Advertisement

ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ

03:41 PM Sep 21, 2021 | Team Udayavani |

ಮುಂಬೈ: ದುಷ್ಕರ್ಮಿಗಳ ಗುಂಪೊಂದು ನನ್ನ ಮೇಲೆ ಆ್ಯಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ನಟಿ ಪಾಯಲ್ ಘೋಷ್ ಹೇಳಿದ್ದಾರೆ.

Advertisement

ಸೋಮವಾರ ಮೆಡಿಕಲ್ ಶಾಪ್‍ನಿಂದ ಕೆಲವು ಮೆಡಿಷನ್ ಪಡೆದು ಕಾರ್ ಹತ್ತುವ ಸಂದರ್ಭದಲ್ಲಿ ಬೈಕ್‍ ಮೇಲೆ ಧಾವಿಸಿದ ಮುಸುಕುಧಾರಿಗಳ ಗುಂಪು ನನ್ನ ಮೇಲೆ ಕಬ್ಬಿಣದ ರಾಡ್‍ನಿಂದ ದಾಳಿ ನಡೆಸಲು ಮುಂದಾದರು. ಅವರ ಕೈಯಲ್ಲಿ ಬಾಟಲ್‍ವೊಂದಿತ್ತು. ಬಹುಶಃ ಅದರಲ್ಲಿ ಆ್ಯಸಿಡ್ ಇತ್ತು ಎನ್ನುವುದು ನನ್ನ ಅನುಮಾನ. ನಾನು ಅವರಿಂದ ತಪ್ಪಿಸಿಕೊಂಡು ಪಾರಾದೆ. ಈ ವೇಳೆ ನನ್ನ ಕೈಗೆ ಸ್ವಲ್ಪ ಪೆಟ್ಟಾಗಿದೆ ಎಂದು ಪಾಯಲ್ ಹೇಳಿದ್ದಾರೆ.

ನಾನು ಕಾರಿನ ಡೋರ್ ತೆಗೆಯುವಷ್ಟರಲ್ಲಿ ಮುಸುಕುಧಾರಿಗಳ ಗುಂಪು ನನ್ನತ್ತ ಧಾವಿಸಿತು. ಅಪಾಯದ ಮುನ್ಸೂಚನೆ ಅರಿತು ನಾನು ಜೋರಾಗಿ ಕೂಗಿಕೊಂಡು, ನನ್ನ ಮೇಲೆ ನಡೆಯಬಹುದಾದ ದಾಳಿಯಿಂದ ತಪ್ಪಿಸಿಕೊಂಡೆ. ಅವರು ಸ್ಥಳದಿಂದ ಓಡಿ ಹೋದೆ. ಈ ಬಗ್ಗೆ ಇಂದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತೇನೆ ಎಂದು ಘೋಷ್ ಹೇಳಿದ್ದಾರೆ.

ಇನ್ನು ಪಾಯಲ್ ಅವರು ಬಾಲಿವುಡ್ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಇದು ಹಿಂದಿ ಚಿತ್ರರಂಗದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಟಾಲಿವುಡ್ ನಟ ಜ್ಯೂ.ಎನ್‍ಟಿಆರ್ ಬಗ್ಗೆಯೂ ಈ ನಟಿ ಮಾತನಾಡಿದ್ದರು. ಹಾಗೂ ಚಿತ್ರರಂಗದಲ್ಲಿ ಪಕ್ಷಪಾತ ಇದೆ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next