Advertisement

ದಂಗಲ್‌ ಖ್ಯಾತಿಯ ನಟಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ 

10:28 AM Dec 10, 2017 | |

ಹೊಸದಿಲ್ಲಿ : ದಂಗಲ್‌ ಖ್ಯಾತಿಯ ಬಾಲಿವುಡ್‌ ನಟಿ ಝೈರಾ ವಾಸಿಮ್‌ ಅವರಿಗೆ ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.  ಝೈರಾ ಅವರೇ  ಈ ನೋವಿನ ವಿಚಾರವನ್ನು ಸಾಮಾಜಿಕ ತಾಣ ಇನ್‌ಸ್ಟಾಗ್ರಾಂನಲ್ಲಿ ಕಣ್ಣೀರಿಡುತ್ತಾ ಬಹಿರಂಗಪಡಿಸಿದ್ದಾರೆ. 

Advertisement

ಇತ್ತೀಚೆಗೆ ದೆಹಲಿಯಿಂದ ಮುಂಬಯಿಗೆ ವಿಸ್ತಾರಾ ಏರ್‌ಲೈನ್ಸ್‌ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂಬಂದಿಯ ಸೀಟ್‌ ನಲ್ಲಿ ಕುಳಿತಿದ್ದ  ಮಧ್ಯವಯಸ್ಕ ಪುರುಷನೊಬ್ಬ ತನ್ನ ದೇಹದ ಭಾಗಗಳನ್ನು ಸ್ಪರ್ಶಿಸಿ  ಕಿರುಕುಳ ನೀಡಿರುವುದಾಗಿ  ಹೇಳಿಕೊಂಡಿದ್ದಾರೆ.

‘ನಾನು ಮಲಗಿದ್ದ ವೇಳೆ ಆ ವ್ಯಕ್ತಿ ನನ್ನ ಕತ್ತಿನ ಭಾಗವನ್ನು ಸ್ಪರ್ಶಿಸುತ್ತಿದ್ದ ಆದರೆ ನಾನು ವಿಡಿಯೋ ಚಿತ್ರೀಕರಿಸಲು ಮಂದ ಬೆಳಕು ಅಡ್ಡಿ ಪಡಿಸಿತು.ಆದರೂ ನಾನು ಆತನ ಕೆಲ ಫೋಟೋಗಳನ್ನು ಕ್ಲಿಕ್ಕಿಸಿದೆ’ ಎಂದು ಹೇಳಿಕೊಂಡಿದ್ದಾರೆ. 

 ವಿಮಾನದಿಂದ  ಇಳಿಯುತ್ತಿದ್ದಂತೆ ತನ್ನ ಮೇಲಾದ ದೌರ್ಜನ್ಯವನ್ನು ವಿಮಾನದ ಸಿಬಂದಿಗಳ ಗಮನಕ್ಕೆ ತಂದಿದ್ದಾರೆ.

ವಿಡಿಯೋದ ಕೊನಯಲ್ಲಿ ‘ನನಗೆ ನೋವಾಗಿದೆ. ಇದೇಯಾ ನೀವು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ?’ಎಂದು ಝೈರಾ ಕಣ್ಣೀರಿಟ್ಟಿದ್ದಾರೆ. 

Advertisement

ವಿಮಾನಯಾನ ಸಂಸ್ಥೆ ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next