Advertisement

Actress: 42ನೇ ವಯಸ್ಸಿನಲ್ಲಿ ತನಗಿಂತ 6 ವರ್ಷ ಚಿಕ್ಕವನೊಂದಿಗೆ 3ನೇ ಮದುವೆಯಾದ ಖ್ಯಾತ ನಟಿ

07:27 PM May 26, 2024 | Team Udayavani |

ಕೊಯಮತ್ತೂರು: ಮಾಲಿವುಡ್‌ ಕಿರುತೆರೆ ಹಾಗೂ ಸಿನಿರಂಗದ ಖ್ಯಾತ ನಟಿ ಮೀರಾ ವಾಸುದೇವನ್ ತನ್ನ 42ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗುವ ಮೂಲಕ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಮಾಲಿವುಡ್‌ , ಕಾಲಿವುಡ್‌, ಟಾಲಿವುಡ್‌ , ಬಾಲಿವುಡ್‌ ಹಾಗೂ ಕನ್ನಡದ ಬಣ್ಣದ ಲೋಕದಲ್ಲಿ ಮಿಂಚಿರುವ ಮೀರಾ ವಾಸುದೇವನ್‌ ‘ಉನ್ನೈ ಸರನಾದೈಂತೆನ್’, ‘ತನ್ಮಾತ್ರ’ ಮತ್ತು ‘ಜೆರ್ರಿʼ ಮುಂತಾದ ಸಿನಿಮಾದಲ್ಲಿ ತನ್ನ ನಟನೆ ಮೂಲಕ ಮಿಂಚಿದ್ದಾರೆ.

ಇವರ ನಟನಾ ಕೌಶಲ್ಯಕ್ಕೆ 2007 ರಲ್ಲಿ ಅತ್ಯುತ್ತಮ ನಟಿಗಾಗಿ ಕೇರಳ ರಾಜ್ಯ ಟಿವಿ ಪ್ರಶಸ್ತಿ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸಂದಿದೆ.

ನಟನೆಯೊಂದಿಗೆ ವೈಯಕ್ತಿಕ ಜೀವನದ ವಿಚಾರದಲ್ಲೂ ಸುದ್ದಿಯಾದ ಮೀರಾ ಕಾಲಿವುಡ್‌ ನಟ ಜಾನ್ ಕೊಕ್ಕನ್ ಅವರೊಂದಿಗೆ ಮೊದಲು ಮದುವೆಯಾಗಿದ್ದರು. ಇವರಿಂದ ವಿಚ್ಚೇದನ ಪಡೆದು, ವಿಶಾಲ್ ಅಗರ್ವಾಲ್ ಅವರನ್ನು ವಿವಾಹವಾಗಿದ್ದರು. ಅವರಿಂದ ದೂರವಾದ ಬಳಿಕ ನಟಿ ಮೀರಾ ಇದೀಗ ವಯಸ್ಸಿನಲ್ಲಿ ತನಗಿಂತ 6 ವರ್ಷ ಚಿಕ್ಕವನಾಗಿರುವ ವ್ಯಕ್ತಿಯ ಜೊತೆ ಹಸೆಮಣೆ ಏರಿದ್ದಾರೆ.

ಇವರ ಹೆಸರು ವಿಪಿನ್ ನಯಂಗಮ್. ವಿಪಿನ್‌ ಸಿನಿಮಾರಂಗದಲ್ಲಿ ಸಿನಿಮಾಟೋಗ್ರಾಫರ್ ಗುರುತಿಸಿಕೊಂಡಿದ್ದು, 2019 ರಲ್ಲಿ ಜೊತೆಯಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಮೀರಾ ಹೇಳಿದ್ದಾರೆ.

Advertisement

ನಟಿಯ ಕೆಲವೇ ಕೆಲ ಆತ್ಮೀಯರ ಸಮ್ಮುಖದಲ್ಲಿ ಏ.21 ರಂದು ವಿವಾಹ ನಡೆದಿದ್ದು, ಫೋಟೋ, ವಿಡಿಯೋವನ್ನು ಮೀರಾ ಈಗ ಹಂಚಿಕೊಂಡಿದ್ದಾರೆ.  ನಾವು ದಂಪತಿಗಳಾಗಿ ಇಂದು ನೋಂದಣಿ ಮಾಡಿಕೊಂಡಿದ್ದೇವೆ ಎಂದು ಮೀರಾ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌ ಗಳು ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next