವರು ಇಂದಿಗೂ ಕೂಡ ಅಭಿಮಾನಿಗಳ ಪಾಲಿಗೆ ಆರಾದ್ಯ ದೈವವಾಗಿದ್ದಾರೆ. ನಮ್ಮ ನೆಚ್ಚಿನ ನಟಿಯ ಕಲ್ಯಾಣ ಕಣ್ತುಂಬಿಕೊಳ್ಳಬೇಕೆಂಬುದು ಅವರ ಲಕ್ಷಾಂತರ ಅಭಿಮಾನಿಗಳ ಬಯಕೆ ಕೂಡ ಆಗಿದೆ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಮದುವೆ ಬಗ್ಗೆಯೆ ಪ್ರಶ್ನಿಸುತ್ತಿರುತ್ತಾರೆ.

ಇದೀಗ ನಿತಿನ್ ರಾಜ್‌ ಜೊತೆ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪ್ರಣೀತಾ ಸುಭಾಷ್‌ಗೆ ವಿಶ್ ಮಾಡಿದ ರಮ್ಯಾ ಅವರಿಗೆ ಪ್ರಶ್ನೆಗಳು ಸುರಿಮಳೆಯಾಗಿದೆ.

ಮೇ. 30ರಂದು ಬೆಂಗಳೂರಿನ ರೆಸಾರ್ಟ್‌ನಲ್ಲಿ ನಡೆದ ಮದುವೆ ಬಗ್ಗೆ ಪ್ರಣೀತಾ ಪೋಸ್ಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಪೋಸ್ಟ್‌ಗೆ ‘ಕಂಗ್ರಾಜುಲೇಷನ್ಸ್ ಪ್ರಣೀತಾ’ ಎಂದು ರಮ್ಯಾ ಕಾಮೆಂಟ್ ಮಾಡಿದ್ದಾರೆ. ರಮ್ಯಾ ಕಾಮೆಂಟ್ ನೋಡಿದ ತಕ್ಷಣವೇ ನೆಟ್ಟಿಗರು ‘ನಿಮ್ಮ ಮದುವೆ ಯಾವಾಗ?’ ಎಂದು ಪ್ರಶ್ನೆ ಮಾಡಿದ್ದಾರೆ.

ಪೃಥ್ವಿ ರಾಣಿ ಯಾದವ್ ಹೆಸರಿನ ಖಾತೆಯಿಂದ ‘ಗಿಡ ಮರದಲ್ಲಿ ಬಳ್ಳಿ ಹೂವು ಬಿಟ್ಟಾಯಿತು, ನಿಮ್ಮ ಮದುವೆ ಯಾವಾಗ?’ ಎಂದು ಕಾಮೆಂಟ್ ಮಾಡಿದ್ದಾರೆ.

Advertisement

ಇನ್ನು ರಮ್ಯಾ ಮದುವೆ ವಿಚಾರದ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಪ್ರಶ್ನೆ ಮಾಡಿದಾಗ ರಮ್ಯಾ ಮೌನಕ್ಕೆ ಶರಣಾಗುತ್ತಾರೆ. ವಿಪರೀತ ಎಂದೆನಿಸಿದರೆ ಯಾಕೆ ಮದುವೆ ಬಗ್ಗೆ ಚಿಂತೆ ಎಂದು ಹೇಳಿ, ಸುಮ್ಮನಾಗುತ್ತಾರೆ. ರಮ್ಯಾ ವೈಯಕ್ತಿಕ ಜೀವನ ತುಂಬಾನೇ ಪ್ರೈವೇಟ್ ಆಗಿಟ್ಟಿರುವ ಕಾರಣ ಜನರಿಗೆ ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next