ಬೆಂಗಳೂರು: ದಿವಂಗತ ನಟ ಸಂಚಾರಿ ವಿಜಯ್ ಅವರಿಗೆ ಗೌರವ ಸಲ್ಲಿಸದ ಫಿಲಂ ಚೇಂಬರ್ ವಿರುದ್ಧ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್, ಸಿನಿಮಾ ನಿರ್ದೇಶಕ ಲಿಂಗದೇವ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಗಲಿದ ಸಿನಿ ಮಂದಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಫಿಲಂ ಚೇಂಬರ್ ನಲ್ಲಿ ಗುರುವಾರ (ಜೂನ್ 17) ಆಯೋಜಿಸಲಾಗಿತ್ತು. ಆದರೆ, ಇಲ್ಲಿ ಸಂಚಾರಿ ವಿಜಯ್ ಅವರ ಫೋಟೋ ಇರಲಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಚಂದ್ರಚೂಡ್, ನಿಮ್ಮ ಶ್ರದ್ಧಾಂಜಲಿ ಸಭೆಯಲ್ಲಿ ನನ್ನ ಗೆಳೆಯ ಸಂಚಾರಿ ವಿಜಯ್ ದೊಂದು ಭಾವಚಿತ್ರ ಇಡಲು ಅಸಾಧ್ಯವಾಯಿತೇ? ನಿಮಗೊಂದು ಧಿಕ್ಕಾರ ಎಂದಿದ್ದಾರೆ.
ಇನ್ನು ನಿರ್ದೇಶಕ ಲಿಂಗದೇವ್ರು ಕೂಡಾ ಸುದೀರ್ಘ ಬರವಣಿಗೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗತಿಸಿದವರು ರಾಷ್ಟ್ರಪ್ರಶಸ್ತಿ ವಿಜೇತ ನಟರು, ಅಂಗದಾನ ಮಾಡಿ ಮಾದರಿಯಾದವರು. ಸರ್ಕಾರವೇ ಸರ್ಕಾರಿ ಗೌರವ ನೀಡಿ ವಿದಾಯ ಹೇಳಿತ್ತು. ಹಾಗಿರುವಾಗ ಪ್ರಾತಿನಿಧಿಕ ಸಂಸ್ಥೆಯಲ್ಲಿ ಗೌರವ ಸಲ್ಲಿಸದೇ ಇರುವುದು ಅವರ ಕುಟುಂಬಕ್ಕೆ ತೋರಿದ ಅಗೌರವ ಎಂದಿದ್ದಾರೆ.
ಇನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇತ್ತೀಚಿಗಷ್ಟೆ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದರು. ಅವರ ಅಗಲಿಕೆಗೆ ರಾಜಕೀಯ ಹಾಗೂ ಸಿನಿಮಾ ನಾಯಕರು ಕಂಬಿನಿ ಮೀಡಿದರು. ಆದರೆ, ಫಿಲ್ಮಂ ಚೇಂಬರ್ ಮಾತ್ರ ವಿಜಯ್ ಅವರ ಫೋಟೊ ಇಡದೆ ಯಡವಟ್ಟು ಮಾಡಿಕೊಂಡಿದೆ. ಸಂಚಾರಿ ವಿಜಯ್, ರಾಷ್ಟ್ರಪ್ರಶಸ್ತಿ ವಿಜೇತ, ಫಿಲಂ ಚೇಂಬರ್,