Advertisement
2. 08 ಲಕ್ಷ ರೂ. ದೇಣಿಗೆಬಳಿಕ ಯಶ್ ಹೊಸಳಿಗಮ್ಮ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ದೇಗುಲದ ಕಚೇರಿಯಲ್ಲಿ ಅನ್ನದಾನ ನಿಧಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಹಾಗೂ ಚಲನಚಿತ್ರ ಸಂಸ್ಥೆ ಹೆಸರಿನಲ್ಲಿ 1.08 ಲಕ್ಷ ರೂ. ದೇಣಿಗೆ ನೀಡಿದರು. ಕೆ.ಜಿ.ಎಫ್. ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡ ಬಳಿಕ ಮತ್ತೆ ಕ್ಷೇತ್ರಕ್ಕೆ ಬಂದು ದೇವರಿಗೆ ಮಹಾಭಿಷೇಕ ನೆರವೇರಿಸುವುದಾಗಿ ಹರಕೆ ಹೇಳಿಕೊಂಡರು.
ಧರ್ಮಸ್ಥಳದಿಂದ ಹೆಲಿಕಾಪ್ಟರ್ ಮೂಲಕ ಕುಮಾರಧಾರಾ ಶಾಲೆಯ ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿದ ಯಶ್, ನೇರವಾಗಿ ದೇವಸ್ಥಾನಕ್ಕೆ ತೆರಳಿ, ಸೇವೆಯಲ್ಲಿ ಭಾಗಿಯಾದರು. ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ನಟ ಯಶ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಮಾಧವ ಡಿ., ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ, ನಿವೃತ್ತ ಶಿಷ್ಟಾಚಾರ ಅಧಿಕಾರಿ ವೆಂಕಟ್ರಾಜ್, ದೇಗುಲದ ಪ್ರಮೋದ್ ಉಪಸ್ಥಿತರಿದ್ದರು. ಮುಗಿಬಿದ್ದ ಅಭಿಮಾನಿಗಳು
ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ನೆಚ್ಚಿನ ನಟನ ಜತೆ ಸೆಲ್ಫಿ ತೆಗೆಸಿಕೊಳ್ಳಲು ನೂಕುನುಗ್ಗಲು ನಡೆಸಿದರು. ಆದರೆ, ತಡವಾಯಿತೆಂದು ಯಶ್ ಅಭಿಮಾನಿಗಳತ್ತ ಕೈಮುಗಿದು ನಿರ್ಗಮಿಸಿದರು.