ಚೆನ್ನೈ: ಡಿಎಂಕೆ ನಾಯಕ ಸ್ಟಾಲಿನ್ ಪುತ್ರ, ಯುವ ರಾಜಕಾರಣಿ, ನಟ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಡಿಎಂಕೆ ‘ವಿಡಿಯಲೈ ನೊಕ್ಕಿ’ ಎಂಬ ಹೆಸರಿನ ಚುನಾವಣಾ ಪ್ರಚಾರವನ್ನು ತಮಿಳುನಾಡಿನಲ್ಲಿ ಆರಂಭಿಸಿದೆ. ಶುಕ್ರವಾರ ಪ್ರಚಾರ ಸಮಾವೇಶಕ್ಕೆ ಉದಯನಿಧಿ ಸ್ಟಾಲಿನ್ ನಾಗಪಟ್ಟಿನಂ ಜಿಲ್ಲೆಯಲ್ಲಿ ಚಾಲನೆ ನೀಡಿದರು. ಆದರೆ ಈ ಸಮಾವೇಶಕ್ಕೆ ಪೊಲೀಸರಿಂದ ಅನುಮತಿ ಪಡೆದಿಲ್ಲ, ಅದಲ್ಲದೆ ಕೋವಿಡ್ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಬಂಧಿಸಲಾಗಿದೆ.
ಉದಯನಿಧಿ ಸ್ಟಾಲಿನ್ ಜೊತೆ ಸುಮಾರು 200 ಮಂದಿ ಕಾರ್ಯಕರ್ತರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ನಂತರ ಬಿಡುಗಡೆಗೊಳಿಸಿದ್ದಾರೆ.
ಇದನ್ನೂ ಓದಿ:ನಟಿ ಉಮಾಶ್ರೀ ಅವರ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಉದಯನಿಧಿ ಅವರು ಡಿಎಂಕೆ ಪಕ್ಷದ ಯುವ ಘಟಕದ ಕಾರ್ಯದರ್ಶಿಯಾಗಿದ್ದು, ಸಕ್ರಿಯ ರಾಜಕಾರಣದೊಂದಿಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೃ ತಿಂಗಳುಗಳು ಬಾಕಿ ಇರುವಂತೆ ರಾಜಕೀಯ ಚಟುವಟಿಕೆಗಳು ಬಿರುಸು ಪಡೆಯುತ್ತಿದೆ.