Advertisement
ಈ ಸಂಬಂಧ ಕಂಪನಿಯ ವ್ಯವಸ್ಥಾಪಕ ಕೆ.ಅಮರನಾಥ್ ರೆಡ್ಡಿ ಎಂಬವರು ಚೆನ್ನೈ ಮೂಲದ ಮೊಹಮ್ಮದ್ ಜುನಾಯತ್ ಮತ್ತು ವರ್ಷಾ ಎಂಬವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Related Articles
Advertisement
ಅದನ್ನು ನಂಬಿದ ಅಮರನಾಥ್ 13.5 ಲಕ್ಷ ರೂ. ಅನ್ನು ಆರೋಪಿಗೆ ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ಹೋಟೆಲ್‌ನ ಕೊಠಡಿಗೆ ಹೋಗಿದ್ದಾರೆ. ಒಂದು ಗಂಟೆ ಕಳೆದರೂ ವಾಪಸ್ ಬಂದಿಲ್ಲ. ನಂತರ ಕೊಠಡಿಗೆ ಹೋಗಿ ನೋಡಿದಾಗ ಮೊಹಮ್ಮದ್ ಜುನಾಯತ್ ಹಾಗೂ ವರ್ಷಾ ಇರಲಿಲ್ಲ. ಆರೋಪಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಹಣ ಪಡೆದು ಪರಾರಿಯಾಗಿರುವುದು ಗೊತ್ತಾಗಿದೆ.
ತಕ್ಷಣವೇ ಅಮರನಾಥ್, ಸ್ನೇಹಿತ ಪ್ರಶಾಂತ್‌ಗೆ ಕರೆ ಮಾಡಿ ಮೊಹಮ್ಮದ್ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಪ್ರಶಾಂತ್ ಮೊಹಮ್ಮದ್ ತಂದೆಗೆ ಫೋನ್ ಮಾಡಿ ವಿಚಾರಿಸಿದಾಗ ಮೊಹಮ್ಮದ್ ಜುನಾಯತ್ ಬಳಿಯೇ ಹಣವಿದೆ. ನಮ್ಮ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ಮೊಹಮ್ಮದ್ ತಂದೆ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಅಮರನಾಥ್, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಒಂದೆರಡು ದಿನಗಳಲ್ಲಿ ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದರು.