Advertisement
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ “ಉದಯವಾಣಿ’ ಜತೆ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು.
ಗೀತಾ ಪ್ರೊಡಕ್ಷನ್‌ನ ಮೊದಲ ಸಿನೆಮಾ. ನನ್ನ 125ನೇ ಸಿನೆಮಾ. ಕಥೆ ಮೊದಲು ಕೇಳಿದಾಗಲೇ ತುಂಬ ಖುಷಿಯಾಯಿತು. ಆಪ್ತವಾಗುವ ಸಂದೇಶ ಇದರಲ್ಲಿದೆ. ಹಳೆಯ ಗೆಟಪ್ ಹಾಗೂ ಹೊಸ ಗೆಟಪ್‌ನಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹರ್ಷ ಅವರ ಜತೆ ಸಿನೆಮಾ ಮಾಡುವುದೇ ಖುಷಿ. ಎಲ್ಲ ಸಿನೆಮಾಗಳು ಪರೀಕ್ಷೆ ರೀತಿ ಇರುವುದರಿಂದ ಭಯ ಸಾಮಾನ್ಯ. ಭಜರಂಗಿ, ವಜ್ರಕಾಯ ಯಶಸ್ಸಿನ ಬಳಿಕ ಹರ್ಷ ಅವರ ಜತೆ ವೇದ ಸಿನೆಮಾ ಮಾಡಿದ್ದೀರಿ. ಹೇಗನಿಸುತ್ತದೆ?
ನಿಜಕ್ಕೂ ಇಂಥದ್ದೊಂದು ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ, ಹರ್ಷ ಅವರ ಸಿನೆಮಾ ಮೇಕಿಂಗ್ ಹೊಸ ರೂಪದಲ್ಲಿ ಇರುತ್ತದೆ. ಭಜರಂಗಿ 1 ಹಾಗೂ 2, ವಜ್ರಕಾಯ ಈ ಮೂರರಲ್ಲಿಯೂ ಶೇಡ್ಸ್ ಬೇರೆ ರೀತಿಯಲ್ಲಿ ನೀಡಿದ್ದರು. ಅವರು ಮಾಡುವ ಸಿನೆಮಾ ಹೊಸ ಗೆಟಪ್ ಹಾಗೂ ಸಂದೇಶ ಹೊಂದಿರು ತ್ತದೆ.
Related Articles
ನಿಜಕ್ಕೂ ಕನ್ನಡ ಸಿನೆಮಾ ರಂಗಕ್ಕೆ ಇದೊಂದು ಹೊಸ ದಾರಿ. ಹೊಸ ನಿರ್ದೇಶಕರಿಗೆ ಸ್ಫೂರ್ತಿ. ಹೊಸತನ ನೀಡಿ ದರೆ ಯಾವ ಸಿನೆಮಾವೂ ಸದ್ದು ಮಾಡಬಲ್ಲುದು ಎಂಬು ದನ್ನು ಇತ್ತೀಚಿನ ಕನ್ನಡ ಚಿತ್ರಗಳು ತೋರಿಸಿಕೊಟ್ಟಿವೆ.
Advertisement
ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗವನ್ನು ಹತ್ತಿರದಿಂದ ತಾವು ಕಂಡಿದ್ದೀರಿ. ಇಲ್ಲಿನ ವಿಶೇಷವಾದರೂ ಏನು?ಕರಾವಳಿ ಭಾಗದಲ್ಲಿ ಅವೆಷ್ಟೋ ಸಿನೆಮಾಗಳ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಇದೊಂದು ಅದೃ ಷ್ಟದ ಜಾಗ. ಪುಣ್ಯ ಕ್ಷೇತ್ರದ ಊರು. ಅಪ್ಪಾಜಿಗೂ ಕರಾ ವಳಿ ಶ್ರೇಷ್ಠವಾದ ಜಾಗ. ರಥಸಪ್ತಮಿ, ಮಿಡಿದ ಶ್ರುತಿ, ಆಸೆಗೊಬ್ಬ ಮೀಸೆಗೊಬ್ಬ ಸಮಯದಿಂದಲೇ ನಾನು ಇಲ್ಲಿಗೆ ಬರುತ್ತಿದ್ದೇನೆ. ಒಳ್ಳೆಯ ಮನಸ್ಸಿನ ಜನರು ಇಲ್ಲಿನ ವಿಶೇಷ. ಊಟ ತಿಂಡಿ ಕೂಡ ಡಿಫರೆಂಟ್ ಆಗಿರುತ್ತದೆ. ತುಳು ಸಿನೆಮಾ ಇಂಡಸ್ಟ್ರಿ ಬಗ್ಗೆ ತಮ್ಮ ಅಭಿಪ್ರಾಯ…
ತುಳು ಸಿನೆಮಾ ಮಾಡಬೇಕು ಎಂಬ ಬಗ್ಗೆನಾವೂ ಆಲೋಚನೆ ಮಾಡಿದ್ದೇವೆ. ಕನ್ನಡದ ಜತೆಗೆ ಇರುವ ತುಳು ಭಾಷೆಗೂ ಗೌರವ ನೀಡಬೇಕಾಗಿ ರುವುದು ನಮ್ಮ ಧರ್ಮ. ಹೀಗಾಗಿ ಮುಂದೆ ಆ ಅವಕಾಶ ಸಿಕ್ಕರೆ ಮಾಡುತ್ತೇನೆ. ಭಕ್ತಿ-ಪ್ರಕೃತಿಯ “ಕಾಂತಾರ’
ಕಾಂತಾರ ಚಿತ್ರದ ಯಶಸ್ಸು ಬಹುದೊಡ್ಡ ಬೆಳವಣಿಗೆ. ಯಾಕೆಂದರೆ ಒಂದು ಸಿನೆಮಾ ಬಗ್ಗೆ ದೇಶ-ವಿದೇಶದಲ್ಲಿಯೂ ಮಾತನಾಡು ತ್ತಾರೆ ಅಂದರೆ ಅದು ದೊಡ್ಡ ಬದಲಾವಣೆಯ ಅಲೆ. ಹೀಗಾಗಿ ಯಾವುದೇ ಸಿನೆಮಾ ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದು ದೇವರ ಅನುಗ್ರಹ ಅಷ್ಟೆ. ಹಲವು ವಿಶೇಷತೆಯ ಸೌಂದರ್ಯ ಕಾಂತಾರದಲ್ಲಿ ಇದೆ. ಭಕ್ತಿ, ಪ್ರಕೃತಿಯನ್ನು ಒಂದುಗೂಡಿಸಿದ ಕಾರಣ ಕಾಂತಾರ ವಿಶೇಷವಾಗಿ ಎದ್ದುಕಾಣುತ್ತಿದೆ ಎನ್ನುತ್ತಾರೆ ಶಿವರಾಜ್ ಕುಮಾರ್. - ದಿನೇಶ್ ಇರಾ