Advertisement
ಮಂಗಳೂರು ಹಾಗೂ ಆಂಧ್ರ ಪ್ರದೇಶದ ಕರ್ನೂಲು ಮತ್ತು ನೆಲ್ಲೂರಿನಲ್ಲಿ ಅದಾಗಲೇ ಆಮ್ಲಜನಕದ ಘಟಕ ಸ್ಥಾಪನೆಯ ಕೆಲಸ ಆರಂಭಗೊಂಡಿದ್ದು, ಮಿಕ್ಕ ರಾಜ್ಯಗಳಲ್ಲೂ ಶೀಘ್ರ ಕೆಲಸ ಶುರುವಾಗಲಿದೆ ಎಂದಿರುವ ಸೂದ್, “ಕಳೆದ ಕೆಲ ತಿಂಗಳುಗಳಲ್ಲಿ ನಾವು ಬಹಳ ದೊಡ್ಡ ಸಮಸ್ಯೆಯೊಂದನ್ನು ಕಂಡಿದ್ದು, ನಾವೆಲ್ಲಾ ಆಮ್ಲಜನಕದ ಅಲಭ್ಯತೆಯನ್ನು ಎದುರಿಸುತ್ತಿದ್ದೇವೆ. ನಾನು ಹಾಗೂ ನನ್ನ ತಂಡ, ಆಮ್ಲಜನಕದ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಆಲೋಚನೆ ಮಾಡುತ್ತಿದ್ದವು. ಹೀಗಾಗಿ ಆಮ್ಲಜನಕದ ಘಟಕಗಳನ್ನು ಸಾಧ್ಯವಾದಷ್ಟು ಕಡೆಗಳಲ್ಲಿ ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.
Related Articles
Advertisement