ಬೆಂಗಳೂರು: ನಟಿ ಮೇಘನಾ ರಾಜ್ ಮಗ ರಾಯನ್ ನೊಂದಿಗೆ ಸಮಯ ಕಳೆಯುತ್ತ, ಜೀವನದ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಎಲ್ಲವನ್ನೂ ಮರೆತು ಮಗನೆಂಬ ಜಗದಲ್ಲಿ ತಾಯಿಯ ಅಕ್ಕರೆಯನ್ನು ನೀಡುತ್ತಾ ಬರುತ್ತಿದ್ದಾರೆ.
2020 ರ ಆ ಭಾನುವಾರದ ದಿನ ನನ್ನ ಜೀವನ ಸಂಪೂರ್ಣ ಬದಲಾಯಿತು. ಅಂದಿನಿಂದ ಜನ ನನ್ನ ಬಳಿ ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಆ ಪ್ರಶ್ನೆಗೆ ಉತ್ತರ ನೀಡಲಿದ್ದೇನೆ . ಭಾನುವಾರ (ಫೆ19 ರಂದು) ಬೆಳಗ್ಗೆ 10:35 ಆ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಫೋಸ್ಟ್ ಹಾಕಿದ್ದರು.
ಪತಿ ಚಿರಂಜೀವಿ ಸರ್ಜಾ ಅವರ ನಿಧನದ ಬಳಿಕ ನಿಧಾನವಾಗಿ ನೋವನ್ನು ಮರೆತು ಟಿವಿ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ, ಕಿರುತೆರೆಗೆ ಮೇಘನಾ ಕಾಲಿಟ್ಟಿದ್ದಾರೆ. ಅನೇಕ ಬಾರಿ ಅವರಿಗೆ ಎರಡನೇ ಮದುವೆಯ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಆದರೆ ಅದು ಯಾವುದಕ್ಕೂ ಮೇಘನಾ ಉತ್ತರ ನೀಡಲೇ ಇಲ್ಲ.
ಇದೀಗ ನಟಿ ಮೇಘನಾ ತಮಗೆ ಕೇಳಲಾಗುತ್ತಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ. ನಟಿ ಮೇಘನಾ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಅವರು ನಟಿಯಾಗಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟಿ ಮೇಘನಾ ಫೋಸ್ಟ್ ಮಾಡಿದ್ದು, ʼತತ್ಸಮ ತದ್ಭವʼ ಎಂಬ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಡಲಿದ್ದಾರೆ.
ನಾನು ಬಣ್ಣದ ಲೋಕಕ್ಕೆ ಮತ್ತೆ ಯಾವಾಗ ಬರುವುದು ಎಂದು ಅನೇಕರು ನನ್ನ ಬಳಿ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ಇದೇ ಎಂದಿದ್ದಾರೆ.
ಈ ಸಿನಿಮಾವನ್ನು ವಿಶಾಲ್ ಅತ್ರೆ ನಿರ್ದೇಶನ ಮಾಡಲಿದ್ದಾರೆ. ಪನ್ನಗಭರಣ, ಸ್ಫೂರ್ತಿ ಅನಿಲ್, ಚೇತನ್ ನಂಜುಡಯ್ಯ ನಿರ್ಮಾಣ ಮಾಡಲಿದ್ದಾರೆ. ವಾಸುಕಿ ವೈಭವ್ ಮ್ಯೂಸಿಕ್ ಚಿತ್ರಕ್ಕಿರಲಿದೆ. ಈ ಸಿನಿಮಾ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ.