Advertisement
ಶನಿವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಸ್ನೇಹಿರೊಟ್ಟಿಗೆ ತೆರಳುವಾಗ ಅಪಘಾತ ಸಂಭವಿಸಿದ್ದು, ಬನ್ನೇರುಘಟ್ಟ ಅಪೋಲೊ ಆಸ್ಪತ್ರೆ ಶನಿವಾರ ರಾತ್ರಿ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದ ಹಿನ್ನೆಲೆ ವೈದ್ಯರು ಭಾನುವಾರ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಆನಂತರ ಪ್ರಜ್ಞಾಹೀನ ಸ್ಥಿತಿ (ಕೋಮಾ) ತಲುಪಿದ್ದರು. ವೆಂಟಿಲೇಟರ್ ಸಹಾಯದಿಂದ ಮಾತ್ರ ಉಸಿರಾಟ ನಡೆಸುತ್ತಿದ್ದರು. ಸೋಮವಾರವೂ ಆರೋಗ್ಯ ಚೇತರಿಕೆ ಕಾರಣ ಹಿನ್ನೆಲೆ ವೈದ್ಯರು ಮಧ್ಯಾಹ್ನ ಮತ್ತು ಸಂಜೆ ಎರಡು ಬಾರಿ ಅಧಿಕೃತ ಅಪ್ನಿಯಾ ಪರೀಕ್ಷೆ ನಡೆಸಿ ರಾತ್ರಿ 8.30ಕ್ಕೆ ಮೆದುಳು ನಿಷ್ಕ್ರಿಯಾ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
Related Articles
Advertisement
ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಅಂಗಾಂಗ ದಾನ ಶಸ್ತ್ರ ಚಿಕಿತ್ಸೆ, ಕಸಿ ಪ್ರಕ್ರಿಯೆಗಳು ನಡೆಯಲಿವೆ. ಅಪಘಾತ ಪ್ರಕರಣವಾಗಿರುವುದರಿಂದ ಪೊಲೀಸರ ಪ್ರಕ್ರಿಯೆ ಎಲ್ಲಾ ಮುಗಿದ ಬಳಿಕ ಮಂಗಳವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಮಾತನಾಡಿ, ಅಣ್ಣ ಮರಳಿ ಬರುವುದಿಲ್ಲ ಎಂಬ ಕಹಿ ಸತ್ಯ ತಿಳಿದು ಅವರ ಅಂಗಾಂಗಗಳನ್ನು ಸಮಾಜಕ್ಕೆ ಅರ್ಪಣೆ ಮಾಡಲು ನಿರ್ಧರಿಸಿದೆವು. ನೆರೆ ಪರಿಹಾರ, ಕೊರೋನಾ ಸಂಕಷ್ಟದ ವೇಳೆಯಲ್ಲಿ ಸಮಾಜಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ. ಸತ್ತ ಬಳಿಕವೂ ಅವರು ಸಮಾಜಕ್ಕೆ ನೆರವಾಗಲಿ ಎಂದು ಅವರ ಅಂಗಾಂಗಗಳನ್ನು ದಾನ ಮಾಡಿದ್ದೇವೆ. ಆ ರೀತಿಯಾದರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದುಃಖಿಸಿದರು.
ಏನಿದು ಆಪ್ನಿಯಾ ಪರೀಕ್ಷೆ:
ಮೆದುಳು ವೈಫಲ್ಯವಾದ ರೋಗಿಗೆ ಅಳವಡಿಸಿರುವ ಕೃತಕವಾಗಿ ಅಳವಡಿಸಿರುವ ಉಸಿರಾಟ ವ್ಯವಸ್ಥೆಯನ್ನು ತೆಗೆಯಲಾಗುತ್ತದೆ. ಆಗ ಸ್ವಾಭಾವಿಕವಾಗಿ ಉಸಿರಾಟ ನಡೆಯದಿದ್ದರೆ ಅಪ್ನಿಯಾ ಪಾಸಿಟಿವ್ ಎಂದು ಪರಿಗಣಿಸಿ ಮೆದುಳು ನಿಷ್ಕ್ರಿಯ ಎಂದು ಘೋಷಿಸಲಾಗುತ್ತದೆ. ಈ ರೀತಿ ಸಂಚಾರಿ ವಿಜಯ್ ಅವರಿಗೆ ಎರಡು ಬಾರಿ ಪರೀಕ್ಷೆ ನಡೆಸಿದ್ದು, ಇದರ ಜತೆಗೆ ಕೆಲವು ಪರೀಕ್ಷೆ ನಡೆಸಿ ಮೆದುಳು ನಿಷ್ಕಿçಯಾ ಎಂದು (ಬ್ರೇನ್ ಡೆತ್)ಘೋಷಿಸಲಾಗುತ್ತದೆ.