Advertisement

ಮನದ ಮಾತಿಗಾಗಿ ರಾಗಿಣಿ ಚಾನೆಲ್‌!

12:38 PM Mar 10, 2021 | Team Udayavani |

ಕಳೆದ ಒಂದು ವರ್ಷದಿಂದ ನಟಿ ರಾಗಿಣಿ ಸಿನಿಮಾಕ್ಕಿಂತ ಬೇರೆ ವಿಷಯಗಳಿಗೆ ಸುದ್ದಿಯಾಗಿದ್ದೇ ಹೆಚ್ಚು. ಡ್ರಗ್ಸ್‌ ಆರೋಪದಲ್ಲಿ ಕೆಲ ಕಾಲ ಜೈಲು ಪಾಲಾಗಿದ್ದ ರಾಗಿಣಿ, ಅಲ್ಲಿಂದ ಹೊರಬಂದ ಬಳಿಕ ಮತ್ತೆ ಸಿನಿಮಾ, ಇವೆಂಟ್ಸ್‌ ಅಂಥ ಬೇರೆ ಬೇರೆ ಚಟುವಟಿಕೆಗಳಲ್ಲಿ ಬಿಝಿಯಾಗುತ್ತಿದ್ದಾರೆ.

Advertisement

ಇದರ ನಡುವೆಯೇ ರಾಗಿಣಿ ತಮ್ಮದೇ ಹೆಸರಿನಲ್ಲಿ ಯುಟ್ಯೂಬ್‌ ಚಾನೆಲ್‌ ಪ್ರಾರಂಭ ಮಾಡಿದ್ದಾರೆ. ಮಾ. 8 ರಂದು ನಡೆದ ಅಂತರಾಷ್ಟ್ರೀಯಮಹಿಳಾ ದಿನಾಚರಣೆಯ ಪ್ರಯುಕ್ತ ರಾಗಿಣಿ ದ್ವಿವೇದಿ ಯು-ಟ್ಯೂಬ್‌ ಚಾನೆಲ್‌ ಶುರುವಾಗಿದ್ದು, ಈ ಚಾನೆಲ್‌ ಮೂಲಕ ರಾಗಿಣಿ ಇಲ್ಲಿಯವರೆಗೆ ಎಲ್ಲೂ ಹೇಳಿಕೊಳ್ಳಲು ಆಗಿರದ ತಮ್ಮ ಆಸಕ್ತಿ, ಅನಿಸಿಕೆ, ಅಭಿರುಚಿ ಎಲ್ಲವನ್ನೂ ಹಂಚಿಕೊಳ್ಳುವ ಯೋಚನೆ ಮಾಡಿದ್ದಾರಂತೆ. ಇನ್ನು ತಮ್ಮ ಯು-ಟ್ಯೂಬ್‌ ಚಾನೆಲ್‌ನಲ್ಲಿ ಹೊಸ ವಿಷಯಗಳು ಹೇಳುವುದಕ್ಕಾಗಿ, ಕಾರ್ಯಕ್ರಮದ ತಯಾರಿಗಾಗಿ ರಾಗಿಣಿ ವಾರದಲ್ಲಿ ಒಂದಷ್ಟು ಸಮಯವನ್ನು ತೆಗೆದಿಡಲಿದ್ದಾರಂತೆ.

ಇದನ್ನೂ ಓದಿ : ಒಂದೇ ಬ್ಯಾನರ್‌, 12 ಸಿನಿಮಾ!

ಒಟ್ಟಾರೆ ರಾಗಿಣಿ ಹೊಸ ಚಾನೆಲ್‌ ಹೇಗಿದೆ, ಅವರ ಫ್ಯಾನ್ಸ್‌ಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next