Advertisement
ಇತ್ತೀಚಿನ ವರ್ಷದ ಉದಾಹರಣೆ ಹೇಳುವುದಾದರೆ ರಚಿತಾ ರಾಮ್. ದರ್ಶನ್ ನಟನೆಯ “ಬುಲ್ ಬುಲ್’ ಸಿನಿಮಾ ಮೂಲಕ ಹಿರಿತೆರೆಗೆ ಎಂಟ್ರಿಕೊಟ್ಟ ರಚಿತಾ ಆ ನಂತರ ತಿರುಗಿ ನೋಡಿಯೇ ಇಲ್ಲ. ಬಹುತೇಕ ಕನ್ನಡದ ಎಲ್ಲಾ ಸ್ಟಾರ್‌ಗಳ ಚಿತ್ರಗಳಲ್ಲೂ “ಸ್ಟಾರ್ ನಟಿ’ಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಮತ್ತೆ ಸ್ಟಾರ್ ಸಿನಿಮಾಗಳ ಜಾತ್ರೆ ಆರಂಭವಾಗಿದೆ. ಆಗಸ್ಟ್ ಎರಡನೇ ವಾರದಿಂದ ಡಿಸೆಂಬರ್‌ವರೆಗೂ ಕನ್ನಡದ ಬಹುತೇಕ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ತೆರೆಕಾಣಲಿವೆ. ದುನಿಯಾ ವಿಜಯ್ “ಭೀಮ’, ಗಣೇಶ್ “ಕೃಷ್ಣಂ ಪ್ರಣಯ ಸಖೀ’, ಶಿವರಾಜ್‌ಕುಮಾರ್, “ಭೈರತಿ ರಣಗಲ್’, ಧ್ರುವ ಸರ್ಜಾ “ಮಾರ್ಟಿನ್’, “ಕೆಡಿ’, ಉಪೇಂದ್ರ “ಯು-ಐ’, ಶ್ರೀಮುರಳಿ “ಬ àರ’, ಸುದೀಪ್ “ಮ್ಯಾಕ್ಸ್’ ಚಿತ್ರಗಳು ಈ ವರ್ಷ ತೆರೆಕಾಣುವುದು ಪಕ್ಕಾ. ಈ ಸಿನಿಮಾಗಳು ಸ್ಟಾರ್ ನಟರಿಗೆ ಎಷ್ಟು ಮುಖ್ಯವೋ, ನಟಿಯರಿಗೂ ಅಷ್ಟೇ ಮುಖ್ಯವಾಗಿದೆ. ಒಂದು ಸಿನಿಮಾ ಹಿಟ್ ಆದರೆ ಅಥವಾ ಆ ಚಿತ್ರದಲ್ಲಿ ನಾಯಕಿ ತನ್ನ ನಟನೆಯ ಮೂಲಕ ಗುರುತಿಸಿ ಕೊಂಡರೆ ಸಿನಿರಂಗದಲ್ಲಿ ಆಕೆಯ “ಆಯಸ್ಸು’ ಕಡಿಮೆ ಎಂದರೂ ಮೂರು ವರ್ಷ ಹೆಚ್ಚುತ್ತದೆ. ಜೊತೆಗೆ ಸಿನಿಅಕೌಂಟ್‌ಗೆ ನಾಲ್ಕೈದು ಸಿನಿಮಾಗಳು ಜಮೆಯಾಗುತ್ತವೆ. ಹಾಗಾದರೆ ಈ ವರ್ಷ ತೆರೆ ಕಾಣುತ್ತಿರುವ ಸ್ಟಾರ್ ಸಿನಿಮಾಗಳಲ್ಲಿ ನಾಯಕಿಯರಾಗಿ ನಟಿಸಿದವರು ಯಾರು ಎಂಬ ಕುತೂಹಲ ಸಹಜ. ಆ ಬೆಡಗಿಯರ ಕುರಿತು ಒಂದು ರೌಂಡಪ್…
Related Articles
Advertisement
ಕೆಡಿ, ಯು-ಐನಲ್ಲಿ ರೀಷ್ಮಾ ನಾಣಯ್ಯ
ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನಕ್ಕೆ ಬಲಗಾಲಿಟ್ಟು ಎಂಟ್ರಿಕೊಟ್ಟ ಚೆಂದದ ಬೆಡಗಿ ರೀಷ್ಮಾ ಕೈಯಲ್ಲಿ ಈಗ ಎರಡ ಸ್ಟಾರ್ ಸಿನಿಮಾಗಳಿವೆ. ವಿಶೇಷವೆಂದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ. ಧ್ರುವ ಸರ್ಜಾ ನಾಯಕರಾಗಿರುವ “ಕೆಡಿ’ ಚಿತ್ರದಲ್ಲಿ ಮಚ್ಚ್ ಲಕ್ಷ್ಮೀ ಎಂಬ ಪಾತ್ರ ಮಾಡುತ್ತಿದ್ದಾರೆ. ಇನ್ನು ಉಪೇಂದ್ರ ನಟನೆ, ನಿರ್ದೇಶನದ “ಯು-ಐ’ ತಾರಾಗಣದಲ್ಲೂ ರೀಷ್ಮಾಗೆ ಅವಕಾಶ ಸಿಕ್ಕಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಚಿತ್ರದ “ಟ್ರೋಲ್ ಆಗುತ್ತೆ ಇದು ಟ್ರೋಲ್ ಆಗುತ್ತೆ’ ಹಾಡಲ್ಲಿ ಭರ್ಜರಿಯಾಗಿ ಸ್ಟೆಪ್ ಹಾಕಿದ ರೀಷ್ಮಾಗೆ ಆ ಹಾಡು ಒಳ್ಳೆಯ ಮೈಲೇಜ್ ನೀಡಿತ್ತು. ಮೂಲತಃ ಕೊಡಗಿನ ಬೆಡಗಿಯಾದ ರೀಷ್ಮಾ ಚಿತ್ರರಂಗದಲ್ಲಿ ನೆಲೆನಿಲ್ಲುವ ಲಕ್ಷಣ ತೋರುತ್ತಿದ್ದಾರೆ.
ಭೈರತಿ, ಬಘೀರದಲ್ಲಿ ರುಕ್ಮಿಣಿ
ರುಕ್ಮಿಣಿ ವಸಂತ್- ಈ ಹೆಸರು ಇತ್ತೀಚೆಗೆ ಜೋರಾಗಿ ಕೇಳಿಬಂದಿದ್ದು “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಸಮಯದಲ್ಲಿ. ಆ ಚಿತ್ರದಲ್ಲಿ ರುಕ್ಮಿಣಿ ವಸಂತ್ ಪ್ರಿಯಾ ಎಂಬ ಪಾತ್ರದ ಮೂಲಕ ಮಿಂಚಿದ್ದರು. “ಬೀರಬಲ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ರುಕ್ಮಿಣಿ ಕೈಯಲ್ಲಿ ಈಗ ಎರಡು ಸ್ಟಾರ್ ಸಿನಿಮಾಗಳಿವೆ. ಶಿವರಾಜ್‌ಕುಮಾರ್ ನಾಯಕರಾಗಿರುವ “ಭೈರತಿ ರಣಗಲ್’ ಹಾಗೂ ಶ್ರೀಮುರಳಿ ನಟನೆಯ “ಬಘೀರ’. ಈ ಎರಡೂ ಚಿತ್ರಗಳ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ “ಭೈರತಿ’ ತೆರೆಗೆ ಬರಲಿದೆ. ಎರಡರಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಅದೇ ಕಾರಣ ದಿಂದ ರುಕ್ಮಿಣಿ ಕಣ್ಣಲ್ಲಿ ನಿರೀಕ್ಷೆ ಹೆಚ್ಚಿದೆ.