Advertisement

ಹಣ ಕೊಟ್ಟು ಮತ ನೀಡಿ ಎನ್ನುವ ನೀಚರ ಕಪಾಳಕ್ಕೆ ಬಾರಿಸಿ: ನಟ ಉಪೇಂದ್ರ

09:22 PM May 02, 2021 | Team Udayavani |

ಬೆಂಗಳೂರು: ದೇಶದಲ್ಲಿ ಕೋವಿಡ್ ಎರಡನೇ ಅಲೆ ರಣಕೇಕೆ ಹಾಕುತ್ತಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ನಟ ಉಪೇಂದ್ರ ಅವರು ಮಾಡಿರುವ ಫೇಸ್‍ಬುಕ್ ಪೋಸ್ಟ್ ವೊಂದು ಸಂಚಲನ ಮೂಡಿಸುತ್ತಿದೆ.

Advertisement

ಸಾಲು ಸಾಲು ಚಿತೆಗಳು ಉರಿಯುತ್ತಿದೆ, ಅಂದು ಎಲ್ಲೊ , ಇಂದು ನಮ್ಮ ಸುತ್ತ ಮುತ್ತಾ!! ನಾಳೆ? ಎಂದು ಪ್ರಶ್ನಿಸಿದ್ದಾರೆ. ನೀವು ಇನ್ನಾದರೂ ಬದಲಾಗಿ ಎಂದಿರುವ ಉಪ್ಪಿ ಕೆಲವೊಂದು ಮಹತ್ವದ ಮಾತುಗಳನ್ನಾಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.

  1. ಹಣ ಕೊಟ್ಟು ಮತ ನೀಡಿ ಎನ್ನುವ ನೀಚರ ಕಪಾಳಕ್ಕೆ ಬಾರಿಸಿ…
  2. ಜಾತಿ, ಧರ್ಮ ನಮ್ಮ ವೈಯಕ್ತಿಕ, ಅದನ್ನು ರಾಜಕೀಯದಿಂದ ದೂರ ಇಡಿ…..
  3. ಬುದ್ದಿವಂತ ಮತದಾರರೇ… ಮತ ಹಾಕಿದರೆಷ್ಟು ಬಿಟ್ಟರೆಷ್ಟು? ಯಾರು ಬಂದರೂ ಅಷ್ಟೇ ಎನ್ನುವ ತಿರಸ್ಕಾರ ಮನೋಭಾವದಿಂದ ಹೊರ ಬನ್ನಿ…
  4. ವಿಚಾರಕ್ಕೆ ಮಾತ್ರ ನಿಮ್ಮ ಮತ ಮೀಸಲಿಡಿ ಮತ್ತು ಪ್ರತಿನಿಧಿ ಹೇಳಿದ ರೀತಿ ನಡೆಯದಿದ್ದರೆ ರಸ್ತೆಯಲ್ಲಿ ನಿಲ್ಲಿಸಿ ಕೇಳುವ ನಾಯಕತ್ವದ ಗುಣ ಬೆಳೆಸಿಕೊಳ್ಳಿ…
  5. ಸಭೆ ಸಮಾರಂಭಕ್ಕೆ ಚಿಲ್ಲರೆ, ಬಿರಿಯಾನಿ ಪ್ಯಾಕೆಟ್ ನೀಡಿ ಕರೆಯುವವರಿಗೆ ಛೀಮಾರಿ ಹಾಕಿ….
  6. ರಾಜಕೀಯ ಪಕ್ಷಗಳ ಕಾರ್ಯಕರ್ತರು ನಿಮ್ಮ ಸ್ವಾರ್ಥಕ್ಕಾಗಿ ಯಾರನ್ನೂ ಬೆಂಬಲಿಸಬೇಡಿ…ಸುಳ್ಳು ಪ್ರಚಾರ ಮಾಡಬೇಡಿ…..
  7. ಹಣಕ್ಕಾಗಿ ಭ್ರಷ್ಟ ರಾಜಕೀಯ ನಾಯಕರನ್ನು ವೈಭವೀಕರಿಸುವುದನ್ನು ಟಿವಿ ಮಾಧ್ಯಮಗಳು ಕೈಬಿಡಿ…. ಚುನಾವಣೆ ಸಮಯದಲ್ಲಿ ಜನರ ತೆರಿಗೆಯ ಪೈಸೆ ಪೈಸೆಗೂ ಲೆಕ್ಕ ಕೊಡಲು ಕೇಳಿ……
  8. ಕೊನೆಯದಾಗಿ ಭ್ರಷ್ಟ ರಾಜಕೀಯ ನಾಯಕರೇ ಸಾಕು, ಪಾರ್ಟಿ ಫಂಡ್, ಪ್ರಚಾರ, ಸುಳ್ಳು ಆಶ್ವಾಸನೆ, ಹಣ ಚೆಲ್ಲಿ ಸಭೆ ರ್ಯಾಲೀ ಸಮಾರಂಭ, ಪ್ರತಿಭಟನೆ, ಮಾಧ್ಯಮಗಳಲ್ಲಿ ಪ್ರಚಾರ, ಅಧಿಕಾರ ಹಿಡಿದು ಚೆಲ್ಲಿದ ಹಣ ದುಪ್ಪಟ್ಟು ಮಾಡುವ ಭ್ರಮೆಯಿಂದ ಹೊರಬನ್ನಿ…. ನಿಮಗಾಗಿ ಅಲ್ಲದಿದ್ದರೂ ನಿಮ್ಮ ಮಕ್ಕಳಿಗಾಗಿ ಸುಂದರ ಸಮಾಜ ನೀವು ಕಟ್ಟಬೇಕಿದೆ…
  9. ಭ್ರಷ್ಟ ಅಧಿಕಾರಿಗಳೇ ನಿಮಗೆ ಎಲ್ಲಾ ತಿಳಿದಿದೆ, ಲಂಚ ಕೊಟ್ಟು ಸಿಗುವ ಆ ಪದವಿಗಳನ್ನು ನೀವು ತಿರಸ್ಕರಿಸುವ ಕಾಲ ಬಂದಿದೆ…..

ಕರೋನದಿಂದ ಈ ಪಾಠ ನಾವು ಕಲಿಯದಿದ್ದರೆ ನೀವು ಓದಿರುವ ವಿದ್ಯೆ ವ್ಯರ್ಥ..

ಸಾಲು ಸಾಲು ಚಿತೆಗಳು ಉರಿಯುತ್ತಿದೆ, ಅಂದು ಎಲ್ಲೊ , ಇಂದು ನಮ್ಮ ಸುತ್ತ ಮುತ್ತಾ !! ನಾಳೆ ??!!

ಇನ್ನಾದರೂ ಬದಲಾಗಿ…….

Advertisement
Advertisement

Udayavani is now on Telegram. Click here to join our channel and stay updated with the latest news.

Next