Advertisement

ಕಾರ್ಮಿಕರಿಗೆ ಸಹಾಯಕ್ಕೆ ನಿಂತ ನಟಿ ಪ್ರಣೀತಾ

11:47 AM Apr 17, 2020 | Suhan S |

ಕೋವಿಡ್ 19 ಲಾಕ್‌ ಡೌನ್‌ ಸದ್ಯದ ಮಟ್ಟಿಗಂತೂ ಎಲ್ಲರನ್ನೂ ಮನೆಯಲ್ಲೇ ಲಾಕ್‌ ಮಾಡಿದೆ. ಇನ್ನು ಸದಾ ಸ್ಕ್ರಿಪ್ಟ್ ಮೀಟಿಂಗ್‌, ಶೂಟಿಂಗ್‌, ಡಬ್ಬಿಂಗ್‌, ಪ್ರಮೋಶನ್‌ ಅಂಥ ಬ್ಯುಸಿಯಾಗಿದ್ದ ಸ್ಟಾರ್‌ ನಟ-ನಟಿಯರಿಗೂ ಕೋವಿಡ್ 19  ಬಿಗ್‌ ಬ್ರೇಕ್‌ ನೀಡಿರುವುದರಿಂದ, ಬಹುತೇಕರು ಹೋಂ ಕ್ವಾರೆಂಟೈನ್‌ನಲ್ಲಿರುವಂತಾಗಿದೆ. ಇದರ ನಡುವೆಯೇ ಅನೇಕ ತಾರೆಯರು ಈ ಸಮಯದಲ್ಲಿ ಒಂದಷ್ಟು ಸಾಮಾಜಿಕ ಕೆಲಸಗಳಿಗೂ ಮುಂದಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇಂಥವರ ಪಟ್ಟಿಯಲ್ಲಿ ನಟಿ ಪ್ರಣೀತಾ ಸುಭಾಶ್‌ ಕೂಡ ಒಬ್ಬರು.

Advertisement

ಕಳೆದ ಒಂದು ತಿಂಗಳಿನಿಂದ ಮನೆಯೇ ಮಂತ್ರಾಲಯ ಎನ್ನುತ್ತಿರುವ ಪ್ರಣೀತಾ, ಈ ವೇಳೆಯನ್ನು ಹೇಗೆ ಕಳೆಯುತ್ತಿದ್ದಾರೆ ಎನ್ನುವುದನ್ನು ಅವರೆ ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಣೀತಾ ಒಂದಷ್ಟು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಂತೆ. ಈ ಬಗ್ಗೆ ಅವರೇ ಹೇಳುವಂತೆ, ಈಗ ಮನೆಯಲ್ಲಿ ತುಂಬ ಸಮಯ ಸಿಗುತ್ತಿರುವುದರಿಂದ, ಜಿಮ್‌, ವರ್ಕೌಟ್‌, ಡ್ಯಾನ್ಸ್‌ಪ್ರಾಕ್ಟೀಸ್‌ ಎಲ್ಲವೂ ಮನೆಯಲ್ಲೇ ನಡೆಯುತ್ತಿದೆ. ಈಗ ಮನೆಯಲ್ಲಿ ನಾನೇ ಅಡುಗೆ ಮಾಡುತ್ತಿದ್ದೇನೆ. ಒಳ್ಳೆಯ ಸಿನಿಮಾಗಳನ್ನ ನೋಡುತ್ತಿದ್ದೇನೆ. ಒಂದಷ್ಟು ಪುಸ್ತಕಗಳನ್ನು ಓದುತ್ತಿದ್ದೇನೆ. ಮನೆಯಲ್ಲೇ ಇದ್ದರೂಎಂಗೇಜ್‌ ಆಗಿರುತ್ತೇನೆ ಎನ್ನುತ್ತಾರೆ. ಇನ್ನು ಕೋವಿಡ್ 19  ಲಾಕ್‌ಡೌನ್‌ನಿಂದಾಗಿ ಅನೇಕ ಬಡವರು, ಕೂಲಿ ಕಾರ್ಮಿಕರ ಬದುಕುದುಸ್ತರವಾ ಗಿದೆ. ಕೆಲಸವಿಲ್ಲದೆ ಅನೇಕ ಕುಟುಂಬ ಗಳು ಕಂಗಾಲಾಗಿವೆ. ಇಂಥವರ ನೆರವಿಗೆ ಮುಂದಾಗಿರುವಪ್ರಣೀತಾ, ಅವರಿಗಾಗಿ ಊಟದ ವ್ಯವಸ್ಥೆ ಮತ್ತು ಅಗತ್ಯವಿರುವ ದಿನಸಿ ಸಾಮಾನುಗಳನ್ನು ಒದಗಿಸಲು ಅನೇಕ ಸಂಘ-ಸಂಸ್ಥೆಗಳ ಜೊತೆಗೆ ಕೈ ಜೋಡಿಸಿದ್ದಾರೆ.

ಬಡವರು, ಕೂಲಿ ಕಾರ್ಮಿಕರಿಗೆ ಸಹಾಯವಾಗಲು ಕೆಲವು ಸಂಸ್ಥೆಗಳ ಜೊತೆ ಸೇರಿ ಕಾರ್ಯಕ್ರಮರೂಪಿಸಿದ್ದೇವೆ. ಬಿ.ಪಿ.ಎಲ್‌ ಕಾರ್ಡ್‌ ದಾರರಾಗಿರುವ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳನ್ನು ಆಯ್ಕೆ ಮಾಡಿಕೊಂಡು ಅವರ ಕುಟುಂಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆ. ಜೊತೆಗೆ 2 ಸಾವಿರ ಹಣವನ್ನು ಅವರ ಅಕೌಂಟ್‌ ಗೆ ಹಾಕುತ್ತಿದ್ದೇವೆ ಎಂದಿದ್ದಾರೆ.ಇನ್ನು ಪ್ರಣೀತಾ ಮನೆಯಲ್ಲಿ ಅವರ ಪೋಷಕರು ಕೂಡ ವೈದ್ಯರಾಗಿರುವುದರಿಂದ, ಕೋವಿಡ್ 19 ಎಫೆಕ್ಟ್ ಹೇಗಿದೆ ಎನ್ನುವುದನ್ನ ಅವರು ಹತ್ತಿರದಿಂದ ನೋಡುತ್ತಿದ್ದಾರಂತೆ. ಸದ್ಯ ಎಲ್ಲರ ಲೈಫ್‌ಗೂ ಕೋವಿಡ್ 19  ಬ್ರೇಕ್‌ ಹಾಕಿದಂತಿದೆ ಎನ್ನುವ ಪ್ರಣೀತಾ, ಆದಷ್ಟು ಬೇಗ ಎಲ್ಲವೂ ಸಹಜ ಸ್ಥಿತಿಗೆ ಬರಲಿ, ಎಲ್ಲರೂ ಇದರಿಂದ ಹೊರಗೆ ಬರಲಿ ಎನ್ನುತ್ತಾರೆ.­

Advertisement

Udayavani is now on Telegram. Click here to join our channel and stay updated with the latest news.

Next