Advertisement

ಬುಮ್ರಾಗೆ ಲವ್‌ ಆಯ್ತಾ?

01:07 AM Jun 08, 2019 | Sriram |

ಹೊಸದಿಲ್ಲಿ: ಭಾರತದ ವೇಗಿ ಜಸ್‌ಪ್ರೀತ್‌ ಬುಮ್ರಾ ಲವ್‌ನಲ್ಲಿ ಬಿದ್ದಿದ್ದಾರೆಯೇ? ಹೀಗೊಂದು ಗುಸುಗುಸು ಈಗ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

Advertisement

ಬುಮ್ರಾ ಅವರನ್ನು ಬೌಲ್ಡ್‌ ಮಾಡಿರುವುದು ಮಲಯಾಳಂ ನಟಿ ಅನುಪಮಾ ಪರಮೇಶ್ವರನ್‌ ಎಂಬ ಬೆಡಗಿಯಂತೆ. ಟ್ವಿಟರ್‌ನಲ್ಲಿ ಬುಮ್ರಾ ಅವರನ್ನು ಅನುಪಮಾ ಫಾಲೋ ಮಾಡುತ್ತಿದ್ದಾರೆ.

ಬುಮ್ರಾಗೆ ಟ್ವಿಟರ್‌ನಲ್ಲಿ ಇರುವುದೇ 25 ಫಾಲೋವರ್, ಈ ಪೈಕಿ ಅನುಪಮಾ ನಿರಂತರವಾಗಿ ಫಾಲೋ ಮಾಡುತ್ತಿದ್ದಾರೆ. ಅವರ ನಡುವೆ ಕೆಲವು ಟ್ವೀಟ್‌ಗಳ ವಿನಿಮಯವಾಗಿದೆ. ಅವರ ಈ ನಿಕಟತೆ ಈಗ ಬುಮ್ರಾಗೆ ಲವ್ವಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸದ್ಯಕ್ಕೆ ಇಬ್ಬರೂ ನಾವು ಬೆಸ್ಟ್‌ ಫ್ರೆಂಡ್ಸ್‌ ಮಾತ್ರ ಎಂದು ಈ ಗಾಳಿಮಾತನ್ನು ತೇಲಿಸಿ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next