Advertisement

New Kannada serial: ಕಿರುತೆರೆಯತ್ತ ದಿವ್ಯಾ ಉರುಡುಗ

04:17 PM May 21, 2024 | Team Udayavani |

ಸಿನಿಮಾ ಮತ್ತು ಕಿರುತೆರೆಗೆ ಒಂದು ವಿಶೇಷ ಸಂಬಂಧವಿದೆ. ಅದೆಷ್ಟೋ ಕಲಾವಿದರು ಕಿರುತೆರೆಯಲ್ಲಿ ಮಿಂಚಿ ಆ ಬಳಿಕ ಹಿರಿತೆರೆಗೆ ಬಂದಿರುತ್ತಾರೆ. ಇನ್ನೊಂದಷ್ಟು ಕಲಾವಿದರು ಸಿನಿಮಾದಿಂದಲೇ ತಮ್ಮ ಕೆರಿಯರ್‌ ಆರಂಭಿಸಿ ಬಳಿಕ ಕಿರುತೆರೆಯತ್ತ ಮುಖ ಮಾಡುತ್ತಾರೆ. ಎರಡೂ ಕ್ಷೇತ್ರಗಳ ಮುಖ್ಯ ಉದ್ದೇಶ ಮನರಂಜನೆ ಆಗಿರುವುದರಿಂದ ಕಲಾವಿದರು ಹಿರಿತೆರೆ-ಕಿರುತೆರೆ ಬಗ್ಗೆ ಆಸಕ್ತಿ ತೋರಿಸುತ್ತಾರೆ.

Advertisement

ಈಗ ನಟಿ ದಿವ್ಯಾ ಉರುಡುಗ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ, ಬಳಿಕ ಕಿರುತೆರೆಯ ಬಿಗ್‌ಬಾಸ್‌ ಶೋನಲ್ಲೂ ಮಿಂಚಿರುವ ದಿವ್ಯಾ, ಈಗ ಧಾರಾವಾಹಿಯೊಂದರಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಧಾರಾವಾಹಿಗೆ “ನಿನಗಾಗಿ’ʼ ಎಂದು ಟೈಟಲ್‌ ಇಡಲಾಗಿದ್ದು, ಮೇ 27ರಿಂದ ಕಲರ್ ಕನ್ನಡದಲ್ಲಿ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ.

ತಮ್ಮ ಹೊಸ ಧಾರಾವಾಹಿ ಬಗ್ಗೆ ಮಾತನಾಡುವ ದಿವ್ಯಾ, “ನನಗೆ ಹೆಮ್ಮೆ ಅನಿಸುತ್ತದೆ. ಪ್ರತಿ ವಿಷಯದಲ್ಲಿಯೂ ಹೊಸದು ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್‌ ಸ್ಟಾರ್‌ ಸಿಂಪಲ್‌ ಆಗಿ ಲೈಫ್ ಲೀಡ್‌ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ. ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡಬೇಕು. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್‌ ಶೂಟ್‌ ಮಾಡಲಾಗುತ್ತಿದೆ’ ಎನ್ನುತ್ತಾರೆ. “ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್‌ ಮಠದ್‌ ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ಪ್ರಿಯಾಂಕ ಕಾಮತ್‌, ಕಿಶನ್‌ ಬೆಳಗಲಿ, ವಿಜಯ್‌ ಕೌಂಡಿನ್ಯ, ಸಿರಿ ಸಿಂಚನ ಮುಂತಾದವರಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next