Advertisement

Shivarajkumar: ನನ್ನ ಹೊಸ ಗೆಟಪ್‌ ನೋಡೋಕೆ ನಮ್ಮ ತಾಯಿ ಇರಬೇಕಿತ್ತು…

05:25 PM Oct 18, 2023 | Team Udayavani |

ನಟ ಶಿವರಾಜಕುಮಾರ್‌ ಅಭಿನಯದ “ಘೋಸ್ಟ್‌’ ಸಿನಿಮಾ ಇದೇ ಅ. 19ರಂದು ಬಿಡುಗಡೆ ಯಾಗಿ ತೆರೆಗೆ ಬರುತ್ತಿದೆ. ಇನ್ನು “ಘೋಸ್ಟ್‌’ ಸಿನಿಮಾದ ಟ್ರೇಲರ್‌ನಲ್ಲಿ ಶಿವರಾಜ ಕುಮಾರ್‌ ಅವರ ಯಂಗ್‌ ಗೆಟಪ್‌ ನೋಡುಗರ ಗಮನ ಸೆಳೆಯುತ್ತಿದ್ದು, ಟ್ರೇಲರ್‌ ನೋಡಿದ ಬಳಿಕ ಎಲ್ಲರೂ “ಆನಂದ್‌’ ಸಿನಿಮಾದ ಗೆಟಪ್‌ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಬಿಡುಗಡೆಗೂ ಮುನ್ನ ತಮ್ಮ ನಿವಾಸದಲ್ಲಿ ಈ ಬಗ್ಗೆ ಮಾತನಾಡುವಾಗ ಶಿವಣ್ಣ ತಮ್ಮ ತಾಯಿ ಪಾರ್ವತಮ್ಮ ರಾಜಕುಮಾರ್‌ ಅವರನ್ನು ನೆನಪಿಸಿಕೊಂಡು ಕೊಂಚ ಭಾವರಾದರು.

Advertisement

“ಮೊದಲಿಗೆ ನಿರ್ದೇಶಕ ಶ್ರೀನಿ ಈ ಗೆಟಪ್‌ನ ಸ್ಯಾಂಪಲ್‌ ಮಾತ್ರ ಕಳಿಸಿದ್ದರು. ಆ ನಂತರ ನಾನು ನೋಡಿದ್ದು ಕೂಡ ನಿಮ್ಮ ಜೊತೆ. ಈಗ ನೋಡಿದಾಗ ಚೆನ್ನಾಗಿದೆ ಎನಿಸಿತು, ಅಷ್ಟೇ ಅಲ್ಲ ಅಚ್ಚರಿ ಕೂಡ ಆಯಿತು. ನಾನೇ 1987ರ ಕಾಲಕ್ಕೆ ತೆರಳಿದಂತೆ ಭಾಸವಾಯ್ತು. ಆದರೆ ಇದನ್ನು ನೋಡೋಕೆ ನಮ್ಮ ತಾಯಿ ಇಲ್ಲ ಅಂತ ದುಃಖ ಆಯಿತು. ಯಾಕೆಂದರೆ “ಆನಂದ್‌’ ಸಿನಿಮಾ ಶುರು ಮಾಡಿದ್ದು ಅವರೇ ತಾನೆ’ ಎಂದು ಶಿವರಾಜಕುಮಾರ್‌ ಹೇಳಿದ್ದಾರೆ.

“ಟ್ರೇಲರಿನಲ್ಲಿ ನನ್ನ ಯಂಗ್‌ ಗೆಟಪ್‌ಗೆ ಜನರಿಂದ ಭರ್ಜರಿ ಮೆಚ್ಚುಗೆ ಕೇಳಿಬಂದಿರುವುದಕ್ಕೆ ತುಂಬ ಖುಷಿಯಾಗುತ್ತಿದೆ. ಈ ರೀತಿ ಕಾಣುವಂತೆ ಪ್ರಯತ್ನಿಸಿದ ನಿರ್ದೇಶಕ ಶ್ರೀನಿ ಮತ್ತು ತಂಡ ಪ್ರಯತ್ನವನ್ನು ನಾವೆಲ್ಲರೂ ಮೆಚ್ಚಲೇ ಬೇಕು. ಇದನ್ನೆಲ್ಲ ನೋಡಲು ತಾಯಿ ಇರಬೇಕಾಗಿತ್ತು’ ಎಂದರು ಶಿವಣ್ಣ.

Advertisement

Udayavani is now on Telegram. Click here to join our channel and stay updated with the latest news.

Next